ಉತ್ತಮ ಸಮಾಜಕ್ಕಾಗಿ

ದಾಸಿಮಯ್ಯ ಜಯಂತಿ ಗ್ರಹಸ್ಥನಾಗಿ ಮೋಕ್ಷ ಪಡೆದ ಮಹಾನ ಪುರುಷ ದೇವರ ದಾಸಿಮಯ್ಯ : ಡಾ. ಶ್ಯಾಮಸುಂದರ ಕೋಚಿ

http://tarunkranti.news Goddess Dasimayya Jayanti is the goddess of salvation. Brilliant coach

0

ಬೆಳಗಾವಿ:(news belgaum)ಸನ್ಯಾಸಿಯಾಗಿ ಮೋಕ್ಷ ಪಡೆಯದೇ ಗೃಹಸ್ಥನಾಗಿಯೂ ಮೋಕ್ಷ ಪಡೆದುಕೊಳ್ಳಬಹುದು ಎಂದು ತೋರಿಸಿ ಕೊಟ್ಟ ಮಹಾನ ಪುರುಷ ದೇವರ ದಾಸಿಮಯ್ಯನವರು ಎಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಶ್ಯಾಮಸುಂದರ ಕೋಚಿ ಅವರು ಹೇಳಿದರು.
ನಗರದ ವಡಗಾಂವಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಮಾ.22) ಏರ್ಪಡಿಸಿದ್ದ ಆದ್ಯ ವಚನಾಕರ ದೇವರ ದಾಸಿಮಯ್ಯನವರ ಜಯಂತಿಯಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಶಿವ ಕೇವಲ ಒಂದೇ ಸ್ಥಳದಲ್ಲಿ ಇರದೇ ಎಲ್ಲ ಕಡೆಯೂ ಇರುತ್ತಾನೆ ಎಂದು ಹಲವು ವಾದ-ವಿಹಾದಗಳಲ್ಲಿ ಗೆದ್ದು ದೇವರ ದಾಸಿಮಯ್ಯನವರು ತಮ್ಮ ಜ್ಞಾನದ ಬಲವನ್ನು ಪ್ರದರ್ಶಿದ್ದರು ಎಂದು ಹೇಳಿದರು.
137 ವಚನಗಳನ್ನು ರಚಿಸಿ ಬಸವಣ್ಣವರರಿಂದ ಆದ್ಯ ವಚನಾಕರ ಎಂದು ಬಿರುದನ್ನು ಪಡೆದ ದೇವರ ದಾಸಿಮಯ್ಯನವರು ಕನ್ನಡದ ಮೊದಲ ವಚನಕಾರರಾಗಿದ್ದಾರೆ ಎಂದು ಹೇಳಿದರು.
ಮೂಢನಂಬಿಕೆಯ ವಿರುದ್ಧ ಹೋರಾಡಿ ಸಮಾಜದಲ್ಲಿ ಶಾಂತಿ ತಂದು ಕೊಟ್ಟ ದಾಸಿಮಯ್ಯನವರು ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ತಮ್ಮ ಜೀವನ ಕಳೆದರು ಎಂದು ಹೇಳಿದರು.
ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿ ನಮ್ಮ ನಾಡಿನ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಶ್ರಮಿಸಿದ ಮಹಾನ ಪುರುಷರ ಜಯಂತಿಯನ್ನು ಇಂದು ರಾಜ್ಯ ಸರ್ಕಾರ ಆಚರಿಸುತ್ತಿರುವುದು ತುಂಬಾ ಸಂತಷದ ಸಂಗತಿಯಾಗಿದೆ ಎಂದು ಹೇಳಿದರು.
ದೇವರ ದಾಸಿಮಯ್ಯನವರ ಜನ್ಮದಿನವನ್ನು ನೇಕಾರರ ದಿನವನ್ನಾಗಿ ಆಚರಿಸಲು ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಮತ್ತು ದೇವರ ದಾಸಿಮಯ್ಯನವರ ಜನ್ಮ ಸ್ಥಳವಾದ ಯಾದಗಿರಿ ಜಿಲ್ಲೆಯ ಮುದನೂರ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

News Belgaum-ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಗ್ರಹಸ್ಥನಾಗಿ ಮೋಕ್ಷ ಪಡೆದ ಮಹಾನ ಪುರುಷ ದೇವರ ದಾಸಿಮಯ್ಯ : ಡಾ. ಶ್ಯಾಮಸುಂದರ ಕೋಚಿಅಪರ ಜಿಲ್ಲಾಧಿಕಾರಿಗಳಾದ ಡಾ|| ಎಚ್.ಟಿ. ಬೂದೆಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮ ಜೀವನ ಅನುಭವದಿಂದ ವಚನಗಳನ್ನು ರಚಿಸಿದ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಕರಿಕರಾಗಿ ಬಾಳಬೇಕಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಸದಸ್ಯರಾದ ರಮೇಶ ಸೊಂಟಕ್ಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ವಿವಿಧ ಸಮಾಜದ ಮುಖಂಡರುಗಳಾದ ವಿನಯ ಮಾಳಗಿ, ವಾಸುದೇವ ಕಾಂಗಡೆ, ಈರಪ್ಪ ತಿಗಡಿ, ಗಜಾನನ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ :
ಇದಕ್ಕೂ ಮುಂಚೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷರಾದ ಬಸವರಾಜ ಚಿಕ್ಕಲದಿನ್ನಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಭಾವ ಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿಗಳಾದ ಎಚ್.ಟಿ. ಬೂದೆಪ್ಪ., ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ ಸೇರಿದಂತೆ ವಿವಿಧ ಸಮಾಜ ಮುಖಂಡರು ಪಾಲ್ಗೊಂಡಿದ್ದರು.
ದೇವರ ದಾಸಿಮಯ್ಯನವರ ಭವ್ಯ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಖಾಸಭಾಗ, ಭಾರತ ನಗರ, ಬಜಾರಗಲ್ಲಿ ಹಾಗೂ ತೆಗ್ಗಿನಗಲ್ಲಿ ಮಾರ್ಗವಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ತಲುಪಿತು. ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.Goddess Dasimayya Jayanti is the goddess of salvation. Brilliant coach

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.