ಉತ್ತಮ ಸಮಾಜಕ್ಕಾಗಿ

ಗೌರವಪೂರ್ವಕವಾಗಿ ಅಟಲ್ ಜೀಗೆ ವಿದಾಯ

news belagavi

0

ಬೆಳಗಾವಿ: (news belagavi)ಭಾರತರತ್ನ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿ ಕಳಶ ಮೆರವಣಿಗೆ ಭಾವಪೂರ್ವಕವಾಗಿ ನಗರದಲ್ಲಿ ನಡೆದು, ಗೌರವಪೂರ್ವಕವಾಗಿ ಅಟಲ್ ಜೀಗೆ ವಿದಾಯ ಹೇಳಲಾಯಿತು.
ನಗರದ ಚವಾಟ ಗಲ್ಲಿ ಶಾಸಕ ಅನಿಲ ಬೆನಕೆ ಕಚೇರಿಯಲ್ಲಿ ಅಟಲ್ ಅಸ್ತಿ ಹೊತ್ತ ಕುಂಭಕ್ಕೆ ಸಂಸದ ಸುರೇಶ ಅಂಗಡಿ ಪೂಜೆ ಸಲ್ಲಿಸಿ, ಮೆರವಣಿಗೆ ವಾಹನಕ್ಕೆ ಅಳವಡಿಸಿದರು.ನಂತರ ಮೆರವಣಿಗೆ ನಡೆಸಿ ಚನ್ನಮ್ಮ ವೃತ್ತದಲ್ಲಿ ಪ್ರದರ್ಶನ ನಡೆಸಿ ಚಾಲನೆ ನೀಡಲಾಯಿತು. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮಹಾಂತೇಷ ದೊಡ್ಡಗೌಡರ, ಶ್ರೀ ಗುರುಸಿದ್ದ ಮಹಾಸ್ವಾಮೀಜಿ, ಹುಕ್ಕೇರಿ ಶ್ರೀ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಶಂಕರಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ವಿ. ಐ. ಪಾಟೀಲ, ರಾಜೇಂದ್ರ ಹರಕುಣಿ, ಸಂಜಯ ಪಾಟೀಲ, ರಾಜು ಚಿಕ್ಕನಗೌಡ್ರ, ಪ್ರಭು ಹೂಗಾರ, ಉಜ್ವಲಾ ಬಡವನಾಚೆ, ಗಿರೀಶ್ ಧೋಂಗಡೆ ಮತ್ತಿತರರು ಭಾಗವಹಿಸಿದರು.
ಕಾಕತಿವೆಸ್, ಬೋಗಾರವೆಸ್, ಶಹಾಪುರ, ಖಾಸಭಾಗ ಮಾರ್ಗದಲ್ಲಿ ಅಸ್ತಿ ಕಳಸ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಸಾರ್ವಜನಿಕರು ಅಟಲ್ ಅಸ್ತಿ ಕಳಶಕ್ಕೆ ಹೂವು ಎರಚಿ ಸ್ವಾಗತಿಸಿ ಬಿಳ್ಕೊಟ್ಟರು. ಖಾಸಭಾಗ ಬಸವೇಶ್ವರ ವೃತ್ತದ ಮೂಲಕ ಹಿರೇಬಾಗೆವಾಡಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ ಮಾರ್ಗವಾಗಿ ಚಲಿಸಿ ಗೋಕಾಕ ತಾಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ವಿಸರ್ಜಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.