ಉತ್ತಮ ಸಮಾಜಕ್ಕಾಗಿ

ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ

0

ಬೆಳಗಾವಿ:(tarunkranti) ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ  ಸೌಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದ ಬರಬೇಕಾದ ಕಬ್ಬಿನ ಬಾಕಿ ಬಿಲ್ ಪೂರ್ಣ ಬಿಡುಗಡೆ ಮಾಡದ್ದರಿಂದ ರೈತರು ಮತ್ತೆ ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ- Tarun krantiಮೂರನೇ ಬಾರಿ ಡಿಸಿ ಕಚೇರಿ ಎದುರು ಪ್ರತಿಭಟನೆ ಇಂದು ತಡರಾತ್ರಿ ಮುಂದುವರೆಸಿದರು.ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ- Tarun kranti 1 ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ- Tarun kranti 2
ಈ ಹಿಂದೆ ನಡೆಸಿದ ಎರಡು ಅಹೋರಾತ್ರಿ ಧರಣಿಗಳ ನಂತರ ಸುಮಾರು ₹70 ಲಕ್ಷ ಹಣ ಬಿಡುಗಡೆ ಮಾಡಿದ್ದ ಸಕ್ಕರೆ ಕಾರ್ಖಾನೆ ಇತರ ನೂರಾರು ರೈತರ ಕೋಟ್ಯಾಂತರ ಬಿಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಪಡಿಸಿದರು. ಎಡಿಸಿ ಡಾ. ಸುರೇಶ ಇಟ್ನಾಳ ರೈತರನ್ನು ಸಮಾಧಾನ ಪಡಿಸಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನು ಕರೆಯಿಸಿ ಸ್ಪಂದಿಸುವ ಭರವಸೆ ನೀಡಿದರು. ರೈತರು ಸ್ಥಳದಲ್ಲೇ ಅಡುಗೆ ತಯಾರಿಸಿ ಅಹೋರಾತ್ರಿ ಧರಣಿ ಮುಂದುವರೆಸಿದರು.
ಸ್ಥಳದಲ್ಲಿ ಅಂಬ್ಯುಲೆನ್ಸ್ ಸಹಿತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 ದಲಿತರ ಅಹೋರಾತ್ರಿ ಧರಣಿ

ಕಬ್ಬಿನ ಬಾಕಿಗೆ ರೈತರು; ಡಿಸಿಪಿ ಸೀಮಾ ವರ್ಗಾವಣೆಗೆ ದಲಿತರ ಅಹೋರಾತ್ರಿ ಧರಣಿ- Tarun kranti 3ದಲಿತ ಸಂಘಟನೆಗಳ ಅಹೋರಾತ್ರಿ ಧರಣಿ:ದಲಿತ ವಿರೋಧಿ ನಡೆ ಅನುಸರಿಸುತ್ತಿರುವ ಡಿಸಿಪಿ ಸೀಮಾ ಲಾಟಕರ ಅವರನ್ನು ವರ್ಗಾವಣೆಗೊಳಿಸಬೇಕೆಂದು ಎಲ್ಲ ದಲಿತಪರ ಸಂಘಟನೆಗಳ ಅಹೋರಾತ್ರಿ ಧರಣಿ ಮುಂದುವರೆಸಿದವು. ದಲಿತ ಯುವಕ ನಿಲಜಿಯ ಸಾಗರ ಕೋಲಕಾರ ಎಂಬಾತನನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದಲಿತರೂ ಸಹ ಧರಣಿ ಮುಂದುವರೆಸಿದರು. ಎಡಿಸಿ ಡಾ. ಸುರೇಶ ಇಟ್ನಾಳ ಸಮಾಧಾನಪಡಿಸಲು ಯತ್ನಿಸಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಂಕರ ಮಾರಿಹಾಳ, ಗಣಪತಿ ಗುಡಾಜ, ಇನ್ಸಪೆಕ್ಟರ್ ಜಾವೇದ ಮುಶಾಪುರಿ, ಎಸ್. ಪ್ರಶಾಂತ, ಜೆ. ಎಂ. ಕಾಲಿಮಿರ್ಚಿ ಸೇರಿದಂತೆ ಇತರರು ಬಂದೋಬಸ್ತ್ ಏರ್ಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.