ಉತ್ತಮ ಸಮಾಜಕ್ಕಾಗಿ

news belgaum)ಸಿಬ್ಬಂದಿ ಮಾಹಿತಿ ನೀಡದಿದ್ದರೆ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ

If staff does not provide information: Deputy Commissioner warns

0

ಮಾದರಿ ನೀತಿ ಸಂಹಿತೆ ಅನುಷ್ಠಾನ: ಗ್ರಾಪಂ ಮಟ್ಟದಲ್ಲಿ ತಂಡ ರಚನೆ

ಬೆಳಗಾವಿ:( news belgaum) “ಮುಂಬರುವ ವಿಧಾನಸಭೆ ಚುನಾವಣೆಗೆ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಎಲ್ಲ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ನೌಕರರ ಬಗ್ಗೆ ತಕ್ಷಣವೇ ನಿಖರವಾದ ಮಾಹಿತಿ ಒದಗಿಸಬೇಕು. ಒಂದು ವೇಳೆ ಸಮರ್ಪಕ ಮಾಹಿತಿ ನೀಡಿದರೆ ಅಥವಾ ವಿಳಂಬ ಮಾಡಿದರೆ ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಮಾ.21) ನಡೆದ ಮಾದರಿ ನೀತಿ ಸಂಹಿತೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯನ್ನು ಸುಗಮವಾಗಿ ನಡೆಸಬೇಕಾದರೆ ಅಗತ್ಯ ಸಿಬ್ಬಂದಿ ನಿಯೋಜನೆ ಅತ್ಯಗತ್ಯವಾಗಿದೆ. ಆದ್ದರಿಂದ ಚುನಾವಣಾ ಕರ್ತವ್ಯದಿಂದ ಯಾರಿಗೂ ವಿನಾಯಿತಿ ನೀಡುವುದಿಲ್ಲ; ಪ್ರತಿಯೊಬ್ಬ ನೌಕರರು ಚುನಾವಣಾ ಕೆಲಸ ಮಾಡಬೇಕು ಎಂದರು.

News Belgaum-ಮಾದರಿ ನೀತಿ ಸಂಹಿತೆ ಅನುಷ್ಠಾನ: ಗ್ರಾಪಂ ಮಟ್ಟದಲ್ಲಿ ತಂಡ ರಚನೆಚುನಾವಣೆ ನೀತಿಸಂಹಿತೆ ಜಾರಿಯಾದ 24 ಗಂಟೆಯೊಳಗೆ ನಾಮಫಲಕಗಳು, ಬ್ಯಾನರ್ಸ್, ಬಂಟಿಂಗ್ಸ್, ಪೋಸ್ಟ್‍ರ್ ಮುಂತಾದ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಇರುವ ಪ್ರದರ್ಶನಗಳನ್ನು ತೆರವುಗೊಳಿಸಲು ಈಗಲೇ ತಂಡಗಳನ್ನು ರಚಿಸಿ, ಅಗತ್ಯ ಪರಿಕರಗಳನ್ನು ಸಜ್ಜಾಗಿ ಇಟ್ಟುಕೊಳ್ಳುಬೇಕು ಎಂದು ಸೂಚನೆ ನೀಡಿದರು.
ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗಾಗಿ ಸರ್ಕಾರ ಅಥವಾ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.
ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಜಾಗದಲ್ಲಿ ಬ್ಯಾನರ್ಸ್‍ಗಳು, ಬಂಟಿಂಗ್ಸ್, ಪೋಸ್ಟರ್ ಇತ್ಯಾದಿ ಜಾಹಿರಾತುಗಳನ್ನು ಪ್ರದರ್ಶಿಸಲು ನೀತಿ ಸಂಹಿತೆಯ ನಿಯಮಗಳ ಪ್ರಕಾರ ಜಾಗೆಯ ಮಾಲಿಕರು ಮತ್ತು ಆ ಭಾಗದ ಸ್ಥಳೀಯ ಪ್ರಾಧಿಕಾರÀಗಳಿಂದ ಪರವಾನಿಗೆಯನ್ನು ಪಡೆಯಬೇಕು.
ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗಾಗಿ ಸಾರಿಗೆ ಸಂಸ್ಥೆಯ ಬಸ್‍ಗಳ ಮೇಲೆ ಇರುವ ಎಲ್ಲ ರಾಕೀಯ ನಾಯಕರ ಭಾವಚಿತ್ರಗಳು, ರಾಜಕೀಯ ಪಕ್ಷಗಳ ಚಿಹ್ನೆ ಇತ್ಯಾದಿ ಹೊಂದಿದ ಪ್ರಚಾರ ಫಲಕ, ಸಾಮಾಗ್ರಿಗಳನ್ನು, ಜಾಹಿರಾತುಗಳನ್ನು ತೆರವುಗೊಳಿಸುವದು. ಹಾಗೂ ಬಸ್ ನಿಲ್ದಾಣಗಳಲ್ಲಿ ಆಡಿಯೋ, ವಿಡಿಯೋ ಮೂಲಕ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ, ಅಭ್ಯರ್ಥಿಯ, ರಾಜಕೀಯ ಮುಖಂಡರ ಸಾಧನೆಗಳ ಪ್ರಾಚಾರವನ್ನು ಸ್ಥಗಿತಗೊಳಿಸಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್-108 ಹಾಗೂ ಇತರೆ ವಾಹನಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಇದ್ದರೆ ತೆರವುಗೊಳಿಸಬೇಕು.
ಸರ್ಕಾರಿ ಕಚೇರಿಯಲ್ಲಿ, ಆವರಣದಲ್ಲಿ ಅಂತಹ ಬ್ಯಾನರ್ಸ್, ಬಂಟಿಂಗ್ಸ್, ಪೋಸ್ಟರ್ ಇತ್ಯಾದಿ ಜಾಹಿರಾತುಗಳು, ನಾಮಫಲಕಗಳು ಇದ್ದಲ್ಲಿ 24 ಗಂಟೆಗೊಳಗಾಗಿ ತೆರವುಗೊಳಿಸಬೇಕು.
ಅದೇ ರೀತಿ ಇಲಾಖೆಯ ವೆಬ್‍ಸೈಟ್‍ನಲ್ಲಿ ರಾಜಕೀಯ ನಾಯಕರ, ಪಕ್ಷಗಳ, ಅಭ್ಯರ್ಥಿಗಳ ಪೋಟೊ, ಚಿಹ್ನೆ ಇತ್ಯಾದಿ ಇದ್ದಲ್ಲಿ ತೆರವುಗೊಳಿಸುವದು. ಜಿಲ್ಲಾ ಮಟ್ಟದ ವೆಬ್‍ಸೈಟ್ ಆಗಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಕ್ರಮಕೈಗೊಳ್ಳುವುದು. ರಾಜ್ಯ ಮಟ್ಟದ ವೆಬ್‍ಸೈಟ್ ಆಗಿದ್ದರೆ, ತಮ್ಮ ತಮ್ಮ ಇಲಾಖೆ ಮುಖಸ್ಥರ ಗಮನಕ್ಕೆ ತರವುದು.
ಯಾವುದೇ ಕಾರಣಕ್ಕೂ ಹೊಸ ಸರ್ಕರಿ ಕಾಮಗಾರಿಗಳನ್ನು (ಕಟ್ಟದ ನಿರ್ಮಾಣ, ಇತರೆ) ಪ್ರಾರಂಭಿಸುಂತಿಲ್ಲ ಮತ್ತು ಈಗಾಗಲೇ ಕಾಮಗಾರಿಗಳನ್ನು ಪ್ರಾರಂಭಿಸಿದ್ದರೆ, ಆ ಕಾಮಗಾರಿಗಳನ್ನು ಮುಂದುವರೆಸುಬಹುದು ಎಂದು ಸೂಚಿಸಲಾಯಿತು.
ನರೇಗಾ ಯೋಜನೆ ಹಾಗೂ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ ಹಾಗೂ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುಂತಿಲ್ಲ ಎಂದು ಸೂಚಿಸಿದರು.
ರಾಜಕಾರಣಿಗಳ ಭೇಟಿ ನಿಷಿದ್ಧ:
ಚುನಾವಣೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಚುನಾವಣೆ ನೀತಿ ಸಂಹಿತೆಯು ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರಾಜಕೀಯ ನಾಯಕರು, ಅಭ್ಯರ್ಥಿ ಮತ್ತು ಮುಖಂಡರ ಭೇಟಿ ಮಾಡದಂತೆ ಹಾಗೂ ಯಾವುದೇ ರೀತಿಯಲ್ಲಿ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು.
ಧಾರ್ಮಿಕ ಸಂಸ್ಥೆಗಳ ಬಳಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

 • ತಂಡ ರಚನೆಗೆ ಸೂಚನೆ:
  ಮಾದರಿ ನೀತಿ ಸಂಹಿತೆಯನ್ನು ತಕ್ಷಣವೇ ಜಾರಿಗೆ ತರಲು ಅನುಕೂಲವಾಗುವಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಒಳಗೊಂಡ ತಂಡವನ್ನು ರಚಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಸೂಚಿಸಿದರು.
  ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮುಖ್ಯಾಧಿಕಾರಿಗಳು, ತಹಶೀಲ್ದಾರ ಹಾಗೂ ಪಿಎಸ್‍ಐ ಅವರನ್ನು ಒಳಗೊಂಡ ತಂಡಗಳನ್ನು ರಚಿಸಬೇಕು ಎಂದು ತಿಳಿಸಿದರು.
  ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರಮೇಶ ಕಳಸದ ಸಭೆಯನ್ನು ನಿರ್ವಹಿಸಿದರು.
  ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.If staff does not provide information: Deputy Commissioner warnsತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

  |  (  Belgaum News | Just Belgaum– ನ್ಯೂಸ್ ಬೆಳಗಾಂ

  ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

  ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

  ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

   

Leave A Reply

 Click this button or press Ctrl+G to toggle between Kannada and English

Your email address will not be published.