ಉತ್ತಮ ಸಮಾಜಕ್ಕಾಗಿ

ಹಿಂದೂಜನಜಾಗೃತಿ ಸಮಿತಿ ವೇದಿಕೆ ಅಡಿ ಇಂದು ಸುದ್ದಿಗೋಷ್ಠಿ

news belagavi

0

ಬೆಳಗಾವಿ: (news belagavi)ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಹಲವು ಅಮಾಯಕರಿಗೆ ಅರೆಸ್ಟ್ ಮಾಡಲಾಗಿದ್ದು ಕಂಡುಬರುತ್ತದೆ ಎಂದು ನ್ಯಾಯವಾದಿ ಚೇತನ ಮನೇರಿಕರ ತಿಳಿಸಿದರು. ಹಿಂದೂಜನಜಾಗೃತಿ ಸಮಿತಿ ವೇದಿಕೆ ಅಡಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ SITಯಿಂದ ಬಂಧಿತ ಭರತ ಕುರುಣೆ ಅವರಿಗೆ ಹಲವು ಮಾನಸಿಕ ತೊಂದರೆ ಕೊಟ್ಟಿದ್ದಾರೆ. ನಾನು ಲಾಯರ್ ಆಗಿ ಭರತ ಕುರುಣೆ ಅವರನ್ನು ಭೇಟಿ ಆಗಲು ಬೆಂಗಳೂರಿನಲ್ಲಿ SIT ಬಿಡ್ತಿಲ್ಲ ಎಂದು ಆರೋಪಿಸಿದರು. SIT ತಪ್ಪು ಕೇಸ್ ಹಾಕಬಾರದು ಇದರಿಂದ ಪೊಲೀಸರಿಗೆ ಹಿನ್ನಡೆಯನ್ನು ತರುತ್ತದೆ ಎಂದರು.
ಸನಾತನ ಸಂಸ್ಥೆ ಯಾವುದೇ ದುಷ್ಕಳಂಕ ಮಾಡಿದೆ ಎಂದು ಎರಡೂ ರಾಜ್ಯಗಳ ಗೃಹಮಂತ್ರಿಗಳು ಆಗಲೇ ತಿಳಿಸಿದ್ದಾರೆ ಎಂದರು. ಪ್ರಾಮಾಣಿಕ ಮತ್ತು ನಿಷ್ಕಳಂಕ ತನಿಖೆ SIT ಮಾಡಲಿ ಎಂದು ಒತ್ತಾಯಿಸಿದರು. ಕೋರ್ಟನಲ್ಲಿ ವಿಚಾರಣೆಯ ನಂತರವೇ ಎಲ್ಲ ಸತ್ಯಾಸತ್ಯತೆ ಕಂಡುಬರಲಿದೆ ಎಂದರು.
ಪರಮೇಶ್ವರ ಎಂಬ ವಕೀಲ ಅವರನ್ನು ಕಕ್ಷಿದಾರನಿಗೆ ತಿಳಿಯದಂತೆ ನೇಮಕ ಮಾಡಲಾಗಿದೆ. ಹಿಂದುತ್ವವಾದಿ ಸಂಘಟನೆಗಳ ಬಗ್ಗೆ ಸಂಶಯ ಸಲ್ಲದು ಎಂದರು. ಸನಾತನ ಧರ್ಮದ ಬಗ್ಗೆ ಅನಾವಶ್ಯಕ ಸಂಶಯ ಇರಬಾರದು ಎಂದರು.
ಭರತ ಕುರಣೆ ಪತ್ನಿ ಗಾಯತ್ರಿ ಭರತ ಕುರುಣೆ ಹಾಗೂ ತಾಯಿ ರೇಖಾ ಜಯವಂತ ಕುರುಣೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಮಾಯಕ ಭರತ ಅವರನ್ನು ಪೊಲೀಸರು ವಿನಾಕಾರಣ ಬಂಧಿಸಲಾಗಿದ್ದು, ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಶನಿವಾರ ಸೆ. 1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ ಎಂದರು. ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರುವ ಷಡ್ಯಂತ್ರ ವಿರುದ್ದ ನಗರದಲ್ಲಿ ಪ್ರತಿಭಟನೆ ನಡೆಯಲಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಅನ್ಯ ವಿಚಾರವಾದಿಗಳೊಂದಿಗೆ ಹೋಲಿಸಿ, ಸನಾತನ ಸಂಸ್ಥೆ ಮೇಲೆ ಆರೋಪಗಳನ್ಬು ಹಾಕಲಾಗುತ್ತಿದೆ. ಭಯೋತ್ಪಾದನೆ ಸಂಘಟನೆ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸೆ. 1ರಂದು ನಗರದ ಸಂಭಾಜಿ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದರು.
ಸೆಷನ್ ಲಾಯರ್ ಶರತಚಂದ್ರ ಮುಂಡರಗಿ, ಹಿಂದು ಜನಜಾಗೃತಿ ಸಮಿತಿ ಮುಖಂಡ ಹೃಷಿಕೇಶ ಗುರ್ಜರ, ಹಿಂದೂ ಜನಜಾಗೃತಿ ಅಧ್ಯಕ್ಷ ಸಮೀರ ಪಾಟೀಲ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.