ಉತ್ತಮ ಸಮಾಜಕ್ಕಾಗಿ

ಅದ್ದೂರಿ ಸ್ವಾಗತ

Great welcome

0

ಬೆಳಗಾವಿ:(tarun kranti) ಶ್ರೀಯುತ ಬಸಪ್ಪಾ ಲಕ್ಷ್ಮಣ ವಡ್ಡಗೋಳ ಇವರನ್ನು ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಮಾರ್ಕಾಂಡೇಯ ಗ್ರಾಮದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿ ಸ್ವಾಗತ ಬಯಸಿ ಕಿಲ್ಲಾ ವೃತ್ತದಿಂದ ಚನ್ನಮ್ಮಾ ವೃತ್ತಕ್ಕೆ ಆಗಮಿಸಿ ಚನ್ನಮ್ಮನ ಪುತ್ತಳಿಗೆ ಪುಷ್ಪ ಅರ್ಪಣೆ ಮಾಡಿ ಹನುಮಾನ ನಗರ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧಿಕಾರಿಗಳಾದ ಶ್ರಿಯುತ ಜಿಯಾವುಲ್ಲಾ ಮುಖ್ಯ ಅತಿಥಿಯಾಗಿ ಭಾಗವಹಿಸುವ ಮೂಲಕ 25000 ಅಂಧ ಕ್ರೀಕೆಟಿಗರಲ್ಲಿ ಒಬ್ಬನಾಗಿ ಆಯ್ಕೆಯಾಗಿರುವ ಬಸಪ್ಪಾ ಇವರ ಪರಿಶ್ರಮ, ಸತತ ಪ್ರಯತ್ನದ ಫಲವಾಗಿ ಬೆಳಗಾವಿ ಜಿಲ್ಲೆ ಅಷ್ಟೆ ಅಲ್ಲದೆ. ಭಾರತದ ಹಿರಿಮೆಯನ್ನು. ಹೆಚ್ಚಿಸಿದ್ದಾರೆ.
ಹಾಗೆ ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮಲ್ಲಿರುವ ಆಸಕ್ತಿಗೆ ಅನುಗುಣವಾಗಿ ಸಾಧನೆ ಮಾಡಬೇಕೆಂದು ಕರೆ ಕೊಟ್ಟರು. ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲಾ 18 ವರ್ಷ ಮೀರಿದ ವಿಶೇಷಚೇತನರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೂಳ್ಳುವ ಮೂಲಕ ಕಡ್ಡಾಯವಾಗಿ ಮತ ಚಲಾಯಿಸಬೇಕು, ಮತ್ತು ಎಲ್ಲಾ ಸಂಘ-ಸಂಸ್ಥೆಗಳು ಇವರಿಗೆ ಸಹಾಯ ಮಾಡಬೇಕೆಂದು ಕರೆಕೂಟ್ಟರು. ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ, ಶ್ರೀ ಮಹಾಂತೇಶ.ಜಿ.ಕಿವುಡಸನ್ನವರ ಕ್ರೀಕೆಟ್ ಕ್ಷೇತ್ರದಲ್ಲಿ ಪ್ರತಿಭೇ ಇವರನ್ನು ಗುರುತಿಸಿ ತರಬೇತಿಗೊಳಿಸಲು ಮತ್ತು ಇನ್ನು ಹೆಚ್ಚಿನ ಪ್ರತೀಬೆಗಳನ್ನು ಹೊರತರಲು ಒಂದು ಸುಸಜ್ಜಿತ ಕ್ರೀಕೆಟ್ ಮೈದಾನದ ಅವಶ್ಯಕತೆ ಇದೇ ಎಂದು ಅಭಿಪ್ರಾಯಪಟ್ಟರು.
ಸಮರ್ಥನಂ ಸಂಸ್ಥೆ ಇಗಾಗಲೇ 10 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿಗಳು, ಕ್ರೀಡೆ ಹೀಗೆ ವಿವಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಸದುಪಯೊಗ ಪಡೆಯಬೇಕೆಂದು ವಿಕಲಚೇತನರಿಗೆ ಕರೆ ನೀಡಿದರು. ಸಂಸ್ಥೆ ಕಿರುಪರಿಚಯ ನೀಡಿದ ಬೆಳಗಾವಿ ಶಾಖಾ ಮುಖ್ಯಸ್ಥರಾದ ಶ್ರೀಯುತ ಎಮ್. ಅರುಣ್‍ಕುಮಾರ ಮಾತನಾಡಿ ಕಳೆದ 7 ವರ್ಷಗಳಲ್ಲಿ ಬೆಳಗಾವಿ ಶಾಖೆ ವತೀಯಿಂದ 1750 ವಿಕಲಚೇತನರು ತರಬೇತಿ ಪಡೆದಿದು.್ದ ಶೇಕಡಾ 70 ರಷ್ಟು ಅಭ್ಯರ್ಥಿಗಳು ವೀವಿದ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ದೊರೆಕಿಸಿ ಕೊಡಲಾಗಿದೆ ಎಂದರು.

ಅಲ್ಲದೆ ಕ್ರೀಕೆಟ್ ರಂಗದಲ್ಲಿ ಮೂರು ಜನ ಈಗಾಗಲೇ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದು ಇನ್ನು ಹೆಚ್ಚು ಪ್ರತಿಭಾವಂತ ಯುವ ಕ್ರೀಕೆಟಿಗರನ್ನು ಹೊರತರುವ ಉದ್ದೇಶದಿಂದ ಇದೇ ದಿನಾಂಕ 23, 24 ಮತ್ತು 25 ಪೆಬ್ರವರಿಯಲ್ಲಿ 3ನೇ ರಾಜ್ಯ ಮಟ್ಟದ ಅಂಧರ ಕ್ರೀಕೆಟ್ ಸ್ಪರ್ಧೆಯನ್ನು ಎರ್ಪಡಿಸಲಾಗಿದ್ದು. ಈ ಸ್ಪರ್ಧೆಗೆ ಉದ್ಯಮಿಗಳು, ವಿವಿದ ಸಂಘಟನೆಗಳು ಪ್ರಾಯೋಜಕತ್ವ ನೀಡಲು ಮುಂದಾಗುವ ಮೂಲಕ ಯುವ ಅಂಧ ಕ್ರೀಕೆಟಿಗರಿಗೆ ಬೆಳಕಾಗಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮಾರ್ಕಂಡೇಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು, ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಸಮಾಜ ಸೇವಕರಾದ ವೀರೆಶ ಕಿವುಡಸನ್ನವರ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಯುತ ರೇವಣಸಿದ್ದಯ್ಯ ಸಾಲಿಮಠ, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.