ಉತ್ತಮ ಸಮಾಜಕ್ಕಾಗಿ

ನಮ್ಮ ಜಿಲ್ಲೆಯ ವಿಷಯದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ:ಶಾಸಕ ಸತೀಶ್​ ಜಾರಕಿಹೊಳಿ

news belagavi

0

ನಮ್ಮ ಜಿಲ್ಲೆಯಲ್ಲಿ ಹೇಗೆ ರಾಜಕಾರಣ ಮಾಡಬೇಕೆಂಬುದು ನಮಗೆ ಗೊತ್ತು: ಸತೀಶ್​ ಜಾರಕಿಹೊಳಿ

ಬೆಂಗಳೂರು: (news belgaum)ಬೆಳಗಾವಿ ರಾಜಕಾರಣದಲ್ಲಿ ಏನು ಸಮಸ್ಯೆ ಇದ್ದರೆ ಆ ಸಮಸ್ಯೆ ಬಗೆಹರಿಸಿಕೊಳ್ಳುವ ಶಕ್ತಿ ನಮಗಿದೆ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಸಹೋದರ ನಡುವೆ ಕೆಲವೊಂದರಲ್ಲಿ ಭಿನ್ನಾಭಿಪ್ರಾಯವಿದೆ. ಇಲ್ಲಾ ಅಂತ ಹೇಳುತ್ತಿಲ್ಲ. ಆದರೆ ನಾವಿಬ್ಬರೂ ಒಂದಾಗಿಯೇ ಇದ್ದೇವೆ ಎಂದರು. ಇದೀಗ ಭೇಟಿ ಮಾಡಿ ಅವರ ಜೊತೆ ಮಾತನಾಡುತ್ತೇನೆ ಎಂದರು.
ಡಿಕೆಶಿಗೆ ಟಾಂಗ್:ನಮ್ಮ ಜಿಲ್ಲೆಯ ವಿಷಯದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ನಾವು ರಾಜಕಾರಣ ಮಾಡ್ತೇವೆ. ಹೇಗೆ ಮಾಡಬೇಕೆಂಬುದೂ ಗೊತ್ತು ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಇಲ್ಲಿಯವರೆಗೆ ಯಾರೂ ನಮ್ಮನ್ನ ಸಂಪರ್ಕಿಸಿಲ್ಲ. ಶ್ರೀರಾಮುಲು ಕೂಡ ಸಂಪರ್ಕಿಸಿಲ್ಲ. ನಾನಂತೂ ಯಾರ ಜೊತೆಯೂ ಮಾತನಾಡಿಲ್ಲ. ರಮೇಶ್ ಜಾರಕಿಹೊಳಿ ಮಾತನಾಡಿದ್ದಾರಾ ಅನ್ನೋದು ಗೊತ್ತಿಲ್ಲ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: