ಉತ್ತಮ ಸಮಾಜಕ್ಕಾಗಿ

ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

First place in quiz competition

0

ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ತಂಡದೊಂದಿಗೆ ಪ್ರಾಚಾರ್ಯ ನಿರ್ಮಲಾ ಗಡಾದ ಸೇರಿದಂತೆ ಮೊದಲಾದವರನ್ನು ಕಾಣಬಹುದು)
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ- Tarun krantiಬೆಳಗಾವಿ: (tarun kranti)ಹುಬ್ಬಳ್ಳಿಯ ದೇಶಪಾಂಡೆ ಶಿಕ್ಷಣ ಸಂಸ್ಥೆವತಿಯಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ವಿತ್ತ ಸಮರ್ಥ-2018 ರಸಪ್ರಶ್ನೆ ಸ್ಪರ್ಧೆಯಲ್ಲಿ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸದರಿ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಒಂದು ತಂಡವು ಪ್ರಥಮ ಸ್ಥಾನವನ್ನು ಮತ್ತು ಎರಡು ತಂಡಗಳು ತೃತಿಯ ಸ್ಥಾನವನ್ನು ಪಡೆದಿದ್ದಾರೆ.ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಮಂಜುನಾಥ ಸತ್ತಿಗೇರಿ, ರಂಜಿತ ಪಾಟೀಲ, ಅಶೋಕ ಅಂಕಲಗಿ, ಶ್ರೀಕಾಂತ ರಾಥೋಡ, ಹಾಗೂ ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಅಂಕಿತಾ ಹಿರೇಮಠ, ಸುಜಯ ವಡಗಾವೆ, ಸುದರ್ಶನ ಪಾಟೀಲ, ಸಂದೀಪ ವಜ್ರನ್ನವರ, ಪ್ರತೀಕ್ಷಾ ಹಾವಳ, ಪಾರ್ವತಿ ಸಾಗರೆ, ಐಶ್ಚರ್ಯ ತುಬಾಕಿ ಮತ್ತು ರಾಗಿಣಿ ಮಾಲಮರ್ಡಿ ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರಮನ್‍ರಾದ ಶ್ರೀ ಜಗದೀಶ ಎ. ಸವದತ್ತಿ, ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲಾ ಗಡಾದ ಮತ್ತು ಶಿಕ್ಷಕ-ಶಿಕ್ಷಕರೇತರ ಹಾಗೂ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.( belgaum)

First place in quiz competition

ಉಚಿತ ಕಣ್ಣು ತಪಾಸಣೆ ಶಿಬಿರ
ಬೆಳಗಾವಿ.: ಇಲ್ಲಿಯ ಮೂರನೇಯ ಗೇಟ ಬಳಿವಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ಇಂದಿನಿಂದ ಜ. 31 ರವರೆಗೆ ಉಚಿತ ಕಣ್ಣು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅದಲ್ಲದೇ ಈ ಶಿಬಿರದಲ್ಲಿ ಕಣ್ಣಿನ ಪೊರೆಯ ಶಸ್ತ್ರಕ್ರಿಯೆಯನ್ನು ರಿಯಾಯತಿ ದರದಲ್ಲಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 0831-2413333 ಇಲ್ಲಿಮ ಸಂಪರ್ಕಿಸಲು ಕೋರಲಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.