ಉತ್ತಮ ಸಮಾಜಕ್ಕಾಗಿ

ಕಿಸ್ ಮಾಡೋಕೆ ಬರುತ್ತಾ? ರಿಯಾಲಿಟಿ ಶೋ ಆಡಿಷನ್ ನಲ್ಲಿ ವಿದ್ಯಾರ್ಥಿನಿಯರಿಗೆ ಪ್ರಶ್ನೆHow to kiss Question for Girls in Reality Show Audition

How to kiss Question for Girls in Reality Show Audition

0

ರಿಯಾಲಿಟಿ ಶೋ ಆಡಿಷನ್ ಆಯೋಜಕರ ವಿರುದ್ದ ತಿರುಗಿಬಿದ್ದ ವಿದ್ಯಾರ್ಥಿನಿಯರು

ಬೆಂಗಳೂರು:(tarun kranti) ಮಲ್ಲೇಶ್ವರಂನ ಮಹಿಳಾ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಆಡಿಷನ್ ನಡೆಸುವಾಗ ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಡಿಷನ್​ನಲ್ಲಿ ಆಯೋಜಕರು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿ ಆಯೋಜಕರ ವಿರುದ್ದ ಹರಿಹಾಯ್ದಿದ್ದಾರೆ.

ತೀರಾ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿನಿಯರಿಗೆ ಮುಜುಗರ ಉಂಟು ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರ ಪೋಷಕರು ರಿಯಾಲಿಟಿ ಶೋ ಆಡಿಷನ್ ಆಯೋಜಕರ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಯೋಜನಕರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ನಿಮಗೆ ಸೆಕ್ಸ್ ಮಾಡೋಕೆ ಬರುತ್ತಾ? ಬಾಯ್ ಫ್ರೆಂಡ್ ಎಷ್ಟು ಮಂದಿ ಇದ್ದಾರೆ?  ನಮ್ಮ ಮುಂದೆ ಬಟ್ಟೆ ಬದಲಾಯಿಸುತ್ತೀರಾ ಎಂಬೆಲ್ಲಾ ಅಶ್ಲೀಲ ಪ್ರಶ್ನೆಗಳನ್ನು ಹುಡುಗಿಯರಿಗೆ ಕೇಳಲಾಯಿತಂತೆ. ಹುಡುಗನಿಗೆ ಕಿಸ್ ಮಾಡಿ ಎಂಬ ಒತ್ತಾಯವನ್ನು ಮಾಡಲಾಯಿತು. ಹುಡುಗಿಯರ ಡ್ರೆಸ್ ನೋಡಿ ಆಯ್ಕೆ ಮಾಡುತ್ತಿದ್ದರು ಎಂದು ಕೆಲ ಯುವತಿಯರು ಆರೋಪಿಸಿದ್ದಾರೆ.

ಆಯೋಜಕರ ವಿರುದ್ಧ ಯುವತಿಯರು ತಿರುಗಿಬಿದ್ದ ಕಾರಣ ಆಡಿಷನ್​ ನಿಲ್ಲಿಸಲಾಯಿತು. ಆಡಿಷನ್​ಗೆ ಬಂದಿದ್ದ ವಿದ್ಯಾರ್ಥಿನಿಯರು ಪರದಾಡುವಂತಾಯಿತು.How to kiss Question for Girls in Reality Show Audition

(  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.