ಉತ್ತಮ ಸಮಾಜಕ್ಕಾಗಿ

ರೈತ ಯೋಜನೆ ಅವಶ್ಯ ರಾಷ್ಟ್ರವ್ಯಾಪಿ ಪ್ರತ್ಯೇಕ : ರಾಜನಾಥ ಸಿಂಗ್

0

ಬೆಳಗಾವಿ,: tarunkranti ರೈತ ಯೋಜನೆ ಅವಶ್ಯ ರಾಷ್ಟ್ರವ್ಯಾಪಿ ಪ್ರತ್ಯೇಕ : ರಾಜನಾಥ ಸಿಂಗ್ ರೈತರ ಸಬಲೀಕರಣಕ್ಕೆ ದೇಶದಲ್ಲಿ ಪ್ರತ್ಯೇಕ ಹೊಸ ನೀತಿ ಹೊಂದುವುದು ಅವಶ್ಯಕವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಖಾಸಗಿ ಸಭಾಂಗಣದಲ್ಲಿ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪರಿಷತ್( National Convention) ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಇನ್ನೊಂದು ಬಾರಿ ಹಸಿರುಕ್ರಾಂತಿ (Green Revolution) ಆದರೂ ಸಹ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ರೈತರನ್ನು ಬಲಾಢ್ಯರನ್ನಾಗಿ ಮಾಡಲು ಒಂದು ರಾಷ್ಟ್ರೀಯ ಯೋಜನೆಯ ಅಗತ್ಯವಿದೆ ಎಂದು ರಾಜನಾಥ ಸಿಂಗ್ ಒತ್ತಿ ಹೇಳಿದರು.
ರೈತ ಯೋಜನೆ ಅವಶ್ಯ ರಾಷ್ಟ್ರವ್ಯಾಪಿ ಪ್ರತ್ಯೇಕ : ರಾಜನಾಥ ಸಿಂಗ್- Tarun kranti2003ರ ಅಟಲಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ತಾನು ಕೃಷಿ ಸಚಿವರಾಗಿದ್ದಾಗ ರೈತರಿಗೆ ಶೇ. ₹4ರ ಬಡ್ಡಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿ ಕೃಷಿ ಆಯೋಗ ರಚನೆ ಮಾಡಲಾಗಿತ್ತು ಎಂದು ಸ್ಮರಿಸಿಕೊಂಡರು. 21ನೇ ಶತಮಾನದಲ್ಲಿ ಭಾರತದ ಕೃಷಿ ಸಫಲತೆ ಹೆಚ್ಚುವ ನಿರೀಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕ ಮತ್ತು ಗೋವಾ ನಡುವಿನ ಕಳಸಾ ಮಹದಾಯಿ ಯೋಜನೆ ಜಾರಿಯ ಮಾತು ಕೇಳಿಬಂದರೂ ರಾಜನಾಥ ಸಿಂಗ್ ಅವರ ಗಮನ ಸೆಳೆಯಲಿಲ್ಲ. ಭಾರತೀಯ ಕೃಷಿಕ ಸಮಾಜದ ರಾಷ್ಟ್ರಾಧ್ಯಕ್ಷ ಡಾ.ಕೀಶನ್ ಬೀರ ಚೌಧರಿ, ಸಂಸದ ಡಾ. ಪ್ರಭಾಕರ ಕೋರೆ, ಸುರೇಶ ಅಂಗಡಿ, ಪ್ರಲ್ಹಾದ ಜೋಶಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

belgaumnews  Farmers plan need nation wide: Rajnath Singh

Leave A Reply

 Click this button or press Ctrl+G to toggle between Kannada and English

Your email address will not be published.