ಉತ್ತಮ ಸಮಾಜಕ್ಕಾಗಿ

ಕ್ಷೇತ್ರದಗಳ ಸ್ಪರ್ಧೆಗೆ ಇಳಿದಿದ್ದಾರೆ.

Fields compete.

0

‘ಸತೀಶ’ ಬೆಳಗಾವಿ ಗ್ರಾಮೀಣದಿಂದ ಕಣಕ್ಕೆ

ಬೆಳಗಾವಿ:(news belgaum) ‘ಸತೀಶ್’ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸತೀಶ ಗ್ರಾಮೀಣ ಕ್ಷೇತ್ರದಲ್ಲಿ ಸೆಣಸಲಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸೋಲಿಸಿ ವಿಜಯ ಪತಾಕೆ ಹಾರಿಸುವೆ ಎಂದು ಸತೀಶ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದ ನಂತರ ಘೋಷಿಸಿದ್ದಾರೆ.
ಕಾರ್ಯಕರ್ತರು ಅವಸರಕ್ಕೆ ಬಿದ್ದು ಗೊಂದಲಕ್ಕೆ ಈಡಾಗಬಾರದು, ನೀವೆಂದುಕೊಂಡಂತೆ ಇವರು ಯಮಕನಮರಡಿ ಕ್ಷೇತ್ರ ಬಿಟ್ಟು, ಗ್ರಾಮೀಣಕ್ಕೆ ಬರುತ್ತಿರುವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅಲ್ಲ. ಇವರು ಟ್ಯಾಬ್ಲಾಯ್ಡ್ ಪತ್ರಿಕಾ ಸಂಪಾದಕ ಸತೀಶ ಗುಡಗನಟ್ಟಿ. ಗ್ರಾಮೀಣ ಕ್ಷೇತ್ರದಲ್ಲಿ ಸ್ವತಂತ್ರ (ಪಕ್ಷೇತರ) ಅಭ್ಯರ್ಥಿಯಾಗಿ ಇಂದು ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಹಣಬರ ಸಮಾಜದ, ವೃತ್ತಿಯಲ್ಲಿ ಪತ್ರಕರ್ತ ಸತೀಶ ತನ್ನ ಹತ್ತು ಸೂಚಕರೊಂದಿಗೆ ಸ್ಪರ್ಧೆ ಮಾಡುತ್ತಿದ್ದು, ತಮ್ಮ ಪ್ರತಿಸ್ಪರ್ಧಿಗಳಾದ ಲಕ್ಷ್ಮೀ ಹೆಬ್ಬಾಳಕರ, ಮನೋಹರ ಕಿಣೆಕರ, ಶಾಸಕ ಸಂಜಯ ಪಾಟೀಲ, ಶಿವನಗೌಡ ಪಾಟೀಲ, ಮೋಹನ ಮೋರೆ ಸೇರಿದಂತೆ ಇತರ ಅಭ್ಯರ್ಥಿಗಳೊಂದಿಗೆ ಸತೀಶ ಸೆಣಸಲಿದ್ದಾರೆ.

ಬೆಳಗಾವಿ ದಕ್ಷಿಣಕ್ಕೆ JDSನಿಂದ ಮಹೇಶ ಕುಗಜಿ ಸೆಡ್ಡು

ಬೆಳಗಾ: ಬೆಳಗಾವಿ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಮಹೇಶ ಕುಗಜಿ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಮಹೇಶ ಕುಗಜಿ ಪಾಲಿಕೆ ಕ್ಷೇತ್ರ 12 ರ ಕೊಠಡಿಯಲ್ಲಿ ಚುನಾವಣಾಧಿಕಾರಿ ಕೃಷ್ಟೇಗೌಡ ತಾಯನ್ನವರ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಮುಕ್ತಾರ ಇನಾಮದಾರ ಮತ್ತು ಹಲವು ಕಾರ್ಯಕರ್ತರು ಉಪಸ್ತಿತರಿದ್ದರು.

ದಕ್ಷಿಣ ಕ್ಷೇತ್ರದ ‘ಕೆಜೆಪಿ’ ಅಭ್ಯರ್ಥಿಯಾಗಿ ಭೂಪಾಲ ಅತ್ತು ಕಣಕ್ಕೆಬೆಳಗಾವಿ: ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕನ್ನಡ ಹೋರಾಟಗಾರ ಭೂಪಾಲ ಅತ್ತು ಪಾಲಿಕೆ ದಕ್ಷಿಣ ಕ್ಷೇತ್ರ ಕೊಠಡಿ 12ರಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಶಹಾಪೂರ ನಿವಾಸಿ ಭೂಪಾಲ ಅತ್ತು ತಮ್ಮ‌ ಕನ್ನಡ ಹೋರಾಟ & ಚಟುವಟಿಕೆಗಳ ಮೂಲಕ ದಕ್ಷಿಣ ಕ್ಷೇತ್ರದಾದ್ಯಂತ ಚಿರಪರಿಚಿತರು. ಯುವ ಜನಾಂಗಕ್ಕೆ ಸಹಕಾರಿಯಾಗಿ, ಅನೇಕ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಭೂಪಾಲ ಈಗ ವಿಧಾನಸೌಧ ಮೆಟ್ಟಿಲು ಹತ್ತುವ ಕನಸು ಕಂಡಿದ್ದಾರೆ.

ಬೆಳಗಾವಿ ದಕ್ಷಿಣದಲ್ಲಿ ‘ಬಿಜೆಪಿ’ಗೆ ಬಂಡಾಯ ಬಿಸಿ: ಎನ್. ಎಸ್. ಶಂಕರಾಚಾರ್ಯ ಕಣಕ್ಕೆ

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎನ್. ಎಸ್. ಶಂಕರಾಚಾರ್ಯ ಇಂದು ಜನಬೆಂಬಲದ ಶಕ್ತಿಪ್ರದರ್ಶನದೊಂದಿಗೆ ಪಾಲಿಕೆ ಕ್ಷೇತ್ರ ಸಂಖ್ಯೆ 12ರ ಕೊಠಡಿಯಲ್ಲಿ ಚುನಾವಣಾಧಿಕಾರಿ ಕೃಷ್ಟೇಗೌಡ ತಾಯನ್ನವರ ಅವರಿಗೆ ನಾಮಪತ್ರ ಸಲ್ಲಿಸಿದರು.
ವಿಶ್ವಕರ್ಮ ಜನಾಂಗದ ಪ್ರತಿನಿಧಿಯಾಗಿರುವ, ಇಲ್ಲಿನ ಚನ್ನಮ್ಮ ನಗರದ ನಿವಾಸಿ ಬಿಜೆಪಿ ನಾಯಕ ಶಂಕರಾಚಾರ್ಯ ಸಹ ದಕ್ಷಿಣ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದರು. ದಕ್ಷಿಣ ಕ್ಷೇತ್ರದಲ್ಲಿ ಸುಮಾರು 18,900 ರಷ್ಟು ವಿಶ್ವಕರ್ಮ ಜನಾಂಗದ ಮತ ಹೊಂದಿರುವ ಅವರು ಎಲ್ಲ ಓಟ್ ಬಾಚಿ ಕೊಳ್ಳಲು ಬಿಜೆಪಿ ಬಂಡುಕೋರ ಶಂಕರಾಚಾರ್ಯ ಸಜ್ಜಾಗಿದ್ದಾರೆ. ತನ್ನ ಜನರನ್ನು ಪ್ರತಿನಿಧಿಸಲು ಇಡೀ ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಳಗಾವಿಯಲ್ಲಿ ಅವಕಾಶ ಮಾಡಿಕೊಡಿ ಎಂದು ಕೇಳಿದರೂ, ನನಗೆ ಮಾತು ಕೊಟ್ಟು ಬಿಜೆಪಿ ನಾಯಕರು ಕೊನೆಗೆ ಮೋಸ ಮಾಡಿದರು ಎಂದು ಶಂಕರಾಚಾರ್ಯ ನೋವು ಹಂಚಿಕೊಂಡಿದ್ದಾರೆ.
ಬಿಜೆಪಿಗೆ ಈಗ ದಕ್ಷಿಣದಲ್ಲಿ ಬಂಡಾಯ ಬಿಸಿ ಕಾಡುತ್ತಿದೆ.
ನೇಕಾರರು, ಬ್ರಾಹ್ಮಣರು, ವಿಶ್ವಕರ್ಮರು, ಮರಾಠಿಗರು & ಸಾರ್ವಜನಿಕರು ನನ್ನ ಬೆನ್ನಿಗೆ ಇದ್ದಾರೆ, ನನ್ನ ಯಶಸ್ಸು ನಿಶ್ಚಿತ ಎಂದು ಶಂಕರಾಚಾರ್ಯ ಆಶಯ ವ್ಯಕ್ತಪಡಿಸಿದ್ದಾರೆ. ಮಾತು ಕೊಟ್ಟು ಕೈ ಕೊಟ್ಟ ಬಿಜೆಪಿ ಪಕ್ಷದ ನೀತಿಗೆ ಬೇಸತ್ತು ತಾನು ಬಂಡಾಯ ನಿಲ್ಲುತ್ತಿರುವುದಾಗಿ ಶಂಕರಾಚಾರ್ಯ ತಿಳಿಸಿದರು.

ಛೀ… ಅನಿಷ್ಠ ‘ರಾಹು’ಲ ಸಮಯ: ಸತೀಶ ಜಾರಕಿಹೊಳಿ ನಾಮಪತ್ರ

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ, ಹಾಲಿ ಶಾಸಕ ಸತೀಶ ಜಾರಕಿಹೊಳಿ ಇಂದು ಹುಕ್ಕೇರಿಯಲ್ಲಿ ‘ಅನಿಷ್ಠ ಕಾಲ’ ದಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಕಾಲಕ್ಕೆ ವೀರಕುಮಾರ ಪಾಟೀಲ, ಸತೀಶ ಪುತ್ರಿ ಪ್ರಿಯಾಂಕ ಸತೀಶ ಜಾರಕಿಹೊಳಿ ಸೇರಿ ಇತರ ಐವರು ಹಾಜರಿದ್ದರು. ಚುನಾವಣಾಧಿಕಾರಿ ಕವಿತಾ ಯೋಗಪ್ಪನವರ ನಾಮಪತ್ರ ಸ್ವೀಕರಿಸಿದರು.
ಛೀ..ಅನಿಷ್ಠ ಎನ್ನುವ ‘ರಾಹು’ ಕಾಲದಲ್ಲೇ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲುಸಿದ್ದು, ರಾಹು ಒಲಿಯುವನೇ ಇಲ್ಲ ಬೀಳುಸುವನೆ ಕಾಯ್ದು ನೋಡುವ ತವಕದಲ್ಲಿದ್ದಾರೆ ಸಾರ್ವಜನಿಕರು. ಪ್ರಬಲ ಪ್ರತಿಸ್ಪರ್ಧಿಗಳು ಯಮಕನಮರಡಿ ಕ್ಷೇತ್ರ ಕಣದಲ್ಲಿ ಇಲ್ಲದೇ ಇರುವುದರಿಂದ ಸತೀಶ ಜಾರಕಿಹೊಳಿ ‘one way’ ಆಗಿದೆ ಎಂಬ ವ್ಯಾಝ್ಯಾನದ ಮಧ್ಯೆ ಸತೀಶ ರಾಹುಕಾಲ ಆಯ್ದುಕೊಂಡಿರುವುದು ಸ್ಪಷ್ಠವಾಗಿದೆ. ಪೈಪೋಟಿ ನೀಡಬಲ್ಲ ಅಭ್ಯರ್ಥಿ ಕಣದಲ್ಲಿದ್ದರೆ ಅವರು ‘ರಾಹು’ ಕಾಲ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಎಂಬ ಪ್ರಶ್ನಾರ್ಥಕ ಚರ್ಚೆ ನಡೆದಿದೆ. ಪ್ರಬಲ ಪ್ರತಿಸ್ಪರ್ಧಿ ಇಲ್ಲದಿದ್ದರೆ ಯಾವ ಕಾಲದಲ್ಲಿ ತುಂಬುದರೆ ಏನಾಗುತ್ತದೆ ಸ್ವಾಮಿ ಎನ್ನುತ್ತಿದ್ದಾರೆ ಜನ. ಸತೀಶ ಜಾರಜಿಹೊಳಿ ಎದುರು ಬಿಜೆಪಿ ಅಭ್ಯರ್ಥಿ ಸ್ವತಃ ‘ಮಾರುತಿ’ ಅಷ್ಠಗಿ ಈ ಸಲವೂ ಕಣಕ್ಕಿಳಿದಿದ್ದರಿಂದ ‘ರಾಹು’ ಮಾರುತಿಗೇನು ತಟ್ಟಲಾರ ಎಂಬ ವಿನೋದ ವ್ಯಕ್ತವಾಗಿದೆ.

‘ಬಿ’ ಫಾರ್ಮ್ಗೆ ಪರ್ಯಾಯ ‘ಸಿ’ ಫಾರ್ಮ ಮೂಲಕ ನಾಮಪತ್ರ ಸಲ್ಲಿಸಿದ ಅಷ್ಫಾಕ್ ಮದಕಿ

ಬೆಳಗಾವಿ: ಅಭ್ಯರ್ಥಿಯೊಬ್ಬನಿಗೆ ‘ಬಿ’ ಫಾರ್ಮ ಕೊಟ್ಟು, ಆತ ನಾಮಪತ್ರ ಸಲ್ಲಿಸಿದ ಮೇಲೆ ಮತ್ತೊಬ್ಬ ಅಭ್ಯರ್ಥಿಗೆ ‘ಸಿ’ ಫಾರ್ಮ ಕೊಟ್ಟರೆ ಹೇಗಿರಬೇಡ…!? ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ನಿಂದ ನಿನ್ನೆ ಧರ್ಮರಾಜ ತಮ್ಮ ನಾಮಪತ್ರ ಸಲ್ಲಿಸಿ ಜೆಡುಎಸ್ ಅಧಿಕೃತ ಅಭ್ಯರ್ಥಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಇಂದು ಅದೇ ಕ್ಷೇತ್ರಕ್ಕೆ ಅಶ್ಫಾಕ ಮೆಡಕಿ ಅವರಿಗೆ ಜೆಡಿಎಸ್ ‘ಸಿ’ ಫಾರ್ಮ ನೀಡಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದ ಮತದಾರರು & ಕಾರ್ಯಕರ್ತರು ಈಗ ತೀವೃ ಗೊಂದಲಕ್ಕೆ ಒಳಗಾಗಿದ್ದಾರೆ. ಸಿ ಫಾರ್ಮ ಬಿ ಫಾರ್ಮಗಿಂತ ಹೆಚ್ಚು ಅಧಿಕೃತ ಟಿಕೇಟ್ ಎನ್ನಲಾಗುತ್ತದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸಹ ಜೆಡಿಎಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಜೆಡಿಎಸ್​ನ ಹಿರಿಯ ಮುಖಂಡ ಗುರುರಾಜ್ ಹುನಸಿನಮರದ ಅವರು ತಮ್ಮ ಪಕ್ಷದ ‘ಬಿ’ ಫಾರ್ಮ್ ನಿಂದ ನಾಮ ಪತ್ರ ಸಲ್ಲಿಸಿದರೆ, ಅದೇ ಪಕ್ಷದಿಂದ ಇನ್ನೊಬ್ಬ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯ ಅಲ್ತಾಫ್ ಕಿತ್ತೂರ ಅವರು ತಮ್ಮ ಪಕ್ಷದ ‘ಸಿ’ ಫಾರ್ಮ್ ಮೂಲಕ ನಾಮ ಪತ್ರ ಸಲ್ಲಿಸಿದ್ದಾರೆ.

ಬೆಳಗಾವಿ ಉತ್ತರಕ್ಕೆ ಸಂಭಾಜಿ ಪಾಟೀಲ ಸ್ಪರ್ಧೇ: ನಾಮಪತ್ರ ಸಲ್ಲಿಕೆ

ಬೆಳಗಾವಿ: ಎಂಇಎಸ್ ಮುಖಂಡ, ಹಾಲಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ಈಗ ತಮ್ಮ ಕ್ಷೇತ್ರವನ್ನೇ ಬದಲಾಯಿಸಿದ್ದು, ಕೊನೆಯದಿನ ಇಂದು ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದರು. ಕೊಠಡಿ ಕ್ಷೇತ್ರ ಸಂಖ್ಯೆ 11ರಲ್ಲಿ ಚುನಾವಣಾಧಿಕಾರಿ ಪಿ. ಎನ್. ಲೊಕೇಶ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸನ ಫಿರೋಜ್ ಸೇಠ್ ಮತ್ತು ಬಿಜೆಪಿಯ ಅನಿಲ ಬೆನಕೆ ನಡುವೆ ತುರುಸಿನ ಸ್ಪರ್ಧೇ ಎಂದು ವ್ಯಾಖ್ಯಾನಿಸುತ್ತಿದ್ದ ವೇಳೆಯೇ, ಇಬ್ಬರಿಗೂ ಟಾಂಗ್ ನೀಡುವ ಮತ್ತೊಬ್ಬ ಪ್ರಭಾವಿ ಈಗ ಉತ್ತರದಲ್ಲಿ ಇಳಿದಂತಾಗಿದೆ. ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಸಂಭಾಜಿ ಪಾಟೀಲ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣದಲ್ಲಿ ಪ್ರಭಾವಿ ಅಭ್ಯರ್ಥಿಗಳು: ರಣಾಂಗಣ ಸೃಷ್ಟಿ ಸಾಧ್ಯತೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಘಟಾನುಘಟಿಗಳ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಸೋಲು ಗೆಲುವಿನ ಲೆಕ್ಕಚಾರ ಸೃಷ್ಟಿಸಿದೆ. ಕಾಂಗ್ರೆಸನಿಂದ ಲಕ್ಷ್ಮೀ ಹೆಬ್ಬಾಳಕರ, ಬಿಜೆಪಿಯಿಂದ ಸಂಜಯ ಪಾಟೀಲ, ಜೆಡಿಎಸ್ ನಿಂದ ಶಿವನಗೌಡ ಪಾಟೀಲ, ಎಂಇಎಸ್ ನಿಂದ ಮನೋಹರ ಕಿಣೆಕರ & ಸ್ವತಂತ್ರವಾಗಿ ಮೋಹನ ಮೋರೆ ಸ್ಪರ್ಧೆಗಿಳಿದಿದ್ದಾರೆ.

ಆದರೆ ಎಲ್ಲ ಐದೂ ಅಭ್ಯರ್ಥಿಗಳು ರಾಜಕೀಯ ವರ್ಚಸ್ಸಿನ, ಜನಬೆಂಬಲ ಹೊಂದಿರುವ ಅಭ್ಯರ್ಥಿಗಳೇ. ಸಂಜಯ ಪಾಟೀಲ ಹಾಲಿ ಶಾಸಕರಾದರೆ, ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸನ ಮಹಿಳಾ ರಾಜಕಾರಣಿಯಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಂಡ ಲಕ್ಷ್ಮೀ ಹೆಬ್ಬಾಳಕರ ಈಗ ಗೆಲ್ಲುವ ಹಾದಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅತೃಪ್ತ ಕಾಂಗ್ರೆಸ್ ನಾಯಕ ಹಾಲಿ ಜೆಡಿಎಸ್ ಅಭ್ಯರ್ಥಿ ಶಿವನಗೌಡ ಪಾಟೀಲ ಎಲ್ಲರಿಗೂ ಪರಿಚಿತ ಪ್ರಭಾವಿ ನಾಯಕ ಜತೆಗೆ ರಾಜಕೀಯ ನೇತಾರ ಸತೀಶ ಜಾರಕಿಹೊಳಿ ಆಶೀರ್ವಾದ ಇರುವ ಅಭ್ಯರ್ಥಿಯಾದ್ದರಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರ ರಣರಂಗವಾಗಿ ಮಾರ್ಪಾಡಾಗಲಿದೆ.

ಬೆಳಗಾವಿ ‘ಉತ್ತರ’: ಫಿರೋಜ್ ಸೇಠ್ ನಾಮಪತ್ರ, ವಿಶ್ವಾಸದ ನಗೆ

ಬೆಳಗಾವಿ: ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಮಹಾನಗರ ಪಾಲಿಕೆ ಚುನಾವಣಾಧಿಕಾರಿ ಕಚೇರಿಯಲ್ಲಿ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಸಹೋದರ ರಾಜು ಸೇಠ್ ಅವರೊಂದಿಗೆ ತೆರಳಿ ಇಂದು ಮಧ್ಯಾಹ್ನ ತಮ್ಮ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಪಿ. ಎನ್. ಲೊಕೇಶ್ ನಾಮಪತ್ರ ಸ್ವೀಕರಿಸಿದರು. ಡಾ. ಅಂಬೇಡ್ಕರ್ ರಸ್ತೆಯಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಫಿರೋಜ್ ಸೇಠ್ ನಾಮಪತ್ರ ಸಲ್ಲಿಸಿ, ನನ್ನ ಅಭಿವೃದ್ಧಿ ಕಾರ್ಯಗಳೇ ನನ್ನ ಯಶಸ್ಸಿಗೆ ಕಾರಣವಾಗುತ್ತವೆ ಎಂದು ವಿಶ್ವಾಸದ ನಗೆ ಬೀರಿದರು.

Leave A Reply

 Click this button or press Ctrl+G to toggle between Kannada and English

Your email address will not be published.