ಉತ್ತಮ ಸಮಾಜಕ್ಕಾಗಿ

IGPಗೆ ಬೆದರಿಕೆ ಕರೆ ಗಂಭೀರ:ನೂತನ ಕಮಿಷ್ನರ್ ಎಂ. ಚಂದ್ರಶೇಖರ್

0

ಬೆಳಗಾವಿ (News Belgaum): ಬೆಳಗಾವಿ ನಗರದ 7ನೇ ಪೊಲೀಸ್ ಕಮಿಷ್ನರ್ ಆಗಿ 1998 ನೇ ಬ್ಯಾಚನ ಹಿರಿಯ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಇಂದು ಅಧಿಕಾರ ಸ್ವೀಕರಿಸಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಬ್ಯಾಂಡ್ ಹಾಗೂ ಗಾರ್ಡ್ ಆಫ್ ಹಾನರ್ ಕೊಡುವುದರ ಮೂಲಕ ಆಹ್ವಾನಿಸಲಾಯಿತು. ನಗರ ವ್ಯಾಪ್ತಿಯ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ಹಾಜರಿದ್ದು ಗೌರವ ವಂದನೆ ಸಲ್ಲಿಸಿದರು.

ಬೆಳಗಾವಿಯಲ್ಲಿ ವಿಧಾನಸಭಾ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುವುದು, ಬೆಳಗಾವಿ ರೇಂಜ್ ಐಜಿಪಿ ಅಲೋಕಕುಮಾರ ಅವರಿಗೆ ಹಿಂಡಲಗಾ ಜೈಲಿನ ಖೈದಿಯೊಬ್ಬ ಬೆದರಿಕೆ ಹಾಕಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಈ ಬಗ್ಗೆ ತನಿಖೆ ತೀವ್ರಗೊಳ್ಳುತ್ತದೆ ಎಂದರು.

ಹಿಂಡಲಗಾ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ, ಶಸ್ತ್ರಾಸ್ತಗಳು, ಮೊಬೈಲ್, ಮಾದಕ ವಸ್ತುಗಳ ಬಳಕೆಯ ಬಗ್ಗೆ ತೀವೃ ತಪಾಸಣೆ ನಡೆಸಿ ಕೈದಿಗಳೊಂದಿಗೆ ಶಾಮೀಲಾದವರನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಎಂ. ಚಂದ್ರಶೇಖರ್ ತಿಳಿಸಿದ್ದಾರೆ. ಬೆಳಗಾವಿಗೆ ಬರುವ ಮುಂಚೆ ಎಂ. ಚಂದ್ರಶೇಖರ್ ACB ರಾಜ್ಯ ಐಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಡಿಸಿಪಿ ಸೀಮಾ ಲಾಟಕರ & ಎಸ್. ಬಿ. ಪಾಟೀಲ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.