ಉತ್ತಮ ಸಮಾಜಕ್ಕಾಗಿ

ಜನಪದ ಮಹಿಳೆಯರ ಸಂಸ್ಕøತಿ: ಡಾ.ಗುರುದೇವಿ ಹುಲೆಪ್ಪನವರಮಠ

Folk Women's Processor: Dr. Gurudevi Hulappanavaratam

0

ಬೆಳಗಾವಿ:(tarunkranti) ಜನಪದ ಸಾಹಿತ್ಯ ನಮ್ಮಗ್ರಾಮಸ್ಥ ಮಹಿಳೆಯರಿಂದ ರಚಿತವಾಗಿದ್ದು ಅವರ ಕೊಡುಗೆ ಅಪಾರವಾದದ್ದು. ಮಕ್ಕಳಿಂದ ಹಿಡಿದು ಮುಪ್ಪಿನಾವಸ್ಥೆವರೆಗಿನ ಜೀವಮಾನದಲ್ಲಿ ಆಗುಹೋಗುಗಳ ಕುರಿತು ವಿಶೇಷವಾಗಿ ಮಹಿಳೆ ಒಂದು ವಂಶದಿಂದ ಮತ್ತೊಂದು ಕುಟುಂಬದಜವಾಬ್ದಾರಿಯನ್ನು ವಿವಾಹಾನಂತರ ಯಾವರೀತಿ ನಿಭಾಯಿಸಬೇಕೆಂಬ ಸೂಕ್ಷ್ಮ ವಿಷಯಗಳು ಜಾನಪದ ಸಾಹಿತ್ಯದಲ್ಲಿ ಅತ್ಯಂತ್ಯ ಮಾರ್ಮಿಕವಾಗಿ ಕಂಡು ಬರುತ್ತದೆ ಎಂದು ಲಿಂಗರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಡಾ.ಗುರುದೇವಿ ಹುಲೆಪ್ಪನವರಮಠ ಅಭಿಪ್ರಾಯ ವ್ಯಕ್ತ ಪಡಿಸಿದರು.

ನಗರದ ಹಿಂದವಾಡಿಯ ಕ್ರಾಂತಿ ಮಹಿಳಾ ಮಂಡಳವು, ಇಲ್ಲಿಯ ಗೊಮಟೇಶ ವಿದ್ಯಾಪೀಠದಲ್ಲಿ ರವಿವಾರ 21 ರಂದುs ಸಂಕ್ರಾಂತಿ ಹಬ್ಬದ ನಿಮಿತ್ಯ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಮತ್ತು“ಜನಪದ ಮಹಿಳೆಯ ಸಂಸ್ಕøತಿ” ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಜನಪದ ಮಹಿಳೆಯರ ಸಂಸ್ಕøತಿ: ಡಾ.ಗುರುದೇವಿ ಹುಲೆಪ್ಪನವರಮಠ- Tarun krantiಮಹಿಳೆಯರಿಗಾಗಿ ಏರ್ಪಡಿಸಿದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ- ರತ್ನಶ್ರೀ ಗುಡೇರ , ದ್ವಿತೀಯ ಸ್ಥಾನ- ಭಾರತಿ ರತ್ನಪ್ಪಗೋಳ, ತೃತೀಯ ಸ್ಥಾನ-ಪದ್ಮಾ ಚೌಗಲೆ, ಹಾಗೂ ಸಮಾಧಾನಕರ ಬಹುಮಾನ- ಮಮತಾ ಅಂಟಿನ, ಪಾರ್ವತಿ ಢಂಗ ಪಡೆದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಮಂಗಲ ಮಠದ ಇವರು ಪ್ರಾಮುಖ್ಯತೆಯನ್ನು ವಿವರಿಸುತ್ತಾ. ಜೀವಿಗಳ ಶ್ರೇಯೋಭಿವೃದ್ಧಿಗೊಸ್ಕರ ಭೂಮಂಡಲದ ಈ ಒಂದು ವಿಶೇಷ ಬದಲಾವಣೆಯನ್ನು ನಾವೆಲ್ಲಾ ಸಂಕ್ರಾಂತಿ ಹಬ್ಬವನ್ನಾಗಿ ಆಚರಿಸುತ್ತಿದ್ದು ಪ್ರತಿಯೊಬ್ಬ ವ್ಯಕ್ತಿಯೂ ಸಹ ತನ್ನ ಜೀವನದಲ್ಲಿ ತನ್ನ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೋಸ್ಕರ ಬದಲಾವಣೆಗಳನ್ನು ಅಳವಡಿಸಿಕೊಂಡು ಸಾರ್ಥಕಜೀವನ ನಡೆಸಬೇಕೆಂದರು.ಸಹಕಾರ್ಯದರ್ಶಿ ಪುಷ್ಪಾ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದೀಪ್ತಿ ಕಾಗವಾಡ ಮತ್ತು ದರ್ಶನಾ ನಿಲಜಗಿಯವರ ಪ್ರಾರ್ಥನಾ ಗೀತೆಯೊಂದಿಗೆ. ಪ್ರೇಮಲತಾ ಬಡವನ್ನವರ ಸ್ವಾಗತಿಸಿದರು. ಅಕ್ಷತಾ ಪಾಟೀಲ,ವಡಗಾವಿಯ ಸುಪ್ರಸಿದ್ಧ ಬಂಗಾರದ ವ್ಯಾಪಾರಸ್ಥರಾದ ಅಮಿತ ವೆರ್ಣೆಕರ ಕಾರ್ಯಕ್ರಮದ ಪ್ರಾಯೋಜಕತೆಯನ್ನು ವಹಿಸಿದ್ದರು. ಪ್ರಿಯಂಕಾ ಪತ್ತಾರ ನಿರೂಪಿಸಿದರು. ರಾಜಶ್ರೀ ಅಡ್ಡಣಗಿ ವಂದಿಸಿದರು. (belgaum)

Folk Women’s Processor: Dr. Gurudevi Hulappanavaratam

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.