ಉತ್ತಮ ಸಮಾಜಕ್ಕಾಗಿ

HDK ಜನಪ್ರಿಯತೆ ಸಹಿಸದ ಬಿಜೆಪಿ ವೃತಾ ಆಲಾಪದ ಅಲೆದಾಟ: ತಿವಿದ ಕೋನರೆಡ್ಡಿ

news belagavi

0

ಬೆಳಗಾವಿ: (news belgaum)ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ₹49 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡುವ ಮೂಲಕ ದೇಶದ ಅತಿ ಹೆಚ್ಚು ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಿದ್ದಾರೆ ಎಂದು ಜೆಡಿಎಸ್ ವರಿಷ್ಠ ನಾಯಕ ಹಾಗೂ ಶಾಸಕ ಎನ್. ಎಚ್. ಕೋನರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
News Belgaum-HDK ಜನಪ್ರಿಯತೆ ಸಹಿಸದ ಬಿಜೆಪಿ ವೃತಾ ಆಲಾಪದ ಅಲೆದಾಟ: ತಿವಿದ ಕೋನರೆಡ್ಡಿ 1ಶನಿವಾರ ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್. ಡಿ. ಕುಮಾರಸ್ವಾಮಿ ಅವರ ಜನಪ್ರಿಯತೆ ಸಹಿಸದೇ ಹತಾಶಗೊಂಡಿರುವ ಬಿಜೆಪಿ ಪಕ್ಷದ ನಾಯಕರು ದಿನನಿತ್ಯ ಆರೋಪ ಹಾಗೂ ಹಾಸ್ಯ ಮಾಡುತ್ತ ತಿರುಗಾಡುತ್ತಿದ್ದಾರೆ. ಏಕೀಕರಣ ಚಳುವಳಿ ಮೂಲಕ ಹುಟ್ಟಿದ ಕರ್ನಾಟಕ ರಾಜ್ಯ ಒಡೆಯುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದ 108 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಪಕ್ಷದ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಜೆ‌ಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವದು ಎಂದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಸಂಯಮ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ತೀರ್ಪು ರಾಜ್ಯದ ಪರ ಆಶಯ:ಮುಂಬರುವ ಆ. 20 ರೊಳಗೆ ಮಹದಾಯಿ ತೀರ್ಪು ಬರಲಿದ್ದು ಅದು ರಾಜ್ಯದ ಪರ ಬರುವ ನಿರೀಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಶಿವನಗೌಡ ಪಾಟೀಲ, ರಮೇಶ ಗೋಕಾಕ, ನಾಸೀರ ಬಾಗವಾನ, ಶ್ರೀಶೈಲ್ ಪಡಗಲ್, ಕಲಿಮ ಮಾಡಿವಾಲೆ, ಚನ್ನಪ್ಪ ವಗ್ಗನ್ನವರ ಇತರರು ಉಪಸ್ಥಿತರಿದ್ದರು.  

Leave A Reply

 Click this button or press Ctrl+G to toggle between Kannada and English

Your email address will not be published.