ಉತ್ತಮ ಸಮಾಜಕ್ಕಾಗಿ

ಹೆಚ್.ಐ.ವ್ಹಿ ಕಾರ್ಯಾಗಾರ

0

ಬೆಳಗಾವಿ:( tarunkranti) ಹೆಚ್.ಐ.ವ್ಹಿ ಕಾರ್ಯಾಗಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಧೆ (ಮಹಿಳಾ) ಉದ್ಯಮಬಾಗ, ಬೆಳಗಾವಿ ಇಲ್ಲಿ ಹೆಚ್.ಐ.ವ್ಹಿ ಕಾರ್ಯಾಗಾರ HIV/AIDS ತಿಳುವಳಿಕೆಯ ಕಾರ್ಯಾಗಾರವನ್ನು ಇತ್ತಿಚಿಗೆ ಆಯೋಜಿಸಲಾಗಿತ್ತು.
ಆಶ್ರಯ ಪೌಂಡೇಶನ್ ಸಂಸ್ಧಾಪಕ ಅಧ್ಯಕ್ಷರಾದ ಶ್ರೀಮತಿ ನಾಗರತ್ನಾ ಸುನೀಲ ರಾಮಗೌಡಾ ಬೆಳಗಾವಿ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ,ಹೆಚ್.ಐ.ವ್ಹಿ ಕಾರ್ಯಾಗಾರ HIV/AIDS ಬರದಂತೆ ವಹಿಸಬೇಕಾದ ಮುನ್ನೇಚ್ಚರಿಕೆಯ ಕ್ರಮಗಳು ಮತ್ತು ಈಗಾಗಲೇ ಈಹೆಚ್.ಐ.ವ್ಹಿ  ಒಂದು ಮಾರಕ ರೋಗಕ್ಕೆ ಬಲಿಯಾದ ಜನರು ಆರೋಗ್ಯಯುತ ಜೀವನಕ್ಕಾಗಿ ಪಾಲಿಸಬೇಕಾದ ಅಂಶಗಳ ಬಗ್ಗೆ ಸಲಹೆಗಳನ್ನು ನೀಡಿದರು.
ಸಂಸ್ಧೆಯ ಪ್ರಾಚಾರ್ಯರಾದ ಶ್ರೀ ಚಿದಾನಂದ ಬಾಕೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರ್ರೀಮತಿ ನಾಗರತ್ನಾ ಸುನೀಲ ರಾಮಗೌಡಾ ಇವರು ಜೀವಂತ ದಂತ ಕಥೆಯಾಗಿದ್ದು,ಹೆಚ್.ಐ.ವ್ಹಿ HIV/AIDS ನ ಬಗ್ಗೆ ಸಮಾಜದಲ್ಲಿ ಮೂಡಿಸುತ್ತಿರುವ ತಿಳುವಳಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಹೆಚ್.ಐ.ವ್ಹಿ ಕಾರ್ಯಾಗಾರ- Tarun krantiಮುಂದುವರೆದು ಪ್ರತಿಯೊಬ್ಬರು ತಮಗೆ ಸಾಧ್ಯವಾದ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸದೃಢ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಕಾರ್ಯಾಗಾರದಲ್ಲಿ ಸಂಸ್ಧೆಯ ಎಲ್ಲ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.