ಉತ್ತಮ ಸಮಾಜಕ್ಕಾಗಿ

ಸಕ್ಕರೆ ಕಾರ್ಖಾನೆಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

Farmers protest demanding action on sugar factories

0

ಬೆಳಗಾವಿ:(tarun kranti) ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮೋಸವಾಗುತ್ತಿದ್ದು ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಇನ್ನು ಹಲವು ರೈತರಿಗೆ ಬಾಕಿ ಹಣ ಪಾವತಿ ಆಗಬೇಕಿದ್ದು ಶೀಘ್ರ ಅದನ್ನು ಪಾವತಿಸಬೇಕು, ಹಾಗೂ ಶಿವಸಾಗರ ಶುಗರ್ಸ, ಅಗ್ರೋ ಪ್ರೊಡಕ್ಟ ಲಿಮಿಟೆಡ್ ಕಾರ್ಖಾನೆಗಳು ತಮ್ಮಲ್ಲಿ ಶೇರು ಹೊಂದಿದ ರೈತರಿಗೆ ಸುಮಾರ 9 ವರ್ಷಗಳಿಂದ ಲಾಭಾಂಶ ವಿತರಿಸಿಲ್ಲ ಆದ್ದರಿಂದ ಕೂಡಲೇ ಲಾಭಾಂಶವನ್ನು ನೀಡಬೇಕು ಇಲ್ಲದಿದ್ದರೆ ಶೇ.18 ರಷ್ಟು ಬಡ್ಡಿ ನೀಡಿ ಶೇರು ಹಣ ಹಿಂದಿರುಗಿಸಬೇಕೆಂದು ಇದೇ ಸಂಧರ್ಭದಲ್ಲಿ ರೈತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿದಗೌಡ ಮೊದಗಿ, ಜಯಪ್ಪ ಬಸರಕೋಡ, ದುಂಡಯ್ಯ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.Farmers protest demanding action on sugar factories

Leave A Reply

 Click this button or press Ctrl+G to toggle between Kannada and English

Your email address will not be published.