ಉತ್ತಮ ಸಮಾಜಕ್ಕಾಗಿ

Top Music Only’ ಎಂಬ ಗ್ರುಪ್ ಅಡ್ಮಿನ್ ನನ್ನು: ಪೊಲೀಸರ ವಶಕ್ಕೆ

news belagavi

0

ಬೆಳಗಾವಿ:(news belgaum) ವಾಟ್ಸಪ್ ಬೇಕಾಬಿಟ್ಟಿ ಬಳಕೆಯ ಕಿಡಿಗೇಡಿಗಳಿಗೆ ನಡುಕ ಹುಟ್ಟಿಸುವ ನಡೆಯಲ್ಲಿ, ಬೆಳಗಾವಿ ಪೊಲೀಸರು Whatsapp Admin ಒಬ್ಬನನ್ನು ವಶಕ್ಜೆ ಪಡೆದಿದ್ದಾರೆ. ಬೆಳಗಾವಿ ನಗರ CCB ಪೊಲೀಸರು ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ನೇತೃತ್ವದಲ್ಲಿ ದಾಳಿ ನಡೆಸಿ ವಾಟ್ಸಪ್ ಗ್ರುಪನಲ್ಲಿ ಧಾರ್ಮಿಕ ಅವಹೇಳನ ಮತ್ತು ಸಮಾಜ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡಲಾಗುತ್ತಿದ್ದ ‘Top Music Only’ ಎಂಬ ಗ್ರುಪ್ ಅಡ್ಮಿನ್ ನನ್ನು ವಶಕ್ಕೆ ಪಡೆದಿದ್ದಾರೆ.
ಉದ್ಯಮಭಾಗ ಮಹಾವೀರ ನಗರದ ಅಕ್ಷಯ ರಾಜೇಂದ್ರ ಅಲಗೋಡಿಕರ(೨೦) ಎಂಬ ಯುವಕನನ್ನು CEN ಪೊಲೀಸ್ ಠಾಣೆ ವ್ಯಾಪ್ತಿಗೆ ಪಡೆಯಲಾಗಿದೆ. ವಾಟ್ಸಪ್ ಗ್ರುಪನಲ್ಲಿ ಇಲ್ಲ ಸಲ್ಲದ ಚಿತ್ರ, ವಿಡಿಯೋ, ಅಶ್ಲೀಲತೆಯ ಪ್ರದರ್ಶನ ಮಾಡುವವರ ಬಗ್ಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂದು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಎಚ್ಚರಿಸಿದ್ದು, ವಾಟ್ಸಪ್ ಸದುಪಯೋಗ ಮಾಡಿಕೊಳ್ಳುವಂತೆ ಕೋರಿದ್ದಾರೆ.
ಸದರಿ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ಯುವಕ ಪಾಕಿಸ್ತಾನ, ಅಮೇರಿಕಾ, ರಷ್ಯಾ, ಕೆನಡಾ ಸೇರಿದಂತೆ ಹತ್ತಾರು ದೇಶಗಳ ಜನರನ್ನು ಗ್ರುಪ್ ನಲ್ಲಿ ಒತ್ತಾಯಪೂರ್ವಕವಾಗಿ ಸೇರಿಸಿಕೊಂಡಿದ್ದ ಎನ್ನಲಾಗಿದೆ. ಮೆಸೇಜ ಹಾಗೂ ವಿಡಿಯೋಗಳನ್ನು ಸೃಷ್ಟಿ ಮಾಡಿ ಗ್ರುಪನಲ್ಲಿ ಹರಿಬಿಡುವುದು, ಇಲ್ಲವೇ ಅಂತಹ ಮೆಸೇಜಗಳನ್ನು ಶೇರ್ ಮಾಡುವುದು ಎರಡೂ ಅಪರಾಧವಾಗಿದ್ದು ಈಗ ಗ್ರುಪ್ ಅಡ್ಮಿನಗಳು ಪೊಲೀಸ್ ಹದ್ದಿನ ಕಣ್ಣಲ್ಲಿ ಸಿಗಲಿದ್ದಾರೆ. ಧಾರ್ಮಿಕ ಅವಹೇಳನ, ಕೋಮುತ್ವೇಷ ಸೃಷ್ಟಿ, ಅಶ್ಲೀಲತೆಯ ಪ್ರಚೋದನೆ, ತಪ್ಪು ಮಾಹಿತಿಗಳ ಶೇರ್ ಮಾಡುವವರು ಎಚ್ಚರವಹಿಸಬೇಕಿದೆ. ಕಲಂ. 292, 295(A), ಸಹಕಲಂ 34IPC 67ರ ಐಟಿ ಕಾಯ್ದೆ ಅಡಿ ಈ ಕ್ರಮ ಜರುಗಿಸಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.