ಉತ್ತಮ ಸಮಾಜಕ್ಕಾಗಿ

ಗೋವಾ ರಾಜಕೀಯ ಸಂಚಲನ: ಕಣಕುಂಬಿಗೆ ಗಪಚುಪ್ ಭೇಟಿ

Goa's political agility : Secret Visit to Kanakumbi

0

ವಿಶೇಷ ಬರಹ: ಅಶೋಕ್ ಚಂದರಗಿ

ಬೆಳಗಾವಿ: (news belagaviರಾಜ್ಯ ಸರಕಾರ & ಜಿಲ್ಲಾಡಳಿತಕ್ಕೆ ತಿಳಿಯದಂತೆ ಗೋವಾ ನಿಯೋಗ ಮತ್ತೆ ಕಣಕುಂಬಿ ಯೋಜನಾ ಪ್ರದೇಶಕ್ಕೆ ಆಗಮಿಸಿ ನಿರ್ಗಮಿಸಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ನದಿ ನೀರಿನ ಹಂಚಿಕೆಯ ವಿವಾದಕ್ಕೆ ಸಂಬಂಧಿಸಿ ನ್ಯಾ.ಮೂ.ಜೆ.ಎಂ.ಪಾಂಚಾಲ ನೇತೃತ್ವದ ನ್ಯಾಯಮಂಡಳಿ ಬರುವ ಆ. 20 ರ ಸುಮಾರಿಗೆ ತನ್ನ ತೀರ್ಪು ಪ್ರಕಟಿಸುವ ಹಿನ್ನೆಲೆ ಗೋವಾ ರಾಜಕೀಯ ವಲಯ ಚುರುಕುಗೊಂಡಿದೆ. ಕರ್ನಾಟಕ ಸರಕಾರಕ್ಕೆ, ಬೆಳಗಾವಿ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡದೇ ಗೋವೆಯ ಅಧಿಕಾರಿಗಳ ತಂಡವೊಂದು ನಿನ್ನೆ ಮಂಗಳವಾರ ಯೋಜನಾ ಸ್ಥಳ ಖಾನಾಪೂರ ತಾಲೂಕಿನ ಕಳಸಾ ನಾಲೆಗೆ ಭೆಟ್ಟಿ ನೀಡಿ ಹಿಂದಿರುಗಿದೆ.

ನ್ಯಾ. ಪಾಂಚಾಲ ಅವರ ನ್ಯಾಯಮಂಡಳಿ ತೀರ್ಪು ಬಂದಾಕ್ಷಣ ಮಲಪ್ರಭೆಗೆ ನೀರು ಸಿಕ್ಕೇ ಬಿಡುತ್ತದೆ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಮನೆಮಾಡಿದೆ. ಆದರೆ ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ನ್ಯಾಯಮಂಡಳಿಯು ರಾಜ್ಯಕ್ಕೆ ಎಷ್ಟೇ ಪ್ರಮಾಣದ ನೀರನ್ನು ಹಂಚಿಕೆ ಮಾಡಿದರೂ ಸಹ ಸದ್ಯ ಮಲಪ್ರಭೆಗೆ ಸೇರುವ ನೀರು ಅತ್ಯಲ್ಪ. ಕೇವಲ ಒಂದರಿಂದ ಒಂದೂವರೆ ಟಿಎಮ್ ಸಿ ನೀರು ಮಾತ್ರ! ಇದು ಕಟು ಹಾಗೂ ಕಹಿಯಾದ ವಾಸ್ತವ!! ಕುಡಿಯುವ ಉದ್ದೇಶಕ್ಕಾಗಿ 7.56 ಟಿಎಂಸಿ ನೀರನ್ನು ಹಂಚಿಕೆ ಮಾಡಬೇಕೆಂಬುವುದು ಬೇಡಿಕೆ. ಮುಂಬಯಿ ಕರ್ನಾಟಕದ ನಾಲ್ಕೂ ಜಿಲ್ಲೆಗಳ 13 ತಾಲೂಕಿನ ಜನರಿಗೆ ಕುಡಿಯುವ ನೀರಿಗೆ 7.56tmc ಪ್ರಮಾಣದ ನೀರು ಅವಶ್ಯಕವಾಗಿದೆಯೆಂಬುದು ಕರ್ನಾಟಕದ ವಾದವಾಗಿದೆ. ಇದರಲ್ಲಿ ಕಳಸಾ ನಾಲೆಯ 3.56 tmc ಮತ್ತು ಬಂಡೂರಿಯ 4 tmc ನೀರು ಸೇರಿದೆ. ಆದರೆ ನ್ಯಾಯಮಂಡಳಿಯು 7.56 tmc ಹಂಚಿಕೆ ಮಾಡಿದರೂ ಈ ಕೂಡಲೇ ನಾವು ಎಷ್ಟು ನೀರನ್ನು ಮಲಪ್ರಭೆಗೆ ಹರಿಸಲು ಸಾಧ್ಯ ಎಂಬುವುದು ಪ್ರಶ್ನೆ. ಕೇವಲ 1 ರಿಂದ 1.5 ಟಿಎಮ್ಸಿ ಮಾತ್ರ!!

ಕಳಸಾ ನಾಲೆಯ ಬಳಿ ನಿರ್ಮಿಸಲಾದ ತಡೆಗೋಡೆಯನ್ನು ತೆಗೆದುಹಾಕಿದರೆ ಮಲಪ್ರಭೆಗೆ ಸೇರುವ ನೀರು ಸುಮಾರು ಒಂದೂವರೆ tmc. ಇನ್ನುಳಿದ ಎರಡು tmc ನೀರು ಮಲಪ್ರಭೆಗೆ ಸೇರಬೇಕಾದರೆ ಕಳಸಾದಿಂದ ಇನ್ನೂ ಐದು ಕಿ.ಮೀ.ನಾಲೆ ನಿರ್ಮಿಸಬೇಕಲ್ಲದೇ ಒಂದು ಬ್ಯಾರೇಜ್ ಕಟ್ಟಬೇಕು. ಅರಣ್ಯ ಪ್ರದೇಶದಲ್ಲಿ ನಾಲೆ ನಿರ್ಮಿಸಲು ಕೇಂದ್ರದಿಂದ ಅನುಮತಿಯೂ ಬೇಕು. ನಾಲೆ ಮತ್ತು ಬ್ಯಾರೇಜ್ ನಿರ್ಮಾಣಕ್ಕೆ 200 ಕೋಟಿ ರೂ.ವೆಚ್ಚವಾಗಬಹುದೆಂದು ಅಧಿಕೃತ ಮೂಲಗಳ ಅಂದಾಜು. ಇನ್ನು ಬಂಡೂರಿ ನಾಲೆಯ ನೀರನ್ನು ಪಡೆಯುವದಂತೂ ದೂರದ ಮಾತು. ಕಳಸಾದಿಂದ 40 ಕಿ.ಮೀ.ದೂರವಿರುವ ಬಂಡೂರಿ ನಾಲೆಯ ನೀರನ್ನು ಮಲಪ್ರಭೆಗೆ ತರಬೇಕಾದರೆ 1000 ಕೋಟಿಯೇ ಬೇಕಾಗಬಹುದೇನೊ! ಸದ್ಯ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಬಹಳ ವರ್ಷಗಳ ನಂತರ ಇಂದಿನವರೆಗೆ 17 tmc ನೀರು ಸಂಗ್ರಹವಾಗಿದೆ. ಒಟ್ಟು ಸಾಮರ್ಥ್ಯ 37.7 tmc. ಈ ಡ್ಯಾಂ ನಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ನಿತ್ಯ 64 ಕ್ಯೂಸೆಕ್ಸ್ ನೀರು ಪೂರೈಕೆಯಾಗುತ್ತಿದೆ. ಇದನ್ನು ದ್ವಿಗುಣಗೊಳಿಸಲು ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಳೆದ ವರ್ಷವೇ ಠರಾವು ಪಾಸು ಮಾಡಿದೆ. ಅದರಂತೆ ಸವದತ್ತಿ ಬಳಿ ಮತ್ತೊಂದು ಪಂಪಿಂಗ್ ಸ್ಟೇಶನ್ ಸ್ಥಾಪನೆಯಾಗಲಿದೆ.

ಇನ್ನು ರೋಣ ಮತ್ತು ನರಗುಂದ ತಾಲೂಕುಗಳ 131 ಹಳ್ಳಿಗಳಿಗೂ ಮಲಪ್ರಭೆಯಿಂದಲೇ ನೀರು ಪೂರೈಕೆಯಾಗುತ್ತಿದೆ. ನಿತ್ಯ 46 MLD ನೀರನ್ನು ಪಂಪ್ ಮಾಡುವ ಕೇಂದ್ರವೊಂದು ಸವದತ್ತಿ ತಾಲೂಕಿನ ಗೊರವನಕೊಳ್ಳ ಬಳಿ ಕಳೆದ ಮಾರ್ಚನಲ್ಲಿ ಕಾರ್ಯಾರಂಭ ಮಾಡಿದೆ. ವರ್ಷಕ್ಕೆ 2.1 tmc ನೀರು ಈ ಹಳ್ಳಿಗಳಿಗೆ ಬೇಕಾಗುತ್ತದೆ. ಹುಬ್ಬಳ್ಳಿ ಧಾರವಾಡಗಳ ಸುಮಾರು 12 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಗೆ ಮಲಪ್ರಭೆಯೊಂದೇ ಮೂಲವಾಗಿದೆ. ಅಲ್ಲಿಯ ನೀರಸಾಗರ ಬತ್ತಿದೆ. ಬೆಣ್ಣೆ ಹಳ್ಳದ ನೀರು ಕುಡಿಯಲು ಯೋಗ್ಯವಲ್ಲವೆಂಬ ವರದಿಯಿದೆ. ಮಹದಾಯಿ ನ್ಯಾಯಮಂಡಳಿಯು ನಮಗೆ ಎಷ್ಟೇ ಪ್ರಮಾಣದ ನೀರನ್ನು ಹಂಚಿಕೆ ಮಾಡಿದರೂ ನಮ್ಮ ಪಾಲಿಗೆ ಅದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಿದೆ. ನಮ್ಮ ಎದುರೇ ಸಾಕಷ್ಟು ನೀರು ಹರಿಯುತ್ತಿದ್ದರೂ ಅದನ್ನು ತುಂಬಿಟ್ಟುಕೊಳ್ಳುವ ವ್ಯವಸ್ಥೆ ಇದೆ. ಮಹದಾಯಿ ವಿಷಯದಲ್ಲಿ ಗೋವೆಯ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡುತ್ತವೆ. ಕರ್ನಾಟಕದಲ್ಲಿ ಪರಸ್ಪರ ಕೆರಚಾಟದಲ್ಲಿ ತೊಡಗುತ್ತವೆ ಎಂಬ ಮಾತಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.