ಉತ್ತಮ ಸಮಾಜಕ್ಕಾಗಿ

ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ನ ಹೈಲೈಟ್ಸ್

Highlights of the coalition government's most anticipated budget

0

ಬೆಂಗಳೂರು: (news belagavi)  ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ 2018 ಬಜೆಟ್ ಅನ್ನು ಕುಮಾರಸ್ವಾಮಿ ಮಂಡನೆ ಮಾಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಸಿಎಂ ಕುಮಾರಸ್ವಾಮಿ ಯವರು, ನಿರೀಕ್ಷೆಯಂತೆ ರೈತರ ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ದಾರೆ.

ವಿಧಾನಸೌಧಲ್ಲಿ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ ಕುಮಾರಸ್ವಾಮಿ ಅವರು, ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಸುಮಾರು 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. 31-12-2017ರವರೆಗೂ ಒಟ್ಟು 34 ಸಾವಿರ ಕೋಟಿ ರೂ.ಗಳ ವರೆಗಿನ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಮ್ಮಿಶ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ನ ಹೈಲೈಟ್ಸ್- Tarun kranti

ಬಜೆಟ್ ನ ಹೈಲೈಟ್ಸ್ ಇಲ್ಲಿದೆ.

ಒಟ್ಟು ಬಜೆಟ್ ಗಾತ್ರ 2,18,488 ಕೋಟಿ ರೂ ಆಗಿದ್ದು, 2ಲಕ್ಷದ 13 ಸಾವಿರದ 734ಕೋಟಿ ರೂ. ಒಟ್ಟು ಜಮೆಗಳಾಗಿವೆ. ಇದರಲ್ಲಿ 34ಸಾವಿರ ಕೋಟಿ ರೈತರ ಸಾಲಮನ್ನಾ ಆಗಿದೆ.

ಸಿದ್ದರಾಮಯ್ಯ ಸರ್ಕಾರದ ಎಲ್ಲ ಯೋಜನೆಗಳೂ ಮುಂದುವರಿಯಲಿವೆ ಎಂದ ಎಚ್ ಡಿ ಕುಮಾರಸ್ವಾಮಿ ಹೇಳಿದ್ದು, ಪ್ರತಿ ರೈತ ಕುಟುಂಬದ 2 ಲಕ್ಷದವರೆಗಿನ ಸಾಲಮನ್ನಾ ಮಾಡಲಾಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಾರ್ವಜಿಕರಿಗೆ ತೆರಿಗೆ ಬರೆ ಎಳೆದಿದ್ದು, ಪ್ರಮುಖವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಏರಿಸಲಾಗಿದೆ. ಶೇಖಡಾ 30ರಿಂದ 32ಕ್ಕೆ ಪೆಟ್ರೋಲ್ ಮೇಲಿನ ತೆರಿಗೆ ಏರಿಕೆಯಾಗಿದ್ದು, ಶೇಕಡಾ19ರಿಂದ 21ಕ್ಕೆ ಡೀಸೆಲ್‌ ಮೇಲಿನ ತೆರಿಗೆ ಏರಿಕೆಯಾಗಿದೆ, ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ 1.14 ಮತ್ತು 1.12 ರೂ ಹೆಚ್ಚಳವಾಗಿದೆ. ವಿದ್ಯುತ್ ದರ ಯನಿಟ್ ಗೆ 10 ರಿಂದ 20 ಪೈಸೆ ಹೆಚ್ಚಳ ಮಾಡಲಾಗಿದೆ. ಅಬಕಾರಿ ರಾಜಸ್ವ 18750 ಕೋಟಿ ಗುರಿ ಹೊಂದಿದ್ದು, ಮದ್ಯದ ಮೇಲಿನ ತೆರಿಗೆ ಶೆ.4 ರಷ್ಟು ಹೆಚ್ಚಳ ಮಾಡಲಾಗಿದೆ.

ರಾಮನಗರ ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು ಘೊಷಿಸಿದ್ದು, ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚಾಮರಾಜನಗರ, ಹಾಸನ, ಕೊಪ್ಪಳ, ಗದಗದಲ್ಲಿ ಹೊಸ ಆಸ್ಪತ್ರೆ ಸ್ಥಾಪನೆ. 12 ಕೋಟಿ ರೂ. ವೆಚ್ಚದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆ.

ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ ರೂ 600 ರಿಂದ ರೂ.1000 ಕ್ಕೆ ಹೆಚ್ಚಳ ಮಾಡಲಾಗಿದ್ದು, ವೃದ್ಧರ ಮಾಸಾಸನ 600 ರಿಂದ 1000 ರೂವರೆಗೆ ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಸೌಲಭ್ಯ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6000 ಸಾವಿರ ಘೋಷಣೆ

ಶಿಕ್ಷಕರ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ. ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇರುವ 28,847 ಶಾಲೆಗಳ ವಿಲೀನ ಮಾಡಲು ನಿರ್ಧರಿಸಿದ್ದು, ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 8530 ಸರ್ಕಾರಿ ಶಾಲೆಗಳ ಜೊತೆ ವಿಲೀನ.

ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ. ಮೀಸಲು ಇಡಲಾಗಿದೆ. ಪ್ರತಿ‌ ವಾರ್ಡ್ ಗೆ ಒಂದರಂತೆ ಇಂದಿರಾ ಕ್ಯಾಂಟೀನ್, ಸ್ಥಳ ಲಭ್ಯವಿಲ್ಲದ ಕಡೆ ಮೊಬೈಲ್ ಇಂದಿರಾ ಕ್ಯಾಂಟೀನ್, 247 ಇಂದಿರಾ ಕ್ಯಾಂಟೀನ್ 210 ಕೋಟಿ ವೆಚ್ಚದಲ್ಲಿ ನಿರ್ಮಾಣ, ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣಕ್ಕೆ ಯೋಜನೆ.

ಹಾಸನ ಹಾಲು ಒಕ್ಕೂಟಕ್ಕೆ ರೂ 50 ಕೋಟಿ ಅನುದಾನ ಮೀಸಲಿಟ್ಟಿದ್ದು, ಸಿರಿಧಾನ್ಯ, ಬೆಳೆಕಾಳು, ಎಣ್ಣೆ ಕಾಳುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ರೈತರ ಕಲ್ಯಾಣಕ್ಕೆ ರಾಜ್ಯ ರೈತರ ಸಲಹಾ ಸಮಿತಿ ರಚನೆ ಮಾಡಿ, ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿಪರ ರೈತರಿರುವ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಚರ್ಚಿಸಿ ರೈತರ ಸಮಸ್ಯೆಗಳಿಗೆ ಪರಿಹಾರ.

ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆಗೆ ರೂ. 150 ಕೋಟಿ ರೂ. ಮೀಸಲಿಟ್ಟಿದ್ದು, 5000 ಹೆಕ್ಟರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಿ ರಾಜ್ಯದಲ್ಲಿ ಮಳೆ ಕುಂಠಿತ ಹಿನ್ನಲೆ ತೆಂಗಿನ ಮರಗಳು ಒಣಗುತ್ತಿವೆ. ಸಂಪೂರ್ಣ ಒಣಗಿರುವ ಕಡೆ ತೆಂಗು ಮತ್ತು ಸೀಬೆ ಮರಗಳನ್ನು ಬೆಳೆಸಲು ಪ್ರೋತ್ಸಾಹ.

ಗಂಗಾ ಕಲ್ಯಾಣ ಯೋಜನೆಯ ಸಹಾಯಧನ 4ಲಕ್ಷ ರೂ ವರೆಗೆ ಹೆಚ್ಚಿಸುವುದು, ಎಸ್ ಸಿ ಎಸ್ ಟಿ ಫಲಾನುಭವಿಗಳಿಗೆ ಮೂರು ವರ್ಷಗಳಲ್ಲಿ ನೀರಾವರಿ ಸೌಲಭ್ಯ, ಸಹಾಯ ಧನ ಮಿತಿ 3.50 ಲಕ್ಷದಿಂದ 4 ಲಕ್ಷದವರೆಗೆ ಹೆಚ್ಚಳ ಮಾಡಲಾಗಿದೆ. ಎಸ್ ಸಿ, ಎಸ್ ಟಿ 5000 ನಿರುದ್ಯೋಗಿಗಳಿಗೆ 15ಕೋಟಿ ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ.

ರಾಮನಗರದಲ್ಲಿ ಚಲನಚಿತ್ರ ವಿವಿ ಸ್ಥಾಪನೆ, 30 ಕೋಟಿ ವೆಚ್ಚದಲ್ಲಿ ಚಲನಚಿತ್ರ ವಿವಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿವಿ, ರಾಮನಗರದಲ್ಲಿ 300 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ 40 ಕೋಟಿ ರೂ.

ಬೆಂಗಳೂರು ವಾಯು ಮಾಲಿನ್ಯ ತಡೆಗೆ ಕ್ರಮ, ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಪ್ರೋತ್ಸಾಹಿಸಲು, 4 ಕೋಟಿ ರೋ ವೆಚ್ಚದಲ್ಲಿ 1000 ಚಾರ್ಜಿಂಗ್ ಘಟಕ ಸ್ಥಾಪನೆ. ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಅಂದಾಜು ವೆಚ್ಚ 15,285 ಕೋಟಿ ರೂ. ಒಟ್ಟು 95 ಕಿ.ಮೀ. ನಮ್ಮ ಮೆಟ್ರೊ ಮಾರ್ಗ ವಿಸ್ತರಣೆ.

ಆಹಾರ ಮತ್ತು ನಾಗರಿಕ ಸರಬರಾಜು, ಅನ್ನಭಾಗ್ಯ ಅಕ್ಕಿಗೆ ಕತ್ತರಿ,ಅನ್ನಭಾಗ್ಯ ಅಕ್ಕಿ ವಿತರಣೆ 7ರಿಂದ 5ಕ್ಕೆ ಇಳಿಕೆ. ತೊಗರಿ ಬೆಳೆಗೂ ಕತ್ತರಿ ಒಂದು ಕೆಜಿಯಿಂದ ಅರ್ಧ ಕೆಜಿಗೆ ಇಳಿಕೆ. ಒಂದು ಕೆಜಿ‌ ಪಾಮ್ ಎಣ್ಣೆ, ಉಪ್ಪು, ಸಕ್ಕರೆ.

ಭಗೀರಥ ಪೀಠ, ಮಾದಾರ ಚನ್ನಯ್ಯ, ಕಾಗಿನೆಲೆ ಕನಕ ಗುರುಪೀಠ, ದೇವಾಂಗ ಗುರುಪೀಠ, ವಾಲ್ಮಿಕಿ ಗುರುಪೀಠ ಸೇರಿದಂತೆ ಹಲವು ಧಾರ್ಮಿಕ ಪೀಠಗಳಿಗೆ 25ಕೋಟಿ ರೂ ಅನುದಾನ.

ಕ್ರೀಡಾ ಸಾಮಗ್ರಿ ಉತ್ಪಾದನೆಗಾಗಿ ತುಮಕೂರಿಗೆ 2000 ಕೋಟಿ ರೂ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂ.ಅನುದಾನ ನೀಡಲಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.