ಉತ್ತಮ ಸಮಾಜಕ್ಕಾಗಿ

ಕಚೇರಿ ಸ್ಥಳಾಂತರಗೊಳ್ಳಲಿ:ಮಂಗಲಾ ಮೆಟಗುಡ್ಡ

news

0

ರಾಜ್ಯದ ಎರಡನೇಯ ರಾಜಧಾನಿಗೆ ಪ್ರಮುಖ ಕಚೇರಿ ಸ್ಥಳಾಂತರಗೊಳ್ಳಲಿ:ಮಂಗಲಾ ಮೆಟಗುಡ್ಡ
ಬೆಳಗಾವಿ: (news belgaum)ಬೆಳಗಾವಿಯು ರಾಜ್ಯದ ಎರಡನೇಯ ರಾಜಧಾನಿಯಂತಿದೆ ಇಲ್ಲಿ ಸುವರ್ಣ ಸೌಧಕ್ಕೆ ರಾಜ್ಯದ ಪ್ರಮುಖ ಕಚೇರಿಗಳು ಸ್ಥಳಾಂತರಗೊಳ್ಳಬೇಕು. ಇಲ್ಲಿನ ಕನ್ನಡರಿಗರ ಹೃದಯ ವೈಶಾಲ್ಯತೆಗೆ ಕನ್ನಡ ಪರ ಚಟುವಟಿಕೆಗಳು ಜರಗುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ದತ್ತಿ ಕಾರ್ಯಗಳು ಇಂದು ಮೂಡಿಬರುತ್ತಿರುವದು ಶ್ಲಾಘನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಮಂಗಲಾ ಮೆಟ್ಟಗುಡ ಕರೆ ನೀಡಿದರು.News Belgaum-ಕಚೇರಿ ಸ್ಥಳಾಂತರಗೊಳ್ಳಲಿ:ಮಂಗಲಾ ಮೆಟಗುಡ್ಡ
News Belgaum-ಕಚೇರಿ ಸ್ಥಳಾಂತರಗೊಳ್ಳಲಿ:ಮಂಗಲಾ ಮೆಟಗುಡ್ಡ 1ಸ್ಥಳೀಯ ಸಾಯಿ ಅಂಜನ ಪಿಯು ಕಾಲೇಜು ನಾರ್ವೇಕರ್ ಬೀದಿಯಲ್ಲಿ ಶನಿವಾರ 11 ರಂದು ಆಯೋಜಿಸಲಾಗಿದ್ದ ಡಾ. ಬೆಟಗೇರಿ ಕೃಷ್ಣಶರ್ಮ ಮರಿಮಲ್ಲಪ್ಪ ಮಲಶೆಟ್ಟಿ ನೇಮಿನಾಥ ಕಲ್ಲಪ್ಪ ಇಂಚಲ ಗೀಗಿಪದ ಮತ್ತು ಜಾನಪದ ಸೋಗಡು ಬಹುಮಾನ ವಿತರಣೆ ದತ್ತಿ ನಿಧಿಗಳ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದ.
ಮುಖ್ಯ ಉಪನ್ಯಾಸಕರಾದ ಪ್ರೊ.ಹೊಳಬಸಯ್ಯ ಸಂಕಣ್ಣವರ ಮಾತನಾಡಿ ಅವರು ಡಾ.ಕೃಷ್ಣಶರ್ಮ ಅವರು ಕವಿಯಾಗಿ ಕಾದಂಬರಿಕಾರರಾಗಿ ಜಾನಪದ ಸೊಗಡನ್ನು ಸೂಸಿದ ಅವರು ಕನ್ನಡದ ಕಣ್ಮಿಣಿಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೋ. ಎಚ್ ಕೆ ಗುರವ, ಅಮಿತ ಮಿಠಾರಿಯವರು ಯುವಕರು ಸುಸಂಸ್ಕøತರಾಗಬೇಕೆಂದರು. ವಿವಿಧ ರಂಗದಲ್ಲಿ ಸಾಧನೆಗೈದ ವಾಯ್ ಬಿ.ಕಡಕೋಳ, ಎಚ್ ಕೆ ಗುರವ, ಮಹಾಲಿಂಗಪ್ಪಾ ಕೋಲಕಾರ ಅಮಿತ ಮಿಠಾರಿ, ಅಶೋಕ ಉಳೇಗಡಿ ಇವರು ಗೌರವಿಸಿ ಸನ್ಮಾನಿಸಲಾಯಿತು.
ಮಹಾಲಿಂಗಪ್ಪಾ ಕೋಲಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಂಗಲಾ ಮೆಟ್ಟಗುಡ ನಾಯಕತ್ವದಲ್ಲಿ ಚೆನ್ನಾಗಿ ಕಾರ್ಯ ಮಾಡುತ್ತಿದೆ ಎಂದರು.
ಭಾವಗೀತೆ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಬಹುಮಾನ ವಿತರಿಸಲಾಯಿತು. ಪ್ರತಿಭಾ ಕಳ್ಳಿಮಠ ಇವರಿಂದ ಜಾನಪದ ಗೀತೆಗಳು ಗೀತಾ ಹುಬ್ಬಳ್ಳಿ ಗೀಗಿಪದಗಳು ಜರುಗಿದವು. ನೂತನ ತಾಲೂಕುಗಳ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಗೊಸಿಸಲಾಯಿತ್ತು ಕಿತ್ತೂರ ತಾಲೂಕಿಗೆ ಮಹೇಶ ಚನ್ನಂಗಿ, ನಿಪ್ಪಾಣಿಗೆ ವಿದ್ಯಾವತಿ ಜನವಾಡೆ, ಕಾಗವಾಡಕ್ಕೆ ಡಾ.ಸಿದ್ದನಗೌಡ ಕಾಗೆ, ಮೂಡಲಗಿಗೆ ಪ್ರೋ. ರಾಜಶೇಖರ ಬಂದಿ ಇವರನ್ನು ಅಧ್ಯಕ್ಷರುಗಳಾಗಿ ಘೋಷಿಸಲಾಯಿತು. ಎಮ್ ವಾಯ್ ಮೆಣಸಿನಕಾಯಿ ಸರ್ವರನ್ನೂ ಸ್ವಾಗತಿಸಿದರು. ಡಾ ಹೇಮಾ ಸೊನ್ನೊಳಿ ನಿರೂಪಿಸಿದರು.ಜ್ಯೋತಿ ಬದಾಮಿ ವಂದಿಸಿದರು. ಪ್ರತಿಬಾ ಕಳ್ಳಿಮಠ ನಾಡಗೀತೆ ಹಾಡಿದರು. ಬಸವರಾಜ ಸಸಾಲಟ್ಟಿ, ಬಿ ಬಿ ಮಠಮತಿ, ರಾಮಚಂದ್ರ ಡವಳ್ಳಿ, ಶಾಂತಾ ಮಸೂತಿ, ರಮೇಶ ಮಗದುಮ್ಮ, ಗೀತಾ , ಅನುಸೂಯಾ ಬಿನಾ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.