ಉತ್ತಮ ಸಮಾಜಕ್ಕಾಗಿ

ಜಾನಪದ ಬುತ್ತಿ, ಸಿದ್ದೇಶ್ವರ ಶ್ರೀಗಳಿಂದ ಬಿಡುಗಡೆ

news

0

ಬೆಳಗಾವಿ 11:(news belgaum) ಜನಮನ ಶ್ರೀಮಂತಗೊಳಿಸುವುದೇ ಜಾನಪದ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಹೇಳಿದರು.ನಗರದ ಜ್ಞಾನ ಯೋಗಾಶ್ರಮದಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಸಿದ್ದೇಶ್ವರ ಶ್ರೀಗಳು ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಕವಿ, ಲೇಖಕ ಜ್ಯೋತಿರ್ಲಿಂಗ ಹೊನಕಟ್ಟಿ ಅವರ ಜಾನಪದ ಬುತ್ತಿ ಎಂಬ ಸಂಗ್ರಹ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಾನಪದ ಮನುಷ್ಯನ ಮೂಲ ಸಂವೇದನೆಯಾಗಿದೆ. ಅಂದಿನ ಅನಕ್ಷರಸ್ಥರು ತಮ್ಮ ಅನುಭವ ಹಾಗೂ ಅನುಭಾವದ ಮೂಲಕ ಕಟ್ಟಿದ ಕವಿತೆ, ಹಾಡುಗಳೇ ಜಾನಪದ ಸಾಹಿತ್ಯವಾಗಿದೆ. ಮನುಷ್ಯನಲ್ಲಿರುವ ಮದ, ಮತ್ಸರ, ಕ್ರೋಧ, ಲೋಭ, ಕಾಮ, ಮೋಹಗಳಂತಹ ಅರಿಷಡ್ವರ್ಗಗಳಿಂದ ಸಂಯಮತೆ ಪಡೆದು ಸನ್ಮಾರ್ಗ ಜಾನಪದ ಬುತ್ತಿ, ಸಿದ್ದೇಶ್ವರ ಶ್ರೀಗಳಿಂದ ಬಿಡುಗಡೆ- Tarun krantiಬೋಧಿಸುವ ಜೀವಾಳ ಜಾನಪದ ಸಾಹಿತ್ಯದಲ್ಲಿದೆ ಎಂದರು.ಕವಿ, ಲೇಖಕ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ನಮ್ಮ ಜಿಲ್ಲೆಯ ಇಂಡಿ ತಾಲೂಕಿನವರಾಗಿದ್ದು, ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿ ಹಾಗೂ ಕವಿಯಾಗಿದ್ದಾರೆ. ಪೊಲೀಸ್ ಇಲಾಖೆಯ ಒತ್ತಡದ ಕಾರ್ಯದಲ್ಲೂ ತಮ್ಮ ಪ್ರವೃತ್ತಿಯನ್ನು ಉಸಿರಾಗಿಸಿಕೊಂಡು ಜಾನಪದ ಸೊಗಡನ್ನು ಅಕ್ಷರದ ಮೂಲಕ ಅಜರಾಮರವಾಗಿ ಉಳಿಸಲು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ಇಂದಿನ ಆಧುನಿಕ ಭರಾಟೆಯಲ್ಲಿ ಜಾನಪದ ಸೊಗಡು ಹಾಗೂ ಸಾಹಿತ್ಯ ಸೊರಗುತ್ತಿದೆ. ಇದು ಖೇದಕರ ಸಂಗತಿ. ಜಾನಪದ ಸಾಹಿತ್ಯ ಮನುಷ್ಯನ ಅರಿವಿನ ಹಾಗೂ ಕರುಳಿನ ಸಾಹಿತ್ಯವಾಗಿದೆ. ಜಾನಪದದ ಬೇರನ್ನು ಗಟ್ಟಿಗೊಳಿಸಲು ನಾವೆಲ್ಲರು ಮುಂದಾಗಬೇಕಿದೆ ಎಂದು ಹೇಳಿದರು.
ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಜಾನಪದ ಬುತ್ತಿ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯವಹಿಸಿದ್ದರು.
ಕವಿ, ಲೇಖಕ ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ ಅವರು ತತ್ವ ಪದ ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.ಈ ಸಂದರ್ಭದಲ್ಲಿ ಆತ್ಮಾರಾಮ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸಂಗು ಸಜ್ಜನ, ಸತ್ಯಭಾಮ ಹೊನಕಟ್ಟಿ, ಅನ್ನಪೂರ್ಣ, ಮಹಾದೇವಿ, ಉಮೇಶ ಶಿವಶರಣ, ಪದವಿ ಕಾಲೇಜಿನ ಶಿಕ್ಷಕರ ವೃಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.