ಉತ್ತಮ ಸಮಾಜಕ್ಕಾಗಿ

ತಹಶಿಲ್ದಾರ ತಪ್ಪು ಮಾಡಿದ್ದರೆ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು :ಲಕ್ಷ್ಮೀ ಹೆಬ್ಬಾಳಕರ

news belagavi

0

ಬೆಳಗಾವಿ:(news belgaum) ಕಳೆದ ವಿಧಾನ ಸಭೆ ಚುನಾವಣೆ ವೇಳೆ ಕಷ್ಟ ನೀಡಿದ್ದಾರೆ. ಆದರೂ ನಾನು ಬಹಳ ಚಿಕ್ಕವಳು… ಸತೀಶ ಜಾರಕಿಹೊಳಿ ನನ್ನ ಗುರುಗಳು ಅವರಿಂದ ಬಹಳ ಕಲಿಯುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನುಡಿದಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನನ್ನು ರಾಜಕೀಯವಾಗಿ ಬೆಳೆಸಿದವರೇ ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ತಹಶಿಲ್ದಾರ ತಪ್ಪು ಮಾಡಿದ್ದರೆ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಯಾರು ಎಲ್ಲೆಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬುವುದು ಗೊತ್ತು. ಜಯ ಸಿಗುವವರೆಗೂ ನಾನು ಸುಮ್ಮನಿರಲ್ಲ ಎಂದರು.
ನ್ಯಾಯ ಸಿಗದಿದ್ದರೆ ಪ್ರತಿಭಟನೆ ಅನಿವಾರ್ಯ. ಯಾರನ್ನೂ ಒತ್ತಾಯಪೂರ್ವಕವಾಗಿ ಅಪಹರಣ ಮಾಡಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಕಳೆದ ಬೆಳಗಾವಿ ಎಪಿಎಂಸಿ ಚುನಾವಣೆ ವೇಳೆ ಸ್ವತಃ ಸತೀಶ ಜಾರಕಿಹೊಳಿ ಅವರೇ ನಿರ್ದೇಶಕರನ್ನು ಅಪಹರಣ ಮಾಡಿದ್ದು ಮರೆತ್ತಿದ್ದಾರೆ ಎಂದು ಸತೀಶ ವಿರುದ್ದ ಅಸಮಾಧಾನ ಹೊರಹಾಕಿದರು. ನಾನು ಲಿಂಗಾಯತ ಸಮುದಾಯದಿಂದ ಬಂದಿರಬಹುದು ಆದರೆ ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಜಾರಕಿಹೊಳಿ ಕುಟುಂಬದ ಎಲ್ಲರೂ ಮತ್ತು ಜನತೆ ನನ್ನನ್ನು ಬೆಳಸಿದ್ದಾರೆ. ನನಗೆ ನನ್ನ ಇತಿಮಿತಿ ಗೊತ್ತು. ನನ್ನನ್ನು ರಾಜಕೀಯವಾಗಿ ತುಳಿಯಲು ಎಷ್ಟೇ ಪ್ರಯತ್ನ ನಡೆಸಿದರೂ ಸಹ ನನ್ನನ್ನು ಸಹೃದಯ ಜನರೇ ಬೆಳೆಸುತ್ತಾರೆ. ನಾನು ಮಹಿಳೆ ಎಂಬ ಕಾರಣಕ್ಕೆ ನನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.