ಉತ್ತಮ ಸಮಾಜಕ್ಕಾಗಿ

ಚಿಕ್ಯಾಗೋ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ ವಿವೇಕಾನಂದರು ಯುವ ಜನಾಂಗಕ್ಕೆ ಮಾದರಿ: ಡಾ. ಗೋವಿಂದರಾಯ

news belagavi

0

ಬೆಳಗಾವಿ:(news belgaum) ಸ್ವಾಮಿ ವಿವೇಕಾನಂದರು ಚಿಕ್ಯಾಗೋ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಉಪನ್ಯಾಸ ವಿಶ್ವದ ಶ್ರೇಷ್ಠ ಉಪನ್ಯಾಸವಾಗಿದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಉಪನ್ಯಾಸವಾಗಿದೆ ಎಂದು ಕುಣಿಗಲ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಎಂ. ಗೋವಿಂದರಾಯ ಅವರು ಹೇಳಿದರು.
News Belgaum-ಚಿಕ್ಯಾಗೋ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ ವಿವೇಕಾನಂದರು ಯುವ ಜನಾಂಗಕ್ಕೆ ಮಾದರಿ: ಡಾ. ಗೋವಿಂದರಾಯ 1ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ (ಸೆ.11) ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
1893ರಲ್ಲಿ ಜರುಗಿದ ಚಿಕ್ಯಾಗೋ ಸಮ್ಮೇಳನ ವಿವೇಕಾನಂದರ ಜೀವನದ ದಿಕ್ಕನ್ನೇ ಬದಲಾಯಿಸಿತು. ಈ ಸಮ್ಮೇಳನದ ಮೂಲಕ ವಿವೇಕಾನಂದರು ತಮ್ಮ ಅಗಾದ ಜ್ಞಾನ ಹಾಗೂ ಭಾರತದ ಸಂಸ್ಕøತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದರು. ಚಿಕ್ಯಾಗೋ ಸಮ್ಮೇಳನ ಸಮಸ್ತ ಮಾನವ ಜನಾಂಗದ ಸಮ್ಮೇಳನವಾಗಿತ್ತು ಎಂದರು.
ವಿವೇಕಾನಂದರು ಸಹಿಷ್ಣುತಾ ಭಾವವನ್ನು ಪ್ರಪಂಚಕ್ಕೆ ಸಂದೇಶವಾಗಿ ನೀಡಿದರು. ಹಿಂದೂ ಧರ್ಮಕ್ಕೆ ಅಪಾರ ಕೊಡುಗೆ ನೀಡಿ ವಿಶ್ವಧರ್ಮಕ್ಕೆ ತಳಹದಿ ಹಾಕಿದರು. ವಿವೇಕಾನಂದರು ಯುವಜನಾಂಗಕ್ಕೆ ಮಾದರಿಯಾಗಿದ್ದು, ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ವಿವೇಕಾನಂದರ ಬಗ್ಗೆ ಓದಿ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದರು. ವಿವೇಕಾನಂದರ ಬಗ್ಗೆ ಓದಿದಾಗ ತಮ್ಮಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚಾಯಿತು ಎಂದು ಗಾಂಧೀಜಿ ಅವರು ಉಲ್ಲೇಖಿಸಿದ್ದಾರೆ. ಗಾಂಧೀಜಿ ಅವರು ಕೂಡ ವಿವೇಕಾನಂದರಿಂದ ಪ್ರೇರಿತರಾಗಿದ್ದರು ಎಂದು ತಿಳಿಸಿದರು.
ವಿವೇಕಾನಂದರು ಯುವಜನಾಂಗದ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿದ್ದರು. ಯುವ ಜನಾಂಗದಿಂದ ಮಾತ್ರ ದೇಶದ ಏಳ್ಗೆ ಸಾಧ್ಯ ಎಂದು ಅಂದಿನ ಕಾಲದಲ್ಲೇ ತಿಳಿಸಿದ್ದರು. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಹಾಗೂ ಯುವಕರು ವಿವೇಕಾನಂದರ ಜೀವನ, ಸಂದೇಶಗಳನ್ನು ಅರ್ಥೈಸಿಕೊಳ್ಳಬೇಕು. ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
News Belgaum-ಚಿಕ್ಯಾಗೋ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ ವಿವೇಕಾನಂದರು ಯುವ ಜನಾಂಗಕ್ಕೆ ಮಾದರಿ: ಡಾ. ಗೋವಿಂದರಾಯ 4ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ವಿವೇಕಾನಂದರ ಚಿಕ್ಯಾಗೋ ಭಾಷಣಕ್ಕಿಂತ ಮುಂಚೆ ವಿದೇಶಿಗರಲ್ಲಿ ಭಾರತದ ಬಗ್ಗೆ ಕೀಳರಿಮೆ ಇತ್ತು. ವಿವೇಕಾನಂದರ ಭಾಷಣದ ನಂತರ ಭಾರತದ ಸಂಸ್ಕøತಿ, ಆಚಾರ, ವಿಚಾರ ಪ್ರಪಂಚದಾದ್ಯಂತ ಪ್ರಚುರವಾಯಿತು ಎಂದು ಹೇಳಿದರು.
1892ರ ಅಕ್ಟೋಬರ್ 15 ರಂದು ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿ, 12 ದಿನಗಳ ಕಾಲ ಇಲ್ಲಿ ತಂಗಿದ್ದರು ಎಂಬುದು ಹೆಮ್ಮೆಯ ವಿಚಾರ. ನಗರದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ ಅವರು, ಸ್ವಾಮಿ ವಿವೇಕಾನಂದರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ವೇದ, ಉಪನಿಷತ್, ರಾಮಾಯಣ, ಮಹಾಭಾರತ ಸೇರಿದಂತೆ ಅನೇಕ ವಿಷಯಗಳನ್ನು ವಿಸ್ಕøತವಾಗಿ ತಿಳಿದುಕೊಂಡಿದ್ದರು ಎಂದು ಹೇಳಿದರು.
ವಿದ್ಯಾರ್ಥಿಗಳು ವಿವೇಕಾನಂದರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಬೇಕು. ತಮ್ಮಲ್ಲಿನ ಕೀಳರಿಮೆ ತೊಡೆದು ಹಾಕಿ ಆತ್ಮವಿಶ್ವಾಸ, ಧನಾತ್ಮಕ ಚಿಂತನೆಯನ್ನು ಹೊಂದಿ ಸಾಧನೆಗೈಯ್ಯಬೇಕೆಂದು ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಸೀಬಿ ರಂಗಯ್ಯ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಸಮ್ಮೇಳನದ 125ನೇ ವರ್ಷಾಚರಣೆ ಅಂಗವಾಗಿ ಸೆ.11 ರಿಂದ ಅ.11 ರವರೆಗೆ ಒಂದು ತಿಂಗಳ ಕಾಲ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕಗಳನ್ನು ಖರೀದಿಸಿ ಓದಬೇಕು. ವಿವೇಕಾನಂದರ ಜೀವನ ಹಾಗೂ ಸಂದೇಶಗಳನ್ನು ಅರ್ಥೈಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ ಕರಿಶಂಕರಿ, ತಹಶೀಲ್ದಾರ ಮುಂಜುಳಾ ನಾಯಕ, ಡಿಡಿಪಿಯು ಪಿ.ಜಿ. ರಜಪೂತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಗರದ ವಿವಿಧ ಶಾಲಾ, ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿನಾಯಕ ಮೋರೆ ಅವರು ನಾಡಗೀತೆ ಹಾಡಿದರು. ಸಿದ್ದಣ್ಣ ದುರದುಂಡಿ ಅವರು ನಿರೂಪಿಸಿದರು. ಎಂ.ಎ. ಮುಲ್ಲಾ ಅವರು ವಂದಿಸಿದರು.

ಜಾಥಾ:
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಿಂದ ಕುಮಾರ ಗಂಧರ್ವ ರಂಗಮಂದಿರದವರೆಗೆ ಜಾಥಾ ಜರುಗಿತು.
ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಅವರು ಜಾಥಾಗೆ ಚಾಲನೆ ನೀಡಿದರು. ತಹಶೀಲ್ದಾರ ಮಂಜುಳಾ ನಾಯಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಸೀಬಿ ರಂಗಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಗರದ ವಿವಿಧ ಶಾಲಾ, ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.