ಉತ್ತಮ ಸಮಾಜಕ್ಕಾಗಿ

ಅತಿ ಹೆಚ್ಚು ಶೌಚಾಲಯ ಕಟ್ಟಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ

Gram Panchayat Development Officers who have built the more toilet are honored

0

ಬೆಳಗಾವಿ: (news belagavi) ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ರಾಮಚಂದ್ರನ್ ಆರ್.ಭಾ.ಆ.ಸೇ ಇವರು ದಿನಾಂಕ: 27/06/2018 ರಂದು ಬೆಳಗಾವಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ 2018-19 ನೇ ಸಾಲಿನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಶೌಚಾಲಯ ಕಟ್ಟಿಸಿ ಅವೆಲ್ಲವನ್ನು ಕೇಂದ್ರ ಸರ್ಕಾರದ IಒIS ದಾಖಲಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ಗಣಕಯಂತ್ರ ಸಹಾಯಕರನ್ನು ಇಂದು ಜಿಲ್ಲಾ ಪಂಚಾಯತಿಯಲ್ಲಿ ಸನ್ಮಾನಿಸಿದರು.

      Sr. No. Taluk Gram Panchayat Name Name of the PDO
1 Athani Sankonatti ಸುಬಾಷ ಮಹಾದೇವ ಹುಬ್ಬಳ್ಳಿ

 

2 Bailhongal Naganur ಚಂದ್ರಯ್ಯಾ ವ್ಹಿ. ಕುಲಕರ್ಣಿ

 

Sangolli ರಾಜೇಶ್ವರಿ ಎಚ್ ಪಟ್ಟಣ್ಣಶೆಟ್ಟಿ
3 Chikkodi Khadaklat ವ್ಹಿ ಆರ್ ಪೊತದಾರ
4 Gokak Ankalagi ಬಸಲಿಂಗಪ್ಪಾ ಬ ಕುಂದರಗಿ

 

5 Hukkeri Basapur ಬಾಬು ಬಸಪ್ಪಾ ಅಂಗಡಿ
6 Ramdurg Haletorgal ಎ ಎಫ ಬಡಿಗೇರ

 

7 Raybag Kudachi(r) ರಾಮಚಂದ್ರ ಗೋವಿಂದ ಮಾದರ

 

8 Savadatti Sutagatti ಚಂದ್ರಶೇಖರ ಬಾರ್ಕಿ

 


ಸಭೆಯಲ್ಲಿ ಉಪಸ್ಥಿತರಿದ್ದ ಸ್ವಚ್ಛ ಭಾರತ ಮಿಷನ್ ಜಿಲ್ಲಾ ನೋಡಲ್ ಅಧಿಕಾರಿಗಳಾದ

ಮೇಲ್ಕಂಡ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಜಿಲ್ಲೆಯ ಉಳಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳನ್ನು, ಆಶಾ-ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಇನ್ನೂಳಿದ ಇತರೆ ಇಲಾಖೆ ಸಿಬ್ಬಂಧಿಗಳನ್ನು ಒಗ್ಗೂಡಿಸಿಕೊಂಡು ಪ್ರಗತಿ ಸಾಧಿಸಿದ್ದಾರೆ. ಆ ನಿಮಿತ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ರಾಮಚಂದ್ರನ್ ಆರ್.ಭಾ.ಆ.ಸೇ ಇವರು ತಿಳಿಸಿದರು.

ಶ್ರೀ ಎಸ್ .ಬಿ. ಮುಳ್ಳಳ್ಳಿ ಇವರು ಮಾತನಾಡಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದೆ. ಗ್ರಾಮ ಪಂಚಾಯತ ಸಿಬ್ಬಂದಿಗಳು ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ಕೂಡಿಸಿಕೊಂಡು ಉತ್ತಮ ರೀತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದೆರೀತಿ ಜನಪ್ರತಿನಿಧಿಗಳ ಕೈಜೋಡಿಸುವಿಕೆಯಿಂದ ಉತ್ತಮ ಪ್ರಗತಿ ಸಾಧಿಸುವುದರ ಮೂಲಕ ಅಗಷ್ಟ ಅಂತ್ಯದೊಳಗಾಗಿ ಬೆಳಗಾವಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ  ಜಿಲ್ಲೆಯನ್ನಾಗಿ ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ, ಶಂಕರಾನಂದ ಬನಶಂಕರಿ , ಪ್ರೊಬೆಶನರಿ ಕೆ.ಎ.ಎಸ್ ಅಧಿಕಾರಿಗಳಾದ ಶ್ರೀ. ಸಿದ್ರಾಮೇಶ್ವರ , ಜಿಲ್ಲಾ ಸಂಯೋಜಕರಾದ ಶ್ರೀ. ಅರ್ಜುನ ಕಡೆಟ್ಟಿ ಮತ್ತು ಸ್ವಚ್ಛ ಭಾರತ ಮಿಷನ್ ಸಿಬ್ಬಂದಿಗಳಾದ ಸಾಗರ ರಾಮಗೊಂಡ, ತೋಫಿಕಬಾಷಾ ಪೀರಜಾದೆ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.