ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

In the publication.

0

ಸದಲಗಾ: ಸ್ಥಿರಾಸ್ತಿ ಬೆಲೆ ಕರಡು ಪತ್ರಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಬೆಳಗಾವಿ: (news belgaum)ಕರ್ನಾಟಕ ಮುದ್ರಾಂಕ (ಸ್ವತ್ತುಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಅಂದಾಜು ಮಾಡುವ ಪ್ರಕಟಿಸುವ ಮತ್ತು ಪರಿಷ್ಕರಿಸುವ) ನಿಯಮಗಳು 2003 ರ ನಿಯಮ 4 ರನ್ವಯ ಉಪಲಬ್ದವಿರುವ ಅಧಿಕಾರದನ್ವಯ ಸದಲಗಾ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ಚಿಕ್ಕೋಡಿ ತಾಲೂಕ ಉಪಸಮೀತಿಯು ಕೇಂದ್ರ ಮೌಲ್ಯ ಮಾಪನ ಸಮೀತಿಯು ನೀಡಿರುವ ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಮುದ್ರಾಂಕ (ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮೀತಿ ಪ್ರಕಟಣೆ, ಮಾರುಕಟ್ಟೆ ಮೌಲ್ಯಗಳ ಪರಿಷ್ಕರಣೆ) ನಿಯಮಗಳು 2003 ರನ್ವಯ ಸ್ವತ್ತುಗಳ ಬೆಲೆಗಳನ್ನು ನೋಂದಣಿ ಉಪ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ನೀಡಿದ ನಿರ್ದೇಶನಗಳನ್ವಯ ಮತ್ತು ಜುಲೈ 25 ರಂದು ಜರುಗಿದ ಕೇಂದ್ರ ಮೌಲ್ಯ ಮಾಪನ ಸಭೆಯಲ್ಲಿ ಮತ್ತು ಆಗಸ್ಟ 4 ರಂದು ಜರುಗಿದ ಸ್ಥಿರಾಸ್ತಿಗಳ ಮೌಲ್ಯ ನಿರ್ಧರಣಾ ಉಪಸಮಿತಿ ಸದಲಗಾ ಸಭೆಯಲ್ಲಿ ನೀಡಿದ ನಿರ್ದೇಶನಗಳನ್ವಯ ಪ್ರಮುಖ ಅಂಶಗಳನ್ನು ಮಾರ್ಗಸೂಚಿ ಬೆಲೆ ಪಟ್ಟಿಯಲ್ಲಿ ಅಳವಡಿಸಲಾಗಿರುತ್ತದೆ.
ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗು ಆಕ್ಷೇಪಣೆಗಾಗಿ ಉಪ ನೋಂದಣಿ ಕಚೇರಿಯಲ್ಲಿ ಪ್ರಚುರಪಡಿಸಿ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸದಲಗಾ ಉಪನೋಂದಣಿ ಅಧಿಕಾರಿಗಳು ಹಾಗೂ ಸ್ಥರಸ್ತಿಗಳ ಮೌಲ್ಯ ನಿರ್ಧರಣ ಉಪ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಬೆಳಗಾವಿ:  ಸರ್ಕಾರಿ ಮಾನ್ಯತೆ ಪಡೆದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮತಿಯ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಯನ್, ಬೌದ್ಧ, ಸಿಖ್ ಹಾಗೂ ಪಾರ್ಸಿ) “ವಿದ್ಯಾಸಿರಿ” ಯೋಜನೆಯಡಿ ಕಾರ್ಯಕ್ರಮ ಅನುಷ್ಠಾಕ್ಕಾಗಿ ಮಾರ್ಗಸೂಚಿಗನ್ನು ನೀಡಲಾಗಿದೆ.

ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಯು ಯಾವುದೇ ಇಲಾಖೆಯ ಸರ್ಕಾರಿ ಹಾಗೂ ಅನುದಾನಿತ ವಿದ್ಯಾರ್ಥಿ ನಿಲಯ, ವಸತಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ ಪ್ರವೇಶ ದೊರೆಯದೇ ಇದ್ದಾಗ ಅಂತಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಆಗಸ್ಟ 31 ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಅಥವಾ ದೂ.ಸಂ: 0831-2451264, ವೆಬ್‍ಸೈಟ್:gokdom.kar.nic.in ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುರಗೋಡ ಸ್ಥಿರಾಸ್ತಿ ಬೆಲೆ ಕರಡು ಪತ್ರಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಬೆಳಗಾವಿ: ಕರ್ನಾಟಕ ಮುದ್ರಾಂಕ (ಸ್ವತ್ತುಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು ಅಂದಾಜು ಮಾಡುವ ಪ್ರಕಟಿಸುವ ಮತ್ತು ಪರಿಷ್ಕರಿಸುವ) ನಿಯಮಗಳು 2003 ರ ನಿಯಮ 4 ರನ್ವಯ ಉಪಲಬ್ದವಿರುವ ಅಧಿಕಾರದನ್ವಯ ಮುರಗೋಡ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ಸವದತ್ತಿ ತಾಲೂಕ ಉಪಸಮೀತಿಯು ಕೇಂದ್ರ ಮೌಲ್ಯ ಮಾಪನ ಸಮೀತಿಯು ನೀಡಿರುವ ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಮುದ್ರಾಂಕ (ಕೇಂದ್ರ ಮಾರುಕಟ್ಟೆ ಮೌಲ್ಯ ನಿರ್ಧರಣಾ ಸಮೀತಿ ಪ್ರಕಟಣೆ, ಮಾರುಕಟ್ಟೆ ಮೌಲ್ಯಗಳ ಪರಿಷ್ಕರಣೆ) ನಿಯಮಗಳು 2003 ರನ್ವಯ ಸ್ವತ್ತುಗಳ ಬೆಲೆಗಳನ್ನು ನೋಂದಣಿ ಉಪ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ನೀಡಿದ ನಿರ್ದೇಶನಗಳನ್ವಯ ಮತ್ತು ಜುಲೈ 25 ರಂದು ಜರುಗಿದ ಕೇಂದ್ರ ಮೌಲ್ಯ ಮಾಪನ ಸಭೆಯಲ್ಲಿ ಮತ್ತು ಆಗಸ್ಟ 6 ರಂದು ಜರುಗಿದ ಸ್ಥಿರಾಸ್ತಿಗಳ ಮೌಲ್ಯ ನಿರ್ಧರಣಾ ಉಪಸಮಿತಿ ಸದಲಗಾ ಸಭೆಯಲ್ಲಿ ನೀಡಿದ ನಿರ್ದೇಶನಗಳನ್ವಯ ಪ್ರಮುಖ ಅಂಶಗಳನ್ನು ಮಾರ್ಗಸೂಚಿ ಬೆಲೆ ಪಟ್ಟಿಯಲ್ಲಿ ಅಳವಡಿಸಲಾಗಿರುತ್ತದೆ.
ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಗು ಆಕ್ಷೇಪಣೆಗಾಗಿ ಉಪ ನೋಂದಣಿ ಕಚೇರಿಯಲ್ಲಿ ಪ್ರಚುರಪಡಿಸಿ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸವದತ್ತಿ ಉಪನೋಂದಣಿ ಅಧಿಕಾರಿಗಳು ಹಾಗೂ ಸ್ಥರಸ್ತಿಗಳ ಮೌಲ್ಯ ನಿರ್ಧರಣ ಉಪ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.10 ರಂದು ಉದ್ಯೋಗ ಮೇಳ
ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ವತಿಯಿಂದ ಆಗಸ್ಟ 10 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ “ಉದ್ಯೋಗ ಮೇಳ”ವನ್ನು ಹಮ್ಮಿಕೊಳ್ಳಲಾಗಿದೆ.
ಅನಕ್ಷರಸ್ಥರಿಗೂ ಸೇರಿದಂತೆ ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ (ಯಾವುದೇ ಟ್ರೇಡ್), ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಸದರಿ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ +91-8867262751 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ತಪಾಸಣಾ ಶಿಬಿರ
ಬೆಳಗಾವಿ: ಜಿಲ್ಲೆಯ ಖಾನಾಪೂರ ಮತ್ತು ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಕೇಂದ್ರ ಸರಕಾರದ ಅಡಿಪ್ ಯೋಜನೆಯಡಿ ಗುರುತಿಸಿ ಒದಗಿಸುವ ನಿಟ್ಟಿನಲ್ಲಿ ಖಾನಾಪೂರ ಮತ್ತು ಕಿತ್ತೂರ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ನೇಸರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರ ತಪಾಸಣಾ (ಮೌಲ್ಯಾಂಕಣ) ಶಿಬಿರಗಳನ್ನು ಏರ್ಪಡಿಸಲಾಗಿದೆ.
ಆಗಸ್ಟ್ 7 ರಂದು ಖಾನಾಪೂರ ತಾಲೂಕು ಆಸ್ಪತ್ರೆ, 8 ರಂದು ಕಿತ್ತೂರ ಸಾರ್ವಜನಿಕ ಆಸ್ಪತ್ರೆ ಹಾಗೂ 9 ರಂದು ನೇಸರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣಾ (ಮೌಲ್ಯಾಂಕಣ) ಶಿಬಿರಗಳು ಜರುಗಲಿವೆ.
ಖಾನಾಪೂರ ಮತ್ತು ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.