ಉತ್ತಮ ಸಮಾಜಕ್ಕಾಗಿ

ಮಹಾವಾಗ್ಮಿ ಅಟಲ್ ಜೀ ವಾಜಪೇಯಿ ಕಣ್ಮರೆ…! & ವಾಜಪೇಯಿ ನಡೆದು ಬಂದ ಹಾದಿ

news

0

ಬೆಳಗಾವಿ/ನವದೆಹಲಿ:(NEWS belgaum) ದೇಶದ ಅಪರೂಪದ ಮಾಜಿ ಪ್ರಧಾನಿ, ಸ್ನೇಹಜೀವಿ, ಕವಿ ಹಾಗೂ ವಿಮರ್ಷಕ, ರಾಜಕೀಯ & ಸಂಸದೀಯ ಮಹಾಪಟು ಅಟಲ್‌ ಬಿಹಾರಿ ವಾಜಪೇಯಿ ಇನ್ನಿಲ್ಲ. ಮಾಜಿ ಪ್ರಧಾನಿ, ಧೀಮಂತ ನಾಯಕ ಅಟಲ ಬಿಹಾರಿ ವಾಜಪೇಯಿ (93) ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಸಂಜೆ 5:05ರ ಸುಮಾರಿಗೆ ಅಸುನೀಗಿದ್ದು, ಸರಕಾರ ಅಧಿಕೃತವಾಗಿ ಪ್ರಕಟಿಸಿದೆ. ಕೃತಕ ಜೀವರಕ್ಷಕದ ಮೇಲೆ ಕಳೆದ 36 ಗಂಟೆಯಿಂದ ಜೀವ ಹಿಡಿದಿದ್ದ ಮಾಜಿ ಪ್ರಧಾನಿ ಅವರ ಸಾವಿನ ಸುದ್ದಿಯನ್ನು ಇಂದು ಸಂಜೆ 5:30ಕ್ಕೆ ಘೋಷಿಸಲಾಯಿತು.
ಸಂಜೆ 5:05 ಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊನೆಯುಸಿರೆಳೆದಿದ್ದು, ಏಮ್ಸ್ ಆಸ್ಪತ್ರೆ ಅಧಿಕೃತವಾಗಿ ಪ್ರೆಸ್ ಹೇಳಿಕೆ ನೀಡಿದೆ.
ಎರಡ್ಮೂರು ತಿಂಗಳಿಂದ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ದಿನದಿಂದ ದಿನಕ್ಕೆ ವಿಷಮ ಸ್ಥಿತಿಗೆ ಜಾರುತ್ತಿದ್ದರು. ಕಳೆದ ಒಂದು ವಾರದಿಂದಲಂತೂ ಚಿಂತಾಜನಕ ಸ್ಥಿತಿಯಲ್ಲಿದ್ದು, ಜೀವರಕ್ಷಕ ಸಾಧನಗಳನ್ನು ಅವರಿಗೆ ಅಳವಡಿಸಲಾಗಿತ್ತು.
ರಾಷ್ಟ್ರದಾದ್ಯಂತ ಗಣ್ಯಾತಿಗಣ್ಯ ರಾಜಕೀಯ ನಾಯಕರು ಏಮ್ಸ್‌ ಆಸ್ಪತ್ರೆಯತ್ತ ಇಂದು ಧಾವಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ನ್ಯಾಷನಲ್ ಕಾನ್‌ಫರೆನ್ಸ್‌ ಮುಖ್ಯಸ್ಥ ಫಾರೂಖ್‌ ಅಬ್ದುಲ್ಲಾ ಹಾಗೂ ಬಿಜೆಪಿ ಪಕ್ಷದ ಗಣ್ಯರು ಆಸ್ಪತ್ರೆಯತ್ತ ಆಗಮಿಸಿದರು.
ವಾಜಪೇಯಿ ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಉದ್ದೇಶಿತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಿ ಎಲ್ಲ ಪಕ್ಷದ ಕಾರ್ಯಕ್ರಮಗಳನ್ನು ಆಗಲೇ ರದ್ದು ಮಾಡಲಾಗಿದೆ.
ಸಾಗರದಾಚೆಯ ದೇಶಗಳೊಂದಿಗೆ ಭಾರತದ ಸ್ನೇಹ ವೃದ್ಧಿಸಲು ಅವರ ಕೊಡುಗೆ ಅಪಾರವಾಗಿತ್ತು. ವೈರಿ ದೇಶಗಳೊಡನೆ ಭಾರತ ವಿಷಮ ಗಳಿಗೆಗಳನ್ನು ಎದುರಿಸುತ್ತಿದ್ದಾಗ ಹಾಸ್ಯ ಚಟಾಕೆ & ಕವನದ ಮೂಲಕವೇ ತಿಳಿಗೊಳಿಸುವ ರಾಜನಿತಿಜ್ಞರಾಗಿದ್ದರು. ರಾಜಕೀಯ ಪಕ್ಷ ಪಂಗಡದಾಚೆ ಮಹಾರಾಜಕಾರಣಿಯಾಗಿ, 120 ಕೋಟಿ ಭಾರತೀಯರ ನಾಯಕನಾಗಿ ಉಳಿದ ಅಟಲ್ ಜಿ ಈಗ ಎಲ್ಲರನ್ನೂ ಬಿಟ್ಟು ಕಣ್ಮರೆಯಾಗಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸರಕಾರಿ ಕಚೇರಿಗಳಿಗೂ ಕೂಡ ರಜೆ ಘೋಷಿಸಲಾಗಿದೆ.

 ವಾಜಪೇಯಿ ನಡೆದು ಬಂದ ಹಾದಿ
ಮಹಾವಾಗ್ಮಿ ಅಟಲ್ ಜೀ ವಾಜಪೇಯಿ ಕಣ್ಮರೆ…! &  ವಾಜಪೇಯಿ ನಡೆದು ಬಂದ ಹಾದಿ- Tarun kranti 1
1951 – ಭಾರತೀಯ ಜನ ಸಂಘ್ ಪಕ್ಷದ ಸಂಸ್ಥಾಪನೆ
1957 – ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು
1957-77 – ಸಂಸತ್ ನಲ್ಲಿ ಭಾರತೀಯ ಜನಸಂಘ ಪಕ್ಷದ ನಾಯಕನಾಗಿದ್ದು
1962 – ರಾಜ್ಯ ಸಭೆಯ ಸದಸ್ಯರಾಗಿದ್ದು
1966 – 67 – ಸರ್ಕಾರಿ ಖಾತ್ರಿ ಸಮಿತಿಯ ಚೇರ್ಮನ್ – ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1967-70 – ಸಾರ್ವಜನಿಕ ಖಾತೆ ಸಮಿತಿಗೆ ಚೇರ್ಮನ್ – ಭಾರತೀಯ ಜನಸಂಘ್ ಪಕ್ಷದ ಅಧ್ಯಕ್ಷರಾಗಿ
1971 – ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1977 – ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1977 – 79 – ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ
1977 – 80 – ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಾಗಿ
1980 – ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1980-86 – ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ
1980-84, 1986 ಹಾಗು 1993 – 96 – ಸಂಸತ್ ನಲ್ಲಿ ಬಿ ಜೆ ಪಿ ನಾಯಕ ರಾಗಿ
1986 – ರಾಜ್ಯಸಭಾ ಸದಸ್ಯರಾಗಿ
ಮಹಾವಾಗ್ಮಿ ಅಟಲ್ ಜೀ ವಾಜಪೇಯಿ ಕಣ್ಮರೆ…! &  ವಾಜಪೇಯಿ ನಡೆದು ಬಂದ ಹಾದಿ- Tarun kranti 21988 – 90 – ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ
1991 – ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1991-93 – ಸಾರ್ವಜನಿಕ ಖಾತೆ ಸಮಿತಿಯ ಚೇರ್ಮನ್ – ವಿದೇಶಾಂಗ ವ್ಯವಹಾರಗಳ ಸಮಿತಿ ಚೇರ್ಮನ್ ಹಾಗು ಲೋಕಸಭಾ ವಿರೋಧ ಪಕ್ಷದ ನಾಯಕ
1996- ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ
16 ಮೇ 1996 – 31 ಮೇ 1996 – ಭಾರತದ ಪ್ರಧಾನ ಮಂತ್ರಿಯಾಗಿ
1996-97 – ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ
1997-98 – ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್
1998 – ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು
1998-99 – ಭಾರತದ ಪ್ರಧಾನ ಮಂತ್ರಿಗಳು, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು
1999 – ಹದಿಮೂರನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
13 ಅಕ್ಟೋಬರ್ 1999 ರಿಂದ 13 ಮೇ 2004 ರವರೆಗೆ – ಭಾರತದ ಪ್ರಧಾನ ಮಂತ್ರಿಗಳಾಗಿ
2004 – ಹದಿನಾಲ್ಕನೇ ಲೋಕಸಭೆಗೆ 
2005 – ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ
2018 ಅಗಸ್ಟ್ 16 ಅಸ್ತಂಗತ
ದೊರೆತ ಪ್ರಶಸ್ತಿ
1992 ರಲ್ಲಿ, ಪದ್ಮ ವಿಭೂಷಣ.
1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ.
1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ.
1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ.
2015 ರಲ್ಲಿ ಭಾರತ ರತ್ನ ಪ್ರಶಸ್ತಿ.
2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ
ಅಟಲ್ ಬಿಹಾರಿ ವಾಜಪೇಯಿ ಜನನ ಡಿಸೆಂಬರ್ 25, 1924 ಅಟಲ್ ಅವರು ಹುಟ್ಟಿದ್ದು ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾಜಕಾರಣಿಯಾಗಿದರು ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿಯಾಗಿದ್ದರು
ಅಟಲ್ ಬಿಹಾರಿ ವಾಜಪೇಯಿ ರಾಜಕಾರಣ ನಿವೃತ್ತಿ ಘೋಷಣೆ
2005 ರಲ್ಲಿ –  ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದರು.
ಅಟಲ್ ಬಿಹಾರಿವಾಜಪೇಯಿ ಅಸ್ತಂಗತ – ಅಜಾತಶತ್ರು ಇನ್ನಿಲ್ಲ
ಅಜಾತಶತ್ರು, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ(93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
2018 ಅಗಸ್ಟ್ 16 ಅಸ್ತಂಗತ ////

Leave A Reply

 Click this button or press Ctrl+G to toggle between Kannada and English

Your email address will not be published.