ಉತ್ತಮ ಸಮಾಜಕ್ಕಾಗಿ

ಬೆಂಕಿ ಇಟ್ಟ ಕಿರಾತಕರು

Fire bearers

0

ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿರುವ ಕಿರಾತಕ ಘಟನೆ ನಗರದಲ್ಲಿ ಇಂದು ನಡೆದಿದೆ.
ಜಾಧವ ನಗರದ ಮನೆಗಳ ಎದುರು ನಿಲ್ಲಿಸಿದ್ದ 7 ಕಾರುಗಳಿಗೆ ಇಂದು (ಬುಧವಾರ) ಬೆಳಂಬೆಳಿಗ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕಾರೊಂದರಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳು ಈ  ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತುರ್ತು ಸಂದೇಶ ಪಡೆದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.

ದುಷ್ಕರ್ಮಿಗಳನ್ನು ಬಂಧಿಸಲು ಬೆಳಗಾವಿ ಪೊಲೀಸ್ ಕಮೀಷನರ್ ಡಿ.ಸಿ ರಾಜಪ್ಪಾ ತಂಡ ರಚನೆ ಮಾಡಿದ್ದಾರೆ.
ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಿಡಿಗೇಡಿಗಳ ಗುರುತು ಪತ್ತೆ ಆಗಿದ್ದರೂ, ಪ್ರಕರಣ ಮುಚ್ಚಿ ಹಾಕುವ ರಾಜಕೀಯ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.