ಉತ್ತಮ ಸಮಾಜಕ್ಕಾಗಿ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ತೀವ್ರ ಪ್ರತಿಭಟನೆ

Farmers protest for various demands

0

ಬೆಳಗಾವಿ: (news belagaviಮಣ್ಣಿನ ಮಕ್ಕಳೆಂದು ಹೇಳಿಕೊಂಡು ಬೂಟಾಟಿಕೆ ಪ್ರದರ್ಶಿಸುತ್ತಿರುವ ರಾಜಕಾರಣಿಗಳು ನಾಟಕ ಬಿಡಬೇಕೆಂದು ರೈತರು ಆಗ್ರಹಿಸಿದ್ದಾರೆ. ರೈತರ ಬಹುದಿನಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ತೀವ್ರ ಪ್ರತಿಭಟನೆ- Tarun kranti
ರೈತರ ಬೆಳೆಯ ಸಾಲಮನ್ನಾ ಷರತ್ತುಬದ್ಧವಾಗಿ ಆಗಬೇಕು, ಸ್ರ್ತೀಶಕ್ತಿ, ಸ್ವ ಸಹಾಯ ಮತ್ತು ಧರ್ಮಸ್ಥಳ ಸಂಘಗಳಲ್ಲಿ ಮಹಿಳೆಯರು ಪಡೆದ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿಗೆ ತರಬೇಕು, ಕಬ್ಬಿನ ಬಾಕಿ ಬಿಲ್ ಬಡ್ಡಿ ಸಮೇತ ಕೊಡಿಸಬೇಕು, ಪ್ರಸಕ್ತ ವರ್ಷದ ಕಬ್ಬಿನ ಬಿಲ್ ಕನಿಷ್ಠ ₹3400 ನಿಗದಿಪಡಿಸಬೇಕು ಎಂಬ ಇತರ ಬೇಡಿಕೆಗಳನ್ನು ರೈತರು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಬೆಳಗಿನಿಂದ ಪ್ರತಿಭಟನೆ ಮುಂದುವರೆಸಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ತೀವ್ರ ಪ್ರತಿಭಟನೆ- Tarun kranti 2
ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಚೂನಪ್ಪ ಪೂಜಾರಿ, ಲಿಂಗರಾಜ ಪಾಟೀಲ, ಅಶೋಕ ಯಮಕನಮರಡಿ, ರವಿ ಸಿದ್ದಮ್ಮನವರ, ಭರಮು ಖೇಮಲಾಪುರೆ, ಮಲ್ಲಿಕಾರ್ಜುನ ರಾಮದುರ್ಗ, ಮಹಾದೇವ ಮಡಿವಾಳೆ, ಜಯಶ್ರೀ ಗುರನ್ನವರ, ಗೋಪಾಲ ಕುಕನೂರ, ವಿರೇಶ ಮಂಡೇದ, ಶಿವಾನಂದ ದೊಡ್ಡವಾಡ, ಮಂಜು ಪೂಜೇರ, ಪ್ರಕಾಶ ಪೂಜೇರಿ, ಮಹಾಂತೇಷ ಕಮತೆ ಮತ್ತಿತರರು ಹಾಜರಿದ್ದರು.

ಸಾವಿರಾರು ರೈತರು ಪ್ರತಿಭಟನೆ ಉದ್ದಕ್ಕೂ ಬಿಜೆಪಿ, ಜೆಡಿಎಸ್- ಕಾಂಗ್ರೆಸ್ ಪಕ್ಷಗಳನ್ನು ಅಮೂಲಾಗ್ರವಾಗಿ ರೈತರು ತರಾಟೆಗೆ ತೆಗೆದುಕೊಂಡರು. ನಂತರ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕುಮಾರಸ್ವಾಮಿ, ಎಚ್. ಡಿ. ದೇವೆಗೌಡ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.