ಉತ್ತಮ ಸಮಾಜಕ್ಕಾಗಿ

ಗಡಿಬಿಡಿ ಜೀವನದಿಂದ ಹೊರಬಂದು ಮಕ್ಕಳೊಂದಿಗೆ ನಲಿದಾಡಬೇಕು :ಡಿಸಿಪಿ ಸೀಮಾ ಲಾಟಕರ

Get out of life and get out with the kids: DCP Seema Lotakar

0

ಬೆಳಗಾವಿ:(news belagavi) ಅತ್ಯುತ್ತಮ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ಖಾಯಿಲೆ ರಹಿತ ಜೀವನವನ್ನು ಸಾಗಿಸಬಹುದು. ಆರೋಗ್ಯಯುತ ಜೀವನಕ್ಕೆ ಔಷಧಿಗಳೇ ಪರಿಹಾರವಲ್ಲ. ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಧೋರಣೆ ಇದ್ದರೆ ಖಾಯಿಲೆಗಳಿಂದ ದೂರವಿದ್ದು ಒಳ್ಳೆಯ ಜೀವನ ಸಾಗಿಸಬಹುದು. ಆಹಾರ ಪದ್ದತಿ ಮತ್ತು ಜೀವನ ಶೈಲಿಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾದದ್ದು, ಗಡಿಬಿಡಿ ಜೀವನದಿಂದ ಹೊರಬಂದು ಮಕ್ಕಳೊಂದಿಗೆ ನಲಿದಾಡಬೇಕು ಎಂದು ಡಿಸಿಪಿ ಸೀಮಾ ಲಾಟಕರ ಅವರಿಂದಿಲ್ಲಿ ಹೇಳಿದರು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಧುಮೇಹ ಪೀಡಿತ ಮಕ್ಕಳಿಗಾಗಿ ದಿ. 16 ಮೇ 2018 ರಂದು ಏರ್ಪಡಿಸಿದ್ದ ಮಧುಮೇಹ ಮಕ್ಕಳಿಗಾಗಿ ಬೇಸಿಗೆಯ ವಿಶೇಷ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದÀರು. ಮುಗ್ದ ಮಕ್ಕಳ ಆರೋಗ್ಯದ ಕಾಳಜಿ ಕುರಿತು ಪಾಲಕರು ನಿಗಾವಹಿಸಿ ಕಾಪಾಡಬೇಕು. ಕೇವಲ ರ್ಯಾಂಕ ಹಿಂದೆ ಬೀಳದೇ ಅವರಲ್ಲಿ ಜೀವನದ ಕಲೆಯ ಅರಿವು ಮೂಡಿಸಬೇಕು. ಮಧಮೇಹ ಪೀಡಿತ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸಕಾರಾತ್ಮ ಮನೋಭಾವ ಬೆಳೆಸಬೇಕು ಎಂದ ಅವರು ಆಸ್ಪತ್ರೆಯ ಹಾಗೂ ಡಾ. ಎಂ. ವಿ. ಜಾಲಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಗಡಿಬಿಡಿ ಜೀವನದಿಂದ ಹೊರಬಂದು ಮಕ್ಕಳೊಂದಿಗೆ ನಲಿದಾಡಬೇಕು  :ಡಿಸಿಪಿ ಸೀಮಾ ಲಾಟಕರ- Tarun kranti 1ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಧುಮೇಹ ಕೇಂದ್ರದ ಮುಖ್ಯಸ್ಥರಾದ ಡಾ. ಎಂ. ವಿ. ಜಾಲಿ ಅವರು, ಚಿಕ್ಕ ಮಕ್ಕಳ ಆರೋಗ್ಯವನ್ನು ಸುಧಾರಿಸುವಲ್ಲಿ ಸದಾ ಚಿಂತಿಸುವ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಕನಸಿನ ಕೂಸಾದ ಮಧುಮೇಹ ಕೇಂದ್ರ ಇಂದು ಮಕ್ಕಳ ಮಧುಮೇಹ ಚಿಕಿತ್ಸೆ ಮತ್ತು ಕಾಳಜಿಯನ್ನು ಸಂಪೂರ್ಣವಾಗಿ ವಹಿಸುತ್ತಿದೆ. ದಿನದಿಂದ ದಿನಕ್ಕೆ ಮಧುಮೇಹಕ್ಕೊಳಗಾಗುವ ಮಕ್ಕಳ ಸಂಖ್ಯೆ ತೀವ್ರಗೊಳ್ಳುತ್ತಿದೆ. ಹೊಸದಾಗಿ ಪ್ರತಿ ವರ್ಷ ಸುಮಾರು 40 ಸಾವಿರ ಮಕ್ಕಳು ಮಧುಮೇಹ (ಟೈಪ್ 1) ದಿಂದ ಗುಂಪಿಗೆ ಸೇರುತ್ತಿದ್ದಾರೆÉ. ಈ ಕೇಂದ್ರದಲ್ಲಿ ಸದ್ಯಕ್ಕೆ 320 ಮಕ್ಕಳು ದಾಖಲಾಗಿದ್ದು, ಇದರಲ್ಲಿ ಸುಮಾರು 150 ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಇನ್ಸುಲಿನ್ ನೀಡಲಾಗುತ್ತಿದೆ. ಭಾರತದಲ್ಲಿಯೇ ಅತ್ಯಧಿಕ ಮಧುಮೇಹ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರ ಎಂದು ವಿವರಿಸಿದರು.
ಚಿಕ್ಕ ಮಕ್ಕಳ ಮಧುಮೇಹ ತಜ್ಞವೈದ್ಯೆ ಡಾ. ಸುಜಾತಾ ಜಾಲಿ ಅವರು ಮಾತನಾಡಿ, ಮಧುಮೇಹ ಪೀಡಿತ ಮಕ್ಕಳ ವೈದ್ಯಕೀಯ ವೆಚ್ಚ ಕುಟುಂಬಕ್ಕೆ ಆರ್ಥಿಕವಾಗಿ ದೊಡ್ಡ ಹೊರೆ. ಪ್ರತಿ ವರ್ಷ 4-8 ಸಾವಿರ ರೂ.ಇನ್ಸುಲಿನ್‍ಗೆ ಹಾಗೂ ಇನ್ನಿತರ ವೈದ್ಯಕೀಯ ವೆಚ್ಚಗಳಿಗಾಗಿ ಸುಮಾರು 30 ಸಾವಿರ ರೂ. ಖರ್ಚಾಗುತ್ತದೆ. ಅದರ ವೆಚ್ಚ ಭರಿಸಲಾಗದ ಬಡಕುಟುಂಬಗಳು ಕೈಚೆಲ್ಲಿ ಕುಳಿತುಕೊಳ್ಳುತ್ತವೆ. ಇದನ್ನರಿತ ಸ್ವತಃ ಮಧುಮೇಹ ಕೇಂದ್ರವು ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುತ್ತಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಮುಂದೆವರೆಸಲು ಸ್ಕಾಲರಶಿಪ್ ನೀಡಲಾಗುತ್ತದೆ ಎಂದು ತಿಳಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್. ಎಸ್. ಮಹಾಂತಶೆಟ್ಟಿ, ಮಾತನಾಡಿದರು. ಸಮಾರಂಭದಲ್ಲಿ ಕೆಎಲ್‍ಇ ವಿಶ್ವವಿದ್ಯಾಲಯದ ಡಾ. ವಿವೇಕ ಸಾವೋಜಿ, ಡಾ. ಜ್ಯೋತಿ ವಸೆದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ನಂದಿತಾ ಪವಾರ ನಿರೂಪಿಸಿದರು. ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತ ಮಧುಮೇಹವನ್ನು ನಿಂತ್ರಣದಲ್ಲಿಟ್ಟುಕೊಂಡಿರುವ ಸಂಪತ್ತ ಬುಲ್ಲಾ ಎಂಬ ಬಾಲಕ ಮತ್ತು ಸಬಾ ಮಕಾನದಾರ ಎಂಬ ಬಾಲಕಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಅಲ್ಲದೇ ಇದೇ ರೀತಿ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದವÀರಿಗೆ ಬಹುಮಾನ ನೀಡಲಾಯಿತು.
ಶಿಬಿರದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ರಸಪ್ರಶ್ನೆ, ಯೋಗ ಮತ್ತು ಧ್ಯಾನ, ಆಹಾರ ಸೇವನೆಯ ಪದ್ದತಿ, ಮಧುಮೇಹ ಶಿಕ್ಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮಾರು 160 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.