ಉತ್ತಮ ಸಮಾಜಕ್ಕಾಗಿ

ಕರ್ನಾಟಕದ ಭಾಗಗಳಲ್ಲಿ ವಿಜಾಪುರ, ಬಾಗಲಕೋಟ, ಹಾವೇರಿ, ಗದಗ ಎಲ್ಲೆಡೆ ಒಂದಾದರೂ ಸೀಟ್ ಗೆಲ್ಲುವ ಶಕ್ತಿ ನಮಗಿದೆ ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡ

In parts of Karnataka We have the power to win the former Prime Minister H. D. Devgowda

0

ಬೆಳಗಾವಿ: (news belgaum)ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗೊ ಬೆಳಗಾವಿ ಜಿಲ್ಲೆಯಲ್ಲಿ ಸ್ಥಾನ ಗಿಟ್ಟಿಸಲು ಜೆಡಿಎಸ್ ಪ್ರಯತ್ನ ನಡೆಸಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡ ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಸ್ಥಾನ ಗಿಟ್ಟಿಸಲು ಶಕ್ತಿ ಮೀರಿ ಪ್ರಯತ್ನ ಮಾಡಲಾಗುವುದು. ಪ್ರಾದೇಶಿಕ ಪಕ್ಷ ಜೆಡಿಎಸ್ ಬಾಂಬೆ ಕರ್ನಾಟಕದ ಭಾಗಗಳಲ್ಲಿ ವಿಜಾಪುರ, ಬಾಗಲಕೋಟ, ಹಾವೇರಿ, ಗದಗ ಎಲ್ಲೆಡೆ ಒಂದಾದರೂ ಸೀಟ್ ಗೆಲ್ಲುವ ಶಕ್ತಿ ನಮಗಿದೆ ಎಂದರು. ಹಲವಾರು ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಮ್ಮ ಪ್ರಯತ್ನ ಯಶಸ್ಸು ಕೊಡುತ್ತದೆ. ಧಾರವಾಡ ಮೂರು, ಗದಗನಲ್ಲಿ ಒಂದು ಸೀಟ್, ಬಿಜಾಪುರದಲ್ಲಿ 5 ಸೀಟ್ ಘೋಷಣೆ ಮಾಡಲಾಗಿದೆ. ಬಿಎಸ್ಪಿ ಮಾಯಾವತಿ, ಶರದ್ ಪವಾರ ಅವರೊಂದಿಗೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಾನು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ, ನೀರಾವರಿ ಮಂತ್ರಿಯಾಗಿ ಮಾಡಿದ ಸಾಧನೆಗಳು. ಮುಖ್ಯಮಂತ್ರಿ ಎಚ್ಡಿಕೆ ಮಾಡಿರುವ ಸಾಧನೆಗಳ ವಾಸ್ತವಾಂಶ ಜನರ ಎದುರು ತೆರೆದು ಇಡಲಾಗುತ್ತಿದೆ.
News Belgaum-ಕರ್ನಾಟಕದ ಭಾಗಗಳಲ್ಲಿ ವಿಜಾಪುರ, ಬಾಗಲಕೋಟ, ಹಾವೇರಿ, ಗದಗ ಎಲ್ಲೆಡೆ ಒಂದಾದರೂ ಸೀಟ್ ಗೆಲ್ಲುವ ಶಕ್ತಿ ನಮಗಿದೆ ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡIAS, IPS ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಮುಕ್ತ ಅವಕಾಶ, ರಾಜಕೀಯ ಹಸ್ತಕ್ಷೇಪ ರಹಿತ ವಾತಾವರಣ ಬೇಕು ಎಂಬುವುದು ನನ್ನ ಬಯಕೆ. ಅಖಿಲ ಭಾರತೀಯ ಸೇವೆಗಳ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಿ ನನ್ನ ಗಮನಕ್ಕೆ ಬಂದಿದೆ. ರಾಜ್ಯ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ಕಾಯ್ದು ನೊಡೋಣ ಎಂದರು. ರಾಷ್ಟ್ರೀಯ ಪಕ್ಷಗಳನ್ನು ಜನ ದೂರ ಇಟ್ಟು ಪ್ರಾದೇಶಿಕ ಪಕ್ಷಗಳಿಗೆ ಸೇವೆಗೆ ಅವಕಾಶ ನೀಡುವ ಆಶಯ ನಮ್ಮದು ಎಂದು ಗೌಡರು ತಿಳಿಸಿದ್ದಾರೆ.
ಮಾಯಾವತಿ, ಮಮತಾ ಬ್ಯಾನರ್ಜಿ, ಶರದ ಪವಾರ ಅಂಥವರ ಸಹಕಾರ ಪ್ರತ್ಯೇಕ ರಾಜಕೀಯ ಶಕ್ತಿ ಅವತರಿಸಲಿದೆ ಎಂದರು. ಬೆಳಗಾವಿ ಗಡಿ ವಿಚಾರ ಮುಗಿದ ಅಧ್ಯಾಯ, ಲಿಂಗಾಯತ ಧರ್ಮ ರಚನೆ ಬೇಡಿಕೆ ವಿಷಯದಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ, ಜಾರಕಿಹೊಳಿ ಸಹೋದರರು ಒಬ್ಬೊಬ್ಬರು ಪಕ್ಷದಲ್ಲಿದ್ದಾರೆ, ಸತೀಶ ಸಿದ್ದರಾಮಯ್ಯ ಒಂದೆ ಇದ್ದು ಈಗ ಯಾಕೆ ಅವರ ನಡುವೆ ಭಿನ್ನಾಭಿಪ್ರಾಯ ಬಂದಿದೆ ಗೊತ್ತಿಲ್ಲ. ಸತೀಶ ನಮ್ಮಲ್ಲಿ ಕೆಲಸ ಮಾಡಿದ್ದಾರೆ, ಅವರು ರಾಜಕೀಯ ಬೆಳವಣಿಗೆಯಲ್ಲಿ ನಮ್ಮತ್ತ ಬಂದರೆ ಸ್ವಾಗತ ಎಂದರು.
ಈ ಬಾರಿ ನಮ್ಮದೇ ಸರಕಾರ ರಾಜ್ಯದ ಆಡಳಿತ ಹಿಡಿಯಲಿದೆ. ಬೆಳಗಾವಿ ನಗರಕ್ಕೆ ಇನ್ನೂ ಅಭ್ಯರ್ಥಿಗಳ ಆಯ್ಕೆ ಮಾಡಿಲ್ಲ.‌ ಸದ್ಯದಲ್ಲೇ ಸೂಕ್ತ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದರು.
ಪಿಜಿಆರ್ ಸಿಂದ್ಯಾ, ಶಂಕರ ಮಾಡಲಗಿ, ಶಿವನಗೌಡ ಪಾಟೀಲ, ಫೈಜುಲ್ಲಾ ಮಾಡಿವಾಲೆ, ಜಯಶ್ರೀ ಸೂರ್ಯವಂಶಿ, ಚನ್ಬಪ್ಪ ವಗ್ಗನ್ನವರ, ಗುರುರಾಜ ಹುಳ್ಳೇರ, ಗಿರೀಶ ಗೋಕಾಕ, ಸುಭಾಷ ಪೂಜೇರಿ ಇತರರು ಉಪಸ್ಥಿತರಿದ್ದರು.In parts of Karnataka We have the power to win the former Prime Minister H. D. Devgowda

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.