ಉತ್ತಮ ಸಮಾಜಕ್ಕಾಗಿ

ದೌರ್ಜನ್ಯಕ್ಕೆ ಒಳಗಾಗಿದ್ದ, ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಮನವಿ

news belagavi

0

ಬೆಳಗಾವಿ:(news belgaum) ಅತ್ಯಾಚಾರ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದ, ಆ ನಂತರ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ ವಿವಾಹಿತ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಹುಂಚಾನಟ್ಟಿ ಮಹಿಳೆಯರ ಬಳಗ ಇಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಅವರನ್ನು ಒತ್ತಾಯಿಸಿತು.
ಅಕಾಲಿಕ ಮರಣಕ್ಕೆ ತುತ್ತಾದ ಖಾನಾಪುರ ತಾಲೂಕು ಕಕ್ಕೇರಿ ಗ್ರಾಮದ ಫ್ಲೋರಿನಾ(32) ಎಂಬ ಮಹಿಳೆ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೊನೆಗೆ ಅನಾರೋಗ್ಯದಿಂದ ಸತ್ತಳು ಎಂಬ ಬಗ್ಗೆ ಅಲೋಕಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಕಕ್ಕೇರಿಯ ಫಾಸ್ಕಲ್ ಡಿಸೋಜಾ ಎಂಬಾತನನ್ನು ಮದುವೆಯಾಗಿದ್ದ ದಿ. ಫ್ಲೋರಿನಾ ಮೂವರು ಮಕ್ಕಳ ತಾಯಿಯಾಗಿದ್ದಳು. ಮದುವೆ ಆದಂದಿನಿಂದ ಆಕೆಯ ಪತಿ & ಕುಟುಂಬಸ್ಥರಿಂದ ಸತತ ದೌರ್ಜನ್ಯಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಅವಳು ಸಾಯುವ ಮೊದಲು ನಗರದ ಶಾರದಾ ಮಾತಾ ಸ್ವಾದಾರ ಕೇಂದ್ರದಲ್ಲಿ ತನಗಾದ ಅನ್ಯಾಯದ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಬಗ್ಗೆ ಐಜಿಪಿ ಅವರ ಗಮನ ಸೆಳೆಯಲಾಯಿತು. ಅದಲ್ಲದೇ ಆಕೆಯ ಪತಿಯ ಸ್ನೇಹಿತನೊಬ್ಬ ಮೃತ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಗಂಭೀರ ವಿಚಾರವನ್ನೂ ಮೃತ ಮಹಿಳೆ ಹೇಳಿಕೆಯಲ್ಲಿ ದಾಖಲಿಸಿರುವುದಾಗಿ ಐಜಿಪಿ ಗಮನಕ್ಕೆ ತರಲಾಯಿತು. ಪ್ರಕರಣದ ವಿಸ್ಕೃತ ತನಿಖೆ ನಡೆಸಲಾಗುವುದು ಎಂದು ಐಜಿಪಿ ಅಲೋಕಕುಮಾರ ಭರವಸೆ ನೀಡಿದರು.
ಕ್ಲಾರಾ ಪೇರಿರಾ, ಅನಿತಾ ಡಿಸೋಜ, ಹೆಲಿನಾ ಲೀಮಾ, ಮೇರಿ ಬುತೆಲೊ, ಮಾನಸಿ ಅನಗೋಳಕರ, ನಿಶಾ ಹವಳ ಮತ್ತಿತರರು ಮನವಿ ಸಲ್ಲಿಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರರೆಡ್ಡಿ ಅವರಿಗೂ ಮನವಿ ಸಲ್ಲಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.