ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಪರ್ಕಿಸಬಹುದು

In the publication

0

ಫೆ.24 ರಿಂದ ಬೆಳವಡಿ ಮಲ್ಲಮ್ಮ ಜ್ಯೋತಿ ಯಾತ್ರೆ
ಬೆಳಗಾವಿ:(news belgaum)  ಬೆಳವಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಫೆಬ್ರವರಿ 24 ರಿಂದ 28 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಸೋಂದಾದಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದವರೆಗೆ ಬೆಳವಡಿ ಮಲ್ಲಮ್ಮ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಫೆ.24 ರಂದು ಬೆಳಿಗ್ಗೆ 7 ಗಂಟೆಗೆ ಜ್ಯೋತಿ ಯಾತ್ರೆ ಪ್ರಾರಂಭವಾಗುವುದು. ಸೋಂದಾದಿಂದ ಬೆಳಗ್ಗೆ 11 ಗಂಟೆಗೆ ಜ್ಯೋತಿಯನ್ನು ಬೀಳ್ಕೊಡಲಾಗುವುದು. ಜ್ಯೋತಿಯು ಮಧ್ಯಾಹ್ನ 1:30 ಗಂಟೆಗೆ ಯಲ್ಲಾಪೂರಕ್ಕೆ ತೆರಳಿ, ಸಂಜೆ 6 ಗಂಟೆಗೆ ಯಲ್ಲಾಪೂರದಿಂದ ಹೊರಟು, ಸಂಜೆ 7 ಗಂಟೆಗೆ ಹಳಿಯಾಳಕ್ಕೆ ತಲುಪುವುದು ನಂತರ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಾಸ್ತವ್ಯ ಅಲ್ಲಿಯೇ ವಾಸ್ತವ್ಯ ಮಾಡುವುದು.
ಫೆ.25 ರಂದು ಬೆಳಿಗ್ಗೆ 9 ಗಂಟೆಗೆ ಜ್ಯೋತಿಯು ಹಳಿಯಾಳದಿಂದ ತೆರಳಿ, 11 ಗಂಟೆಗೆ ಕಲಘಟಗಿಗೆ ಆಗಮಿಸುವುದು. ಕಲಘಟಗಿಯಿಂದ ಸಂಜೆ 4 ಗಂಟೆಗೆ ಅಳ್ನಾವರಕ್ಕೆ ಆಗಮಿಸಿ ವಾಸ್ತವ್ಯಗೊಳ್ಳುವುದು.
ಫೆ.26 ರಂದು ಬೆಳಿಗ್ಗೆ 9 ಗಂಟೆಗೆ ಅಳ್ನಾವರದಿಂದ ತೆರಳಿ ಮಧ್ಯಾಹ್ನ 12 ಗಂಟೆಗೆ ನಂದಗಡಕ್ಕೆ ಆಗಮಿಸುವುದು. ನಂದಗಡದಿಂದ ಸಂಜೆ 6 ಗಂಟೆಗೆ ಖಾನಾಪೂರಕ್ಕೆ ತೆರಳಿ ವಾಸ್ತವ್ಯಗೊಳ್ಳುವುದು.
ಫೆ.27 ರಂದು ಬೆಳಿಗ್ಗೆ 9 ಗಂಟೆಗೆ ಖಾನಾಪೂರದಿಂದ ತೆರಳಿ 10 ಗಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸುವುದು. ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ ತೆರಳಿ ಸಂಜೆ 4 ಗಂಟೆಗೆ ಬೈಲಹೊಂಗಲ ತಲುಪುವುದು.
ಬೈಲಹೊಂಗಲದಿಂದ ರಾತ್ರಿ 8 ಗಂಟೆಗೆ ಸಿದ್ಧ ಸಮುದ್ರದ ಸಿದೇಶ್ವರ ದೇವಸ್ಥಾನಕ್ಕೆ ಜ್ಯೋತಿಯು ಆಗಮಿಸಿ, ವಾಸ್ತವ್ಯಗೊಳ್ಳುವುದು. ಫೆ.28 ರಂದು ಬೆಳಿಗ್ಗೆ 8 ಗಂಟೆಗೆ ಜ್ಯೋತಿಯು ಬೆಳವಡಿಗೆ ತಲುಪುವುದು.
ಫೆ.24 ರಂದು ಅಪ್ರೆಂಟಿಸ್ ಮೇಳ
ಬೆಳಗಾವಿ:  ಹುಬ್ಬಳ್ಳಿಯ ವಿದ್ಯಾ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಧೆಯಲ್ಲಿ ಫೆ.24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಪ್ರೆಂಟಿಸ್ ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ 100ಕ್ಕೂ ಹೆಚ್ಚು ಉದ್ದಮೆದಾರರು ಭಾಗವಹಿಸಿ, ಅಪ್ರೆಂಟಿಸ್ ತರಬೇತಿಗಾಗಿ ತರಬೇತಿದಾರರನ್ನು ನಿಯೋಜಿಸಿಕೊಳ್ಳುವ ನಿರೀಕ್ಷೆ ಇದ್ದು, ಮೇಳದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಐ.ಟಿ.ಐ ಉತ್ತೀರ್ಣರಾದ ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೆತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: 0836-2225342 ಗೆ ಸಂಪರ್ಕಿಸಬಹುದಾಗಿದೆ.

ಫೆ.24 ರಂದು ಉದ್ಯೋಗ ಮೇಳ
ಬೆಳಗಾವಿ:  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಗರದ ಬಾವುರಾವ್ ಕಾಕತ್ಕರ್ ಕಾಲೇಜ್, ಜ್ಯೋತಿ ಕಾಲೇಜ್ ಕಂಪೌಂಡ್, ಕ್ಲಬ್ ರೋಡ್, ಕ್ಯಾಂಪ್ ಆವರಣದಲ್ಲಿ ಫೆ. 24 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ. ಉತ್ತೀರ್ಣ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್ ಹಾಗೂ ಯಾವುದೇ ಡಿಗ್ರಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಮೇಳದಲ್ಲಿ ಉದ್ಯೋಗಾವಕಾಶ ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳಿರುವುದಿಲ್ಲ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ವಿಳಾಸಕ್ಕೆ ಅಥವಾ ದೂ:9743166178 ಗೆ ಸಂಪರ್ಕಿಸಬೇಕೆಂದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ರೈತರಿಗೆ ಮಾರ್ಗದರ್ಶನ
ಬೆಳಗಾವಿ:ತೋಟಗಾರಿಕೆ ಬೆಳೆಗಳ ಬೆಲೆಯ ಅಸಮತೋಲನವನ್ನು ಹೋಗಲಾಡಿಸಲು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಒಂದೇ ಬೆಳೆ ಬೆಳೆಯದೇ ಮಾರುಕಟ್ಟೆಯ ಬೇಡಿಕೆಯ ಅನುಸಾರವಾಗಿ ಹಾಗೂ ದರಗಳನ್ನಾಧರಿಸಿ ಸಮಗ್ರ ತೋಟಗಾರಿಕಾ ಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಜಿಲ್ಲೆಯ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ.
ತೋಟಗಾರಿಕಾ ಇಲಾಖೆಯ ಅಂಗಸಂಸ್ಥೆಯಾದ ಬೆಳಗಾವಿ ಜಿಲ್ಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘಕ್ಕೆ ಜಿಲ್ಲೆಯ ಸದಸ್ಯತ್ವ ಹೊಂದಲು ರೈತರು ತೋಟಗಾರಿಕೆ ಬೆಳೆಗಳನ್ನು ಕಡ್ಡಾಯವಾಗಿ ಬೆಳೆಯುವಂತವರಾಗಿರಬೇಕು.
ಸಂಸ್ಥೆಯು ಸದಸ್ಯತ್ವ ಹೊಂದಿದ ರೈತರಿಗೆ ರೂ.500 ಶೇರು ಮೊತ್ತವನ್ನು ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಸಹಕಾರ ಇಲಾಖೆಯಿಂದ ರಾಜ್ಯವಲಯ ಯೋಜನೆಯಡಿ ಶೇರು ಮೊತ್ತವನ್ನು ಭರಿಸುತ್ತದೆ. ಸಂಸ್ಥೆಯ ಸದಸ್ಯತ್ವ ಹೊಂದಿದ ರೈತ ಸದಸ್ಯರ ತೋಟಗಾರಿಕೆ ಬೆಳೆಗಳನ್ನು ಉತ್ತಮ ಬೆಲೆಗೆ ಖರೀದಿಸಿ, ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ, ಬೆಳಗಾವಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದ ವಿಶೇಷ ಸಭೆ
ಬೆಳಗಾವಿ:  ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮಚಂದ್ರನ್.ಆರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ವಿಶೇಷ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಚಾಂದಿನಿ ಜಿ. ದೇವಡಿ ಇವರು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ 2017-18ರ ತಾಲೂಕುವಾರು ಕಾರ್ಯ ಪ್ರಗತಿ ಕುರಿತು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 195 ಕುಷ್ಠರೋಗ ಭಾದಿತ ಪ್ರಕರಣಗಳು ಕಂಡುಬಂದಿರುತ್ತವೆ, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು
ಪ್ರಸಕ್ತ ವರ್ಷದಲ್ಲಿ ಅಂದರೆ 2017-18ರಲ್ಲಿ ಬೆಳಗಾವಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಇಲ್ಲಿಯ ವರೆಗೆ 76 ಕುಷ್ಠರೋಗ ಭಾದಿತ ಪ್ರಕರಣಗಳನ್ನು ಕಂಡುಹಿಡಿದಿದ್ದಾರೆ, ಅದರಲ್ಲಿ 27 ಆಶಾ ಕಾರ್ಯಕರ್ತೆಯರು ಕುಷ್ಠರೋಗ ಭಾದಿತರಾದವರಿಗೆ ಉಪಚಾರ ನೀಡಿ ಗುಣಪಡಿಸಿದ್ದಾರೆ. ಅವರಿಗೆ ಆಶಾ ಅನುದಾನದಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗಿದೆ ಎಂದು ಕಾರ್ಯಕ್ರಮ ಅಧಿಕಾರಿಗಳು ಸಭೆಗೆ ತಿಳಿಸಿದರು
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚರ್ಮರೋಗ ತಜ್ಞರಾದ ಡಾ.ಶ್ರೀಮತಿ.ಜಯಶ್ರೀ ನಾಯಿಕ ಮತ್ತು ಡಾ.ಸುಶೃತ ಕಾಮೋಜಿ ಅವರು ಮಾತನಾಡಿ ಕುಷ್ಠರೋಗದಿಂದ ಗುಣಮುಖ ಹೊಂದಿದ ಕೆಲವು ಪ್ರಕರಣಗಳಲ್ಲಿ ಮತ್ತೆ ಕುಷ್ಠರೋಗ ಕಂಡು ಬರುತ್ತಿರುವುದಾಗಿ ತಿಳಿಸಿದರು ಮತ್ತು ಎರಡು ವರ್ಷಗಳವರೆಗೆ ಚಿಕಿತ್ಸೆ ನೀಡಿದರೆ ಒಳ್ಳೆಯದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಈ ಕಾರ್ಯಕ್ರಮದ ಕುರಿತು ಜನರಿಗೆ ಆರೋಗ್ಯ, ಶಿಕ್ಷಣ ಮತ್ತು ಸಂವಹನ ಹೆಚ್ಚಿನ ಒತ್ತು ಕೊಟ್ಟು ಗ್ರಾಮಗಳಲ್ಲಿ ಗೋಡೆ ಬರಹಗಳನ್ನು ಬರೆಸುವಂತೆ ತಿಳಿಸಿದರು.
ನಗರ ಪ್ರದೇಶದ ಜನಸಂಪರ್ಕ ಸ್ಥಳಗಳಲ್ಲಿ ಕುಷ್ಠರೋಗದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಹಾಕಲು ತಿಳಿಸಿದರು. ಅಲ್ಲದೇ ಬೆಳಗಾವಿ ಜಿಲ್ಲೆಯು ಭೌಗೋಳಿಕವಾಗಿ ಮತ್ತು ಜನಸಂಖ್ಯಾವಾರು ತುಂಬಾ ದೊಡ್ಡದಾಗಿರುವುದರಿಂದ ಕುಷ್ಠರೋಗ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನವನ್ನು ಸಹ ನಿರ್ದೇಶಕರು ಕುಷ್ಠ ಬೆಂಗಳೂರು ಇವರಲ್ಲಿ ಕೇಳುವಂತೆ ತಿಳಿಸಿದರು.
ಅಲ್ಲದೇ ದೂರದರ್ಶನ, ರೇಡಿಯೋ ಚಾನಲಗಳ ಮೂಲಕ ಕುಷ್ಠರೋಗದ ಬಗ್ಗೆ ಮಾಹಿತಿ ನೀಡುವ ಕಿರು ನಾಟಕಗಳನ್ನು ಪ್ರಸಾರ ಮಾಡುವಂತೆ ತಿಳಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣ ಘಟಕದಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಅನುಮತಿಗಾಗಿ ಅಭಿಯಾನ ನಿರ್ದೇಶಕರಿಗೆ ಮನವಿಮಾಡಿಕೊಳ್ಳಲು ತಿಳಿಸಿದರು,
ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆಗಳಲ್ಲಿ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿ ಮಾತನಾಡಲು ತಿಳಿಸಿದರು. ಸದ್ಯಕ್ಕೆ ಕುಷ್ಠರೋಗ ಕಾರ್ಯಕ್ರಮವು ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಕುಷ್ಠರೋಗ ನಿರ್ಮೂಲನೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದರು.

ಉಚಿತ ವೃತ್ತಿಪರ ತರಬೇತಿ: ಅರ್ಜಿ ಆಹ್ವಾನ
ಬೆಳಗಾವಿ: ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಸಹಯೋಗದಲ್ಲಿ ಡಿ.ಡಿ.ಯು-ಜಿ.ಕೆ.ವೈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ಬಡತನ ರೇಖೆಗಿಂತ ಕೆಳಗಿರುವ ಯುವಕರಿಗೆ ಧಾರವಾಡದ ಅವೋನ್ ಪೆಸಿಲಿಟಿ ಮ್ಯಾನೆಜ್‍ಮೆಂಟ್ ಸರ್ವೀಸಸ್ ಲಿಮಿಟೆಡ್‍ನಲ್ಲಿ ಉದ್ಯೋಗ ಆಧಾರಿತ ಉಚಿತ ವೃತ್ತಿಪರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವೂ ವಿದ್ಯಾವಂತ ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಉದ್ಯೋಗ ಆಧಾರಿತ ಅಲ್ಪಾವಧಿ ತರಬೇತಿ ಒದಗಿಸುವ ಮತ್ತು ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಕರಾರನ್ನು ಹೊಂದಿರುತ್ತದೆ.
ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣ, ಪಿಯುಸಿ/ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳು ಹಾಗೂ ಪದವಿ ಅಥವಾ ಡಿಪ್ಲೋಮಾ ಅನುತ್ತೀರ್ಣರಾದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು 18 ರಿಂದ 25 ವರ್ಷದೊಳಗಿನವರಾಗಿರಬೇಕು. ಪಡಿತರ ಚೀಟಿ, ಆಧಾರ ಕಾರ್ಡ್, ಜಾತಿ ಪ್ರಮಾಣಪತ್ರ, ವಿಳಾಸ, ಶೈಕ್ಷಣಿಕ ಪ್ರಮಾಣಪತ್ರ, ಬ್ಯಾಂಕ್ ಪಾಸ್‍ಬುಕ್ ಹಾಗೂ 6 ಭಾವಚಿತ್ರಗಳನ್ನು ತರಬೇಕು.
ತರಬೇತಿಗೆ ಯಾವುದೇ ಶುಲ್ಕವಿರುವುದಿಲ್ಲ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ನೀಡಲಾಗುವುದು. ತರಬೇತಿಯ ನಂತರ ಶಿಬಿರಾರ್ಥಿಗಳಿಗೆ ಕಡ್ಡಾಯವಾಗಿ ಉದ್ಯೋಗವನ್ನು ಕೊಡಿಸಲಾಗುವುದು. ತರಬೇತಿಯ ನಂತರ ಅಭ್ಯರ್ಥಿಗಳು ಉದ್ಯೋಗÀವನ್ನು ಮಾಡಲೇಬೇಕು.
ಆಸಕ್ತ ಅಭ್ಯರ್ಥಿಗಳು ಫೆ.28 ರೊಳಗಾಗಿ ಅವೋನ್ ಪೆಸಿಲಿಟಿ ಮ್ಯಾನೆಜ್‍ಮೆಂಟ್ ಸರ್ವೀಸಸ್ ಲಿಮಿಟೆಡ್, 158 ಕೆಐಎಡಿಬಿ ಲೇಔಟ್, ಅಶೋಕ ಗಾರ್ಡನ್ ಹತ್ತಿ, ಹಳಿಯಾಳ ರಸ್ತೆ, ಧಾರವಾಡ ಈ ವಿಳಾಸಕ್ಕೆ ಅಥವಾ ದೂ: 0836-2774714, 9066529896 ಗೆ ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.