ಉತ್ತಮ ಸಮಾಜಕ್ಕಾಗಿ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವೇಳಾಪಟ್ಟಿ

news belagavi

0

ಬೆಳಗಾವಿ: (news belagavi)ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6-8) ವೃಂದದ ನೇಮಕಾತಿಗಾಗಿ ಅಗಸ್ಟ 27 ರಂದು 1:3 ರಂತೆ ಆಯ್ಕೆ ಪಟ್ಟಿ ಪ್ರಕಟಿಸಿದ್ದು. ತಾತ್ಕಾಲಿಕ ವೇಳ ಪಟ್ಟಿಯನ್ನು ಮಾನ್ಯ ವಿಶೇಷಾಧಿಕಾರಿಗಳು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ರವರ ಹೊರಡಿಸಿದ್ದು ಇರುತ್ತದೆ.
ಅದರಂತೆ ಜಿಲ್ಲಾ ಮಟ್ಟದ ದಾಖಲೆಗಳ ಪರಿಶೀಲನೆಯನ್ನು ಸಪ್ಟೆಂಬರ್ 01 ರಿಂದ 06 ರವರೆಗೆ ಸರಕಾರಿ ಸರದಾರ್ಸ್ ಪ್ರೌಢಶಾಲೆ ಕಾಕತಿವೇಸ್ ಬೆಳಗಾವಿ ಇಲ್ಲಿ ಆಯೋಜಿಸಿದ್ದು ಇರುತ್ತದೆ. ಕಾರಣ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಯೊಂದಿಗೆ ಹಾಜರಾಗಲು ತಿಳಿಸಿದೆ. ಹಾಗೂ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಈ ಕಛೇರಿಯಲ್ಲಿ ಸ್ವೀಕರಿಸುವ ಅಗಸ್ಟ 30 ರಿಂದ ಸಪ್ಟೆಂಬರ್ 6 ರವರೆಗೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪ್ರಾಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮೊ.ಸಂ: 9448999328 ಇವರನ್ನು ಹಾಗೂ ನೋಡಲ್ ಅಧಿಕಾರಿಗಳಾದ ಎಮ್.ಆರ್.ಅಲಾಸೆ ಮೊ.ಸಂ: 9886840551 ಹಾಗೂ ವಿಷಯ ನಿರ್ವಾಹಕರಾದ ಮಂಜುನಾಥ ಕೆ.ಎಮ್, ಪ್ರ.ದ.ಸ ಮೊ.ಸಂ: 9482331646 ಮತ್ತು ಸಹಾಯವಾಣಿ c/o ಉಪನಿರ್ದೇಶಕರ ಕಾರ್ಯಾಲಯ ದೂರವಾಣಿ ಸಂಖ್ಯೆ: 0831-2407254 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎ.ಬಿ.ಪುಂಡಲೀಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ದಾಖಲೆಗಳ ಪರಿಶೀಲನಾ ವೇಳಾ ಪಟ್ಟಿ
ಕ್ರ.ಸಂ ದಿನಾಂಕ ವಿಷಯ ಹಾಜರಾಗಬೇಕಾದ ಅಭ್ಯರ್ಥಿಗಳ ಸಂಖ್ಯೆ
01 01.09.2018 ಇಂಗ್ಲೀಷ 1 ರಿಂದ 68
02 01.09.2018 ಗಣಿತ ಮತ್ತು ವಿಜ್ಞಾನ (ಕನ್ನಡ) 1 ರಿಂz 13
03 01.09.2018 ಗಣಿತ ಮತ್ತು ವಿಜ್ಞಾನ (ಮರಾಠಿ) 1 ರಿಂದ 4
04 02.09.2018 ಸಮಾಜ ವಿಜ್ಞಾನ(ಕನ್ನಡ) 1 ರಿಂದ 50
05 02.09.2018 ಸಮಾಜ ವಿಜ್ಞಾನ(ಮರಾಠಿ) 1 ರಿಂದ 1
03 03.09.2018 ಸಮಾಜ ವಿಜ್ಞಾನ(ಕನ್ನಡ) 51 ರಿಂದ 102

Leave A Reply

 Click this button or press Ctrl+G to toggle between Kannada and English

Your email address will not be published.