ಉತ್ತಮ ಸಮಾಜಕ್ಕಾಗಿ

ಎಚ್. ಡಿ. ಕು ಲೇಔಟ:ಅಭಿವೃದ್ಧಿ ಮಾಡುವೆ: ಸಿಎಂ ಕುಮಾರಸ್ವಾಮಿ ಅಭಯ

news belagavi

0

ಬೆಳಗಾವಿ: (newsbelgaum)ನಗರದ ಎಚ್. ಡಿ. ಕುಮಾರಸ್ವಾಮಿ ಲೇಔಟನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆ ಇಲ್ಲಿನ ಬಡಾವಣೆ ಶಿವಾಲಯದಲ್ಲಿ ನಡೆಯಿತು.
ಲಕ್ಷ್ಮೀ ಹೆಬ್ಬಾಳಕರ ಈ ಸಂದರ್ಭ ಮಾತನಾಡಿ ರಾಜ್ಯದ ಅಪರೂಪದ, ಜನಪ್ರಿಯ ಮುಖ್ಯಮಂತ್ರಿ ಎಚ್ಡಿಕೆ ಆಗಿದ್ದಾರೆ. ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಕಣ್ಮಣಿ ಆಗಿದ್ದಾರೆ ಎಂದು ಬಣ್ಣಿಸಿದರು.
ಎಚ್. ಡಿ. ಕುಮಾರಸ್ವಾಮಿ ಲೇಔಟ:ಅಭಿವೃದ್ಧಿ ಮಾಡುವೆ: ಸಿಎಂ ಕುಮಾರಸ್ವಾಮಿ ಅಭಯ- Tarun kranti 1ಎಚ್ಡಿಕೆ ಬಡಾವಣೆ ಅಭಿವೃದ್ಧಿ ಮಾಡಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು. ಶಿವಾಲಯ ದೇವಸ್ಥಾನವನ್ನು ಜೀರ್ಣೋದ್ಧಾರ ಕಮಿಟಿಗೆ ಹಸ್ತಾಂತರಿಸಬೇಕು. ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆಗಳ ಬಡವಾದರೆ, ಗ್ರಾಮೀಣ ಕ್ಷೇತ್ರ ಮಾತ್ರ ಬಡವಾಗಿದೆ ಎಂದು ಖೇದ ವ್ಯಕ್ತಪಡಿಸಿ. ಎಚ್ಡಿಕೆ ಬಡಾವಣೆಯನ್ನು ನಗರದಲ್ಲೇ ಮಾದರಿ ಬಡಾವಣೆ ಮಾಡಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಲಕ್ಷ್ಮೀ ಹೆಬ್ಬಾಳಕರ ಒತ್ತಾಯಿಸಿದರು.
ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾತನಾಡಿ ನಾಲ್ಕೈದು ಸಾವಿರ ಜನ ನನಗಾಗಿ ಕಾಯ್ದಿದ್ದಾರೆ. ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಅವರು ಎಚ್ಡಿಕೆ ಬಡಾವಣೆ ಸ್ಥಿತಿಗತಿ ಅರಿಯಲು ಕರೆದಿದ್ದಾರೆ. ನಾನು ಬಡಾವಣೆಯ ಸ್ಥಿತಿಗತಿ ಮತ್ತು ಸಮಸ್ಯೆಗಳ ಬಗ್ಗೆ ಅರಿವಾಗಿದೆ ಎಂದರು. ಸಭೆ ಕರೆದು ಈ ಬಡಾವಣೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜನತೆಗೆ ಅಭಯ ನೀಡಿದರು. ಎಚ್ಡಿಕೆ ಬಡಾವಣೆಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಿಕೊಡುವೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.