ಉತ್ತಮ ಸಮಾಜಕ್ಕಾಗಿ

ನಾನು ಮರೆಯದ ಊರು ಬೆಳಗಾವಿ: ರೈಲ್ವೇ ಅಧೀಕ್ಷಕ ಎಸ್. ಸುರೇಶ ಭಾವುಕ

I do not forget Belagavi: Railway Superintendent S. Suresh emotional

0

ಬೆಳಗಾವಿ: (news belagavi) ಸುದೀರ್ಘ 34 ವರ್ಷಗಳ ಸೇವೆಯ ನಂತರ ಬೆಳಗಾವಿ ರೈಲು ನಿಲ್ದಾಣದ ಅಧೀಕ್ಷಕರಾಗಿ ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿಯಾದ ಎಸ್. ಸುರೇಶ ಅವರ ಅಭಿನಂದನಾ ಕಾರ್ಯಕ್ರಮ ಇಂದು ರೈಲ್ವೇ ಕಮ್ಯನಿಟಿ ಭವನದಲ್ಲಿ ನಡೆಯಿತು. ಬೆಳಗಾವಿಯಂಥ ಸುಂದರ, ಸಾಮರಸ್ಯದ ನಗರದಲ್ಲಿ ಕೇಂದ್ರ ರೈಲ್ವೇ ಇಲಾಖೆಯ ಸ್ಟೇಷನ್ ಅಧೀಕ್ಷಕನಾಗಿ ಕೆಲಸ ಮಾಡಿದ ಅನುಭವ ಜೀವನದುದ್ದಕ್ಕೂ ಸ್ಮರಣೀಯ ಎಂದರು. ಜಿಲ್ಲಾಡಳಿತ, ಜನಪ್ರತಿನಿಧಿಗಳು & ಸಂಘ-ಸಂಸ್ಥೆ ಹಾಗೂ ಜನತೆ ತಮ್ಮ ಸೇವಾವಧಿಯಲ್ಲಿ ರೈಲ್ವೇ ಇಲಾಖೆಯೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು ಎಂದು ಎಸ್. ಸುರೇಶ ಸ್ಮರಿಸಿಕೊಂಡರು.

Auto Draft- Tarun kranti 49
ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗೂ ಬೆಳಗಾವಿ ನಗರ ಉತ್ತರ ಶಾಸಕ ಅನಿಲ ಬೆನಕೆ ಹಿರಿಯ ಅಧಿಕಾರಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಸಂಸದ ಸುರೇಶ ಅಂಗಡಿ ಅವರು ಮಾತನಾಡಿ 34 ವರ್ಷಗಳ ಕಾಲ ಪ್ರಾಮಾಣಿಕ ಅಧಿಕಾರಿಯಾಗಿ, ಬೆಳಗಾವಿ ವಿಭಾಗದ ಜನರ ಪ್ರೀತಿ ಗಳಿಸಿದ್ದಾರೆ. ರೈಲ್ವೇ ನಿಲ್ದಾಣ ಅಭಿವೃದ್ಧಿ ವಿಷಯದಲ್ಲಿ ಎಸ್. ಸುರೇಶ ಅವರ ದುಡಿಮೆ ಗಮನಾರ್ಹವಾಗಿತ್ತು. ಎಸ್. ಸುರೇಶ ನಿವೃತ್ತಿ ನಂತರವೂ ಸಮಾಜ ಸೇವೆಯಲ್ಲಿ ಹೆಚ್ಚು ಕ್ರೀಯಾಶೀಲ ಆಗಲಿದ್ದಾರೆ ಎಂದರು.

ನಾನು ಮರೆಯದ ಊರು ಬೆಳಗಾವಿ: ರೈಲ್ವೇ ಅಧೀಕ್ಷಕ ಎಸ್. ಸುರೇಶ ಭಾವುಕ- Tarun kranti
ಶಾಸಕ ಅನಿಲ ಬೆನಕೆ ಮಾತನಾಡಿ ಸಮಯ ಮತ್ತು ವಿಶ್ವಾಸಾರ್ಯತೆಗೆ ಹೆಸರಾದ ರೈಲ್ವೇ ಇಲಾಖೆಯ ಜಿಲ್ಲಾ ಸ್ಟೇಷನ್ ಮುಖ್ಯಸ್ಥರಾಗಿ ಎಸ್. ಸುರೇಶ ಅವರು ಸ್ವಚ್ಛತೆ & ಸುವ್ಯವಸ್ಥೆಗೆ ದುಡಿದದ್ದು ಗಮನಾರ್ಹ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಾನು ಮರೆಯದ ಊರು ಬೆಳಗಾವಿ: ರೈಲ್ವೇ ಅಧೀಕ್ಷಕ ಎಸ್. ಸುರೇಶ ಭಾವುಕ- Tarun kranti 1
ಬೆಳಗಾವಿ ನಗರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್. ಸುರೇಶ ದಂಪತಿಯನ್ನು ಅಭಿನಂದಿಸಿದರು. ಪಿ. ಸೇಲ್ವನ್, ಹುಬ್ಬಳ್ಳಿ ಸೀನಿಯರ್ ಡಿವಿಷನ್ ಅಧಿಕಾರಿ ಕೃಷ್ಣಾರೆಡ್ಡಿ, ಸುಮಿತ್ರಾ ಸುರೇಶ ಎಸ್, ಸುನೀಲ ಅಪ್ಟೇಕರ ಇತರರು ಉಪಸ್ಥಿತರಿದ್ದರು. ಪದ್ಮಾ ಚೌಗುಲೆ ಸ್ವಾಗತಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: