ಉತ್ತಮ ಸಮಾಜಕ್ಕಾಗಿ

ಅರಣ್ಯ ಹುತಾತ್ಮರಿಗೆ ವಂದನೆ, ಕುಶಾಲತೋಪು

news belagavi

0

ಬೆಳಗಾವಿ:(news belgaum) ಜೀವಸಂಕುಲದ ಜೀವಾಳ ಪರಿಸರ ಕಾಯ್ದು ಬೆಳೆಸುವ ಕರ್ತವ್ಯದ ವೇಳೆ ಅಸುನೀಗಿದ ಅರಣ್ಯವೀರರ ಬಗ್ಗೆ ಅಪಾರ ಹೆಮ್ಮೆ ಮೂಡುತ್ತದೆ ಎಂದು ಬೆಳಗಾವಿ ವೃತ್ತದ ಸಿಸಿಎಫ್ ಪಿ. ಬಿ. ಕರುಣಾಕರ ತಿಳಿಸಿದ್ದಾರೆ‌. ಇಂದು ಅರಣ್ಯ ಇಲಾಖೆ ಆವರಣದಲ್ಲಿ ನಡೆದ ಅತ್ಯಾಕರ್ಷಕ‘ರಾಷ್ಟ್ರೀಯ ಅರಣ್ಯ ಹುತಾತ್ಮರ’ದಿನಾಚರಣೆ ಹಾಗೂ ಗೌರವ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು ಅರಣ್ಯ ರಕ್ಷಣೆ ಎನ್ಬುವುದು ಸರಕಾರದ ಆದ್ಯ ಕರ್ತವ್ಯಗಳಲ್ಲೊಂದಾಗಿದೆ. ಮಾನವ ಜೀವನದ ಏಳ್ಗೆಗಾಗಿ ಅರಣ್ಯ ಕಾಯ್ದು ಬೆಳೆಸುವ ಇಲಾಖೆ ಪ್ರಯತ್ನಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಹುತಾತ್ಮರ ಸ್ಮಾರಕಕ್ಕೆ ಸಿಸಿಎಫ್ ಪಿ. ಬಿ. ಕರುಣಾಕರ, ಕಮಾಂಡಂಟ್ ಜಗದೀಶ, ಸುಎಫ್ ಬಿ. ವಿ. ಪಾಟೀಲ, ಡಿಸಿಎಫ್ ಎಂ. ವಿ. ಅಮರನಾಥ, ಅಶೋಕ ಪಾಟೀಲ, ಎಸ್. ಸಿ. ಹಿರೇಮಠ, ಎಸ್. ಬಾಲಕೃಷ್ಣ, ನಿವೃತ್ತ ಸಿಸಿಎಫ್ ಬಿ. ಎನ್. ಪಾಟೀಲ, ನಿವೃತ್ತ ಡಿಸಿಎಫ್ ಡಿ. ಎನ್. ಅಗೋರೆ, ಎ. ಬಿ. ಮೋರಪ್ಪನವರ, ಪಿ. ಅಂಬೇಕರ, ಎಸ್. ಎಂ. ಸಂಗೊಳ್ಳಿ, ಶ್ರೀನಾಥ ಕಡೋಲಕರ, ಕಚೇರಿ ಗೆಜೆಟೆಡ್ ಮ್ಯಾನೇಜರ್ ಸಂತೋಷ ದೇಸಾಯಿ, ಎಸ್. ಎಸ್. ಪ್ಯಾಟಿ, ಶ್ರೀಕಾಂತ ಕುಂಬಾರ, ಎಂ. ಎ. ಕಿಲ್ಲೇದಾರ ಇತರರು ಹುತಾತ್ಮ ಸಾರಕಕ್ಕೆ ಹೂಗುಚ್ಛ ಇರಿಸಿ ಗೌರವ ಸಲ್ಲಿಸಿದರು. ನಗರದ ಕೆಎಸ್ ಆರ್ ಪಿ ವತಿಯಿಂದ ಅತ್ಯಾಕರ್ಷಕ ಬ್ಯಾಂಡ್ ವಾದನ ಹಾಗೂ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.