ಉತ್ತಮ ಸಮಾಜಕ್ಕಾಗಿ

ಬಂಗಾರದ ಬಿಸ್ಕಿಟ್ಟುಗಳ ಜಾಲ ಮುಂಬೈ ಮುಲದ ವ್ಯೆಕ್ತಿ ಬಂದನ

Golden Biscuits Network is a Mumbai-based port

0

ಬೆಳಗಾವಿ;(news belgaum) 🙁tarun kranti)18/02/2018 ರಂದು ನಗರ ಪೊಲೀಸ್‍ರಿಂದ ದಾಳಿ; 95 ಲಕ್ಷ ಮೌಲ್ಯದ ಬಂಗಾರದ ಬಿಸ್ಕಿಟ್ಟುಗಳ ವಶ ; ಕಳ್ಳಸಂತೆಯಲ್ಲಿ ಬಂಗಾರ ಮಾರಾಟ ಮಾಡಲೆತ್ನಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ ಬಂಧನಮಾಡಿ ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರು ಬೆಳಗಾವಿ ನಗರದಲ್ಲಿ ಅಪರಾಧಿಕ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವಾಗ ಎಲ್ಲ ಬಂಗಾರದ ಬಿಸ್ಕಿಟ್ಟುಗಳ ಜಾಲ ಮುಂಬೈ ಮುಲದ ವ್ಯೆಕ್ತಿ ಬಂದನ- Tarun krantiಸಂಶಯಾಸ್ಪದ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮತ್ತು ವಿಚಾರಣೆ ಮಾಡಲು ನಗರದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಸೂಚನೆಯನ್ವಯ, ನಗರದ ಸಿಸಿಐಬಿ ಘಟಕದ ಪಿಐ ಶ್ರೀ ಎ ಎಸ್ ಗುದಿಗೊಪ್ಪ ಹಾಗೂ ಅವರ ಸಿಬ್ಬಂದಿಯವರು ರಾತ್ರಿ ನಗರದಲ್ಲಿ ಗಸ್ತು ನಿರ್ವಹಿಸುತ್ತಿರುವಾಗ ದಿನಾಂಕ.18/08/2018 ರಂದು ಮಧ್ಯರಾತ್ರಿ 12.30 ಗಂಟೆಗೆ ಎನ್‍ಎಚ್-4 ರಸ್ತೆಗೆ ಹೊಂದಿಕೊಂಡಿರುವ ಸಾಗರ ಹೊಟೇಲ್ ಹತ್ತಿರ ಒಬ್ಬ ವ್ಯಕ್ತಿಯು ಪೊಲೀಸ್‍ರನ್ನು ಕಂಡು ಸಂಶಯಾಸ್ಪದ ರೀತಿಯಲ್ಲಿ ಹಾಗೂ ತನ್ನ ಇರುವಿಕೆಯನ್ನು ಬಚ್ಚಿಡಲು ಪ್ರಯತ್ನಿಸುತ್ತ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಂಡಾಗ ಅವನನ್ನು ತಡೆದು ವಿಚಾರಣೆಗೊಳಪಡಿಸಿದಾಗ ಸದರಿಯವನು ಮುಂಬೈ ಮೂಲದ ಮೋಹನ ಪ್ರಭಾಕರ ದೇವಕರ (30 ವರ್ಷ) ಸಾ|| ಸಿ-15 ಡೆಮೋಟೋ ಕಂಪೌಂಡ್, ಬಾಂದ್ರಾ ವೆಸ್ಟ, ಮುಂಬಯಿ ಎಂದು ತನ್ನ ಹೆಸರು ಹೇಳಿದ್ದು, ಅವನÀನ್ನು ಚೆಕ್ ಮಾಡಲಾಗಿ ಅವನು ಕಳ್ಳಸಂತೆಯಲ್ಲಿ ಯಾವುದೇ ಪರವಾಣಿಗೆ ಇಲ್ಲದೇ ಅನಧೀಕೃತವಾದ ಬಂಗಾರ ಮಾರಾಟ ಮಾಡಲೆತ್ನಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಕಂಡು ಬಂದಿದ್ದು, ಅವನನ್ನು ದಸ್ತಗಿರಿ ಮಾಡಿ ಆತನ ಬಳಿ ಒಟ್ಟು ರೂ.95,15,000/- ಮೌಲ್ಯದ 3 ಕೆಜಿ. 5 ಗ್ರಾಂ ಬಂಗಾರದ ಮೂರು ಬಿಸ್ಕಿಟ್‍ನಂತಹ ತುಂಡುಗಳನ್ನು ಹಾಗೂ ಅವನ ಬಳಿ ಇದ್ದ ರೂ.15,000/- ಹಣವನ್ನು ಜಪ್ತಪಡಿಸಿಕೊಂಡಿದ್ದು ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇಷ್ಟೊಂದು ಮೊತ್ತದ ಅನಧೀಕೃತ ಬಂಗಾರನ್ನು ಜಪ್ತ ಪಡಿಸಿ ಕಳ್ಳ ಸಂತೆಯಲ್ಲಿ ಬಂಗಾರ ಮಾರಾಟ ಮಾಡುವ ವ್ಯಕ್ತಿಯನ್ನು ಮಾಲಿನ ಸಮೇತ ಬಂಧಿಸಿದ ಸಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಎ ಎಸ್ ಗುದಿಗೊಪ್ಪ ಹಾಗೂ ಅವರ ತಂಡದ ಎಎಸ್‍ಐ ಬಿ ಆರ್ ಮುತ್ನಾಳ, ಹಾಗೂ ಸಿಬ್ಬಂದಿ ಎಸ್ ಆರ್ ಮೇತ್ರಿ, ಶ್ರೀ ಬಿ ಎನ್ ಬಳಗನ್ನವರ, ಸಿ ಜೆ ಚಿನ್ನಪ್ಪಗೋಳ, ಎಂ ಎಂ ವಡೇಯರ, ಎ ಕೆ ಕಾಂಬಳೆ ಹಾಗೂ ಬಾಳಪ್ಪಾ ಇಂಗಳಗಿ, ಹರೀಶ ಸೊಗಲದ ರವರ ಈ ಕಾರ್ಯವನ್ನು ಡಾ|| ಡಿ ಸಿ ರಾಜಪ್ಪ, ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಶ್ರೀಮತಿ ಸೀಮಾ ಲಾಟ್ಕರ್ ಡಿಸಿಪಿ (ಕಾ&ಸು), ಶ್ರೀ ಮಹಾನಿಂಗ ಬಿ ನಂದಗಾಂವಿ ಡಿಸಿಪಿ (ಅ&ಸಂ), ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.Golden Biscuits Network is a Mumbai-based port

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.