ಉತ್ತಮ ಸಮಾಜಕ್ಕಾಗಿ

ಕದ್ದು ಬಂದ ಗೋವಾ ಅಧಿಕಾರಿಗಳನ್ನು, ಹಿಡಿದು ಕೂಡ್ರಿಸಿದರು…! ತಪ್ಪೊಪ್ಪಿಗೆ!!

Goa officers stabbed to death Confession !!

0

ಬೆಳಗಾವಿ:(news belgaum) ಕಣಕುಂಬಿ ಕಳಸಾ ಯೋಜನಾ ಪ್ರದೇಶಕ್ಕೆ ಹೇಳದೆಕೇಳದೆ ಗೋವಾ ನೀರಾವರಿ ಅಧಿಕಾರಿಗಳ ತಂಡ ಭೆಟ್ಟಿ ನೀಡುವದು ಮುಂದುವರೆದಿದ್ದು, ಇಂದು ಬುಧವಾರ ಮಧ್ಯಾಹ್ನ ಮತ್ತೆ ಬಂದಿದ್ದ ಎಂಟು ಅಧಿಕಾರಿಗಳ ತಂಡವನ್ನು ‘ಹಿಡಿದು’ ಸಮೀಪದ ನಿರೀಕ್ಷಣಾ ಮಂದಿರಕ್ಕೆ ಕರೆತರುವಲ್ಲಿ ಅಲ್ಲಿಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗೋವಾ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನೀಯರ್(Executive Engineer)ದಿನೇಶ ಮಹಾಲಯ ಮತ್ತು ಅವರ ಇತರ ಏಳು ಅಧಿಕಾರಿಗಳು ಒಂದು ಸರಕಾರಿ ಜೀಪು ಮತ್ತು ಒಂದು ಎರ್ಟಿಗಾ ಕಾರಿನಲ್ಲಿ ಬಂದ ಅವರು ಮೊದಲು ಕಳಸಾ ನಾಲೆಯ ತಡೆಗೋಡೆ ಸ್ಥಳಕ್ಕೆ ಬಂದಾಗ ರಾಜ್ಯದ ಅಧಿಕಾರಿಗಳು & ಸಿಬ್ಬಂದಿ ಆಕ್ಷೇಪವೆತ್ತಿದ್ದಾರೆ. ಆಗ ಅವರೆಲ್ಲರೂ ಅಲ್ಲಿಂದ ಮಾವುಲಿ ದೇವಸ್ಥಾನದತ್ತ ಹೋಗಿದ್ದಾರೆ. ಅಷ್ಟರಲ್ಲಿ ಸಿಬ್ಬಂದಿಯೊಬ್ಬರು ಖಾನಾಪೂರ ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪಿಎಸ್ ಐ ಬಸನಗೌಡ ಪಾಟೀಲ ಯೋಜನಾ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರೊಳಗೆ ಸಿಬ್ಬಂದಿಯು ಮತ್ತೊಂದು ವಾಹನದಲ್ಲಿ ಮಾವುಲಿ ದೇವಸ್ಥಾನದ ಬಳಿ ಹೋಗಿ ಗೋವೆಯ ವಾಹನಗಳನ್ನು ಅಡ್ಡಗಟ್ಟಿ ವಾಹನಗಳಲ್ಲಿ ಒಬ್ಬೊಬ್ಬರು ಕುಳಿತು ಐಬಿ ಕಡೆಗೆ ನಡೆಯುವಂತೆ ತಿಳಿಸಿ ಕರೆತಂದಿದ್ದಾರೆ. ಆ ಹೊತ್ತಿಗೆ ಪಿಎಸ್ ಐ ಬಸನಗೌಡ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅನುಮತಿಯಿಲ್ಲದೇ ಮತ್ತೆ ಈ ರೀತಿ ಯೋಜನಾ ಪ್ರದೇಶಕ್ಕೆ ಬರುವದಿಲ್ಲವೆಂದು ಅಧಿಕಾರಿಗಳಿಂದ ಲಿಖಿತವಾಗಿ ಪತ್ರವೊಂದನ್ನು ಬರೆಸಿಕೊಂಡು ಅವರನ್ನು ಬಿಡುಗಡೆ ಮಾಡಲಾಗಿದೆ. ತದ ನಂತರ ಗೋವಾ ಅಧಿಕಾರಿಗಳು ಮರಳಿ ಪ್ರಯಾಣ ಬೆಳೆಸಿದರು.
ಕಳೆದ ವಾರ ಮಂಗಳವಾರವೂ ಗೋವೆಯ ತಂಡವೊಂದು ಯೋಜನಾ ಸ್ಥಳಕ್ಕೆ ಅಕ್ರಮವಾಗಿ ಭೆಟ್ಟಿ ನೀಡಿತ್ತು. ಕೆಲವೇ ದಿನಗಳಲ್ಲಿ ಮಹದಾಯಿ ನ್ಯಾಯಮಂಡಳಿಯು ತನ್ನ ತೀರ್ಪನ್ನು ನೀಡಲಿದ್ದು, ಗೋವೆಯ ಸರಕಾರ ಕರ್ನಾಟಕದ ವಿರುದ್ಧದ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದೆ ಎನ್ನಲಾಗಿದೆ. ತೀರ್ಪಿನ ವಿರುದ್ಧ ಸರ್ವೋನ್ನತ ನ್ಯಾಯಾಲಯಕ್ಕೆ ಮೊರೆಹೋಗಲು ಗೋವೆಯು ಸರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವದು ಇದರ ಹಿಂದಿನ ಸ್ಪಷ್ಟತೆ ತೋರಿಸಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.