ಉತ್ತಮ ಸಮಾಜಕ್ಕಾಗಿ

ಗಾಂಧೀಜಿ ಜೀವನ ಕುರಿತ ಧ್ವನಿ-ಬೆಳಕು ಪ್ರದರ್ಶನ ಗಾಂಧೀಜಿ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿ

Gandhji's simple life is a model for everyone

0

ಬೆಳಗಾವಿ:(news belgaum) ಮಹಾತ್ಮಾ ಗಾಂಧೀಜಿ ಅವರ ಆಲೋಚನೆ ಹಾಗೂ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹಿರಿಯ ನಾಟಕಕಾರ ಹಾಗೂ ಹಿರಿಯ ಸಾಹಿತಿ ಡಿ.ಎಸ್. ಚೌಗಲೆ ಅವರು ಹೇಳಿದರು.
ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ರವಿವಾರ (ಮಾ.11) ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಅವರ ಬದುಕು ಮತ್ತು ಸಾಧನೆ ಬಿಂಬಿಸುವ ಎಲ್.ಇ.ಡಿ ಆಧಾರಿತ ಧ್ವನಿ-ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಜೀವನ ಕುರಿತ ಧ್ವನಿ-ಬೆಳಕು ಪ್ರದರ್ಶನ ಗಾಂಧೀಜಿ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿ- Tarun kranti

ಗಾಂಧೀಜಿ ಜೀವನ ಕುರಿತ ಧ್ವನಿ-ಬೆಳಕು ಪ್ರದರ್ಶನ ಗಾಂಧೀಜಿ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿ

ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದಲೇ ಹೋರಾಟದ ಬದುಕನ್ನು ಕಂಡುಕೊಂಡಿದ್ದರು. ಮುಂದೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲೂ ಮಹಾತ್ಮಾ ಗಾಂಧೀಜಿ ಅವರು ಪ್ರಮುಖ ಪಾತ್ರ ವಹಿಸಿ, ಅಹಿಂಸಾತ್ಮಕವಾಗಿ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಸಫಲರಾದರು ಎಂದರು.
ಮಹಾತ್ಮಾ ಗಾಂಧೀಜಿ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಅವರ ನಡುವೆ ವಿಚಾರಗಳು ಬೇರೆ ಬೇರೆ ಇದ್ದರು. ಪರಸ್ಪರರ ಬಗ್ಗೆ ಗೌರವ ಹೊಂದಿದ್ದರು. ಅದನ್ನು ಇಂದಿನ ನಾಯಕರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಗಾಂಧೀಜಿ ಅವರು ತಂತ್ರಜ್ಞಾನವನ್ನು ಇತಮಿತವಾಗಿ ಬಳಸಬೇಕೆಂದು ಅಂದಿನ ಕಾಲದಲ್ಲಿಯೇ ಹೇಳಿದ್ದರು. ಇಂದಿನ ಜನಾಂಗದವರು ತಂತ್ರಜ್ಞಾನವನ್ನು ಇತಮಿತವಾಗಿ ಬಳಸಿ, ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಿರುವವರು ಪ್ರತಿಫಲ ಬಯಸಬಾರದು ಎಂದು ಗಾಂಧೀಜಿ ಅವರು ಹೇಳುತ್ತಿದ್ದರು. ಅದರಂತೆ ನಡೆದುಕೊಂಡರು. ಅದನ್ನು ಇಂದಿನ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್. ಮುನಿರಾಜು ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಈ ದೇಶದ ಬಹುದೊಡ್ಡ ಆಸ್ತಿಯಾಗಿದ್ದಾರೆ ಎಂದು ಹೇಳಿದರು.
ಗಾಂಧೀಜಿ ಜೀವನ ಕುರಿತ ಧ್ವನಿ-ಬೆಳಕು ಪ್ರದರ್ಶನ ಗಾಂಧೀಜಿ ಸರಳ ಬದುಕು ಪ್ರತಿಯೊಬ್ಬರಿಗೂ ಮಾದರಿ- Tarun kranti 1ಗಾಂಧೀಜಿ ಅವರನ್ನು ಕೀಳು ಮಟ್ಟದಲ್ಲಿ ಕಾಣುವ ಭಾವನೆ ಇಂದಿನ ಯುವಕರಲ್ಲಿದೆ. ಗಾಂಧೀ ಹಾಗೂ ಅಂಬೇಡ್ಕರ್ ಅವರು ಪರಸ್ಪರ ವೈರತ್ವವನ್ನು ಹೊಂದಿದ್ದರು ಎಂಬಂತೆ ಇಂದು ಬಿಂಬಿಸಲಾಗುತ್ತಿದೆ. ಯಾರದ್ದೋ ಮಾತು ಕೇಳಿ ಯುವಕರು ತಪ್ಪು ಕಲ್ಪನೆಯನ್ನು ಹೊಂದುವ ಬದಲು ತಾವೇ ಅಧ್ಯಯನ ನಡೆಸಿ, ನಿಜವಾದ ವಿಚಾರವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಾಂಧೀಜಿ ಅವರ ಪ್ರಭಾವ ಹಾಗೂ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಅವರು ಹೋರಾಟ ಮಾಡಿದರು. ಗಾಂಧೀಜಿ ಅವರ ಅಹಿಂಸಾ ಮಾರ್ಗ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇರುವ ಸುಲಭ ಮಾರ್ಗವಾಗಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ರಾಮನಗೌಡ ಕನ್ನೊಳಿ ಅವರು ಮಾತನಾಡಿ, ಗಾಂಧಿ ಅವರ ಬದುಕನ್ನು ಅರ್ಥಮಾಡಿಕೊಳ್ಳುವುದರಿಂದ ನಾವು ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಮಾತನಾಡಿ, ಸತ್ಯ, ಅಹಿಂಸೆ ಮತ್ತು ಹೋರಾಟ ಗಾಂಧಿ ಅವರ ಬದುಕಿನ ಪ್ರಮುಖ ಅಂಶಗಳು. ನಾವು ಇವುಗಳನ್ನು ಅರಿತುಕೊಂಡರೆ ಗಾಂಧೀಜಿ ಅವರನ್ನೇ ಅರಿತುಕೊಂಡಂತೆ ಎಂದು ಹೇಳಿದರು.
ಸತ್ಯಕ್ಕೆ ಸಾವಿಲ್ಲ ಎಂಬ ಮಾತು ಗಾಂಧೀಜಿ ಅವರಿಂದ ನಮಗೆ ಅರ್ಥವಾಗಿದೆ. ಸೂರ್ಯ, ಚಂದ್ರರಿರುವವರೆಗೆ ಮಹಾತ್ಮಾ ಗಾಂಧೀಜಿ ಅವರು ಅಮರರಾಗಿರುತ್ತಾರೆ ಎಂದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪುಂಡಲೀಕ ಅನವಾಲ, ಬಸವರಾಜ ಗಾರಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಕಲ್ಯಾಣ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಗಾಂಧೀಜಿ ಜೀವನ ಕುರಿತ ಧ್ವನಿ-ಬೆಳಕು ಪ್ರದರ್ಶನ:
ನಂತರ ನಡೆದ ಧ್ವನಿ-ಬೆಳಕು ಪ್ರದರ್ಶನದಲ್ಲಿ ಮಹಾತ್ಮಾ ಗಾಂಧೀಜಿ ಅವರ ಬದುಕು ಮತ್ತು ಸಾಧನೆಯನ್ನು ಅನಾವರಣ ಮಾಡಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅವರ ಹೋರಾಟ, ಗಾಂಧೀಜಿ ಅವರು ಭಾರತಕ್ಕೆ ಹಿಂದಿರುಗಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ದುಮುಕಿದ್ದು, ಜಲಿಯನ್ ವಾಲಾಬಾಗ ಹತ್ಯಾಕಾಂಡ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಭಾರತ ಸ್ವಾತಂತ್ರ್ಯ ಪಡೆದಿದ್ದು ಸೇರಿದಂತೆ ಅನೇಕ ವಿಷಯಗಳನ್ನು ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಯಿತು. Gandhji’s simple life is a model for everyone   .

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.