ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

news belagavi

0

ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಉಪನ್ಯಾಸಕ್ಕೆ 125 ವರ್ಷ
ಸೆ.11 ರಂದು ಜಿಲ್ಲಾಮಟ್ಟದ ಜಾಥಾ: ಡಾ.ಬೂದೆಪ್ಪ
ಬೆಳಗಾವಿ: (news belgaum)ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಅಂಗವಾಗಿ ಸೆಪ್ಟೆಂಬರ್ 11 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಾಥಾ ಮತ್ತು ವೇದಿಕೆ ಸಮಾರಂಭ ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಅವರು ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಸೆ.6) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು 1893 ರ ಸೆಪ್ಟೆಂಬರ್ 11 ರಂದು ಷಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ತÀತ್ವಾದರ್ಶಗಳನ್ನು ಹೃದಯಸ್ಪರ್ಶಿಯಾಗಿ ತಿಳಿಸಿದ್ದರು.
ಈ ಐತಿಹಾಸಿಕ ಉಪನ್ಯಾಸ ನೀಡಿ 125 ವರ್ಷಗಳಾಗಲಿರುವುದರಿಂದ ಸೆಪ್ಟೆಂಬರ್ 11, 2018ರಿಂದ ಸೆಪ್ಟೆಂಬರ್ 12, 2019ರವರೆಗೆ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಜಿಲ್ಲಾಮಟ್ಟದಲ್ಲಿ ವಿಶೇಷ ಜಾಥಾ ಹಾಗೂ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದಿನ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವರು. ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ಕೂಡ ಏರ್ಪಡಿಸಲಾಗುವುದು ಎಂದು ಡಾ.ಬೂದೆಪ್ಪ ಹೇಳಿದರು.
ಜಿಲ್ಲಾಮಟ್ಟದ ಕಾರ್ಯಕ್ರಮದ ಬಳಿಕ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ ಹಾಗೂ ಶಾಲಾ-ಕಾಲೇಜುಗಳಲ್ಲಿ ವರ್ಷವಿಡೀ ವಿಚಾರಸಂಕಿರಣ, ಜಾಗೃತಿ ಜಾಥಾ, ಭಾಷಣ, ಚರ್ಚಾಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.

11 ರಂದು ಜಾಥಾ:
ಸೆಪ್ಟೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳಿಗ್ಗೆ 10 ಗಂಟೆಗೆ ಜಾಥಾ ಹೊರಡಲಿದೆ.
ವಿದ್ಯಾರ್ಥಿಗಳ ಜಾಥಾ ಕುಮಾರಗಂಧರ್ವ ರಂಗಮಂದಿರ ತಲುಪಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಕಾಲೇಜು ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಾಥಾ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಸೂಚನೆ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಹುದ್ದೆ ನೀಡಲು ಸೂಚನೆ
ಬೆಳಗಾವಿ: : ಜಿಲ್ಲೆಯಲ್ಲಿರುವ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆಗಳಲ್ಲಿ ನಿಯಮಾವಳಿ ಪ್ರಕಾರ ಸ್ಥಳೀಯರಿಗೆ ಉದ್ಯೋಗ ಒದಗಿಸಿರುವುದನ್ನು ಖಾತ್ರಿಪಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿರುವ ಕುರಿತಂತೆ ನಗರದ ಪ್ರವಾಸಿಮಂದಿರದಲ್ಲಿ ಗುರುವಾರ(ಸೆ.6) ಬೆಳಿಗ್ಗೆ ಪರಿಶೀಲನೆ ನಡೆಸಿದ ಅವರು, ಮುಂದಿನ ತಿಂಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಖಾನೆಗಳಿಗೆ ತೆರಳಿ ಪರಿಶೀಲನೆ ಕೈಗೊಳ್ಳುವುದಾಗಿ ಹೇಳಿದರು.
ಈ ಬಗ್ಗೆ ಮಾಹಿತಿ ಒದಗಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಅವರು, ಡಾ.ಸರೋಜಿನಿ ಮಹಿಷಿ ವರದಿಯ ಪ್ರಕಾರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆ ಹಾಗೂ ಸಿಮೆಂಟ್ ಕಾರ್ಖಾನೆಗಳ ಸಿ ಮತ್ತು ಡಿ ಗ್ರುಪ್‍ಗಳ ಹುದ್ದೆಗಳನ್ನು ಸ್ಥಳೀಯರಿಗೆ ನೀಡಲಾಗಿದೆ ಎಂದರು.
ಸಿಮೆಂಟ್ ಕಾರ್ಖಾನೆಗಳಲ್ಲಿ ಸಿಮೆಂಟ್ ಚೀಲಗಳನ್ನು ಲಾರಿಗಳಿಗೆ ತುಂಬುವ-ಇಳಿಸುವ ದಿನಗೂಲಿಗಳು ಸ್ಥಳೀಯವಾಗಿ ಲಭ್ಯವಾಗದಿರುವುದರಿಂದ ಗುತ್ತಿಗೆದಾರರು ಅನಿವಾರ್ಯವಾಗಿ ಬೇರೆ ಕಡೆಯಿಂದ ಕರೆತರುತ್ತಿದ್ದಾರೆ ಎಂದು ವಿವರಿಸಿದರು.
ಅಧಿಕಾರಿ ಮಟ್ಟದ ಎ ಮತ್ತು ಬಿ ಗ್ರುಪ್ ಹುದ್ದೆಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುತ್ತವೆ. ಅವುಗಳನ್ನು ಭರ್ತಿ ಮಾಡುವಾಗ ಕೂಡ ಸರೋಜಿನಿ ಮಹಿಷಿ ವರದಿಯ ಪ್ರಕಾರವೇ ಕ್ರಮವಹಿಸುವಂತೆ ಕಾರ್ಖಾನೆಗಳಿಗೆ ತಿಳಿಸಲಾಗಿದ್ದು, ಈ ಬಗ್ಗೆ ಆಗಾಗ ಪರಿಶೀಲನೆ ನಡೆಸಿರುವುದಾಗಿ ದೊಡ್ಡಬಸವರಾಜ ತಿಳಿಸಿದರು.

ಕನ್ನಡಲ್ಲಿ ಪೊಲೀಸ್ “ಜಾಲತಾಣ”: ಸಿದ್ದರಾಮಯ್ಯ ಅಭಿನಂದನೆ
ಬೆಳಗಾವಿ: ಬೆಳಗಾವಿ ಪೊಲೀಸ್ ಕಮೀಷನರೇಟ್ ಜಾಲತಾಣವನ್ನು ಕನ್ನಡದಲ್ಲಿ ರೂಪಿಸಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕಮೀಷನರೇಟ್ ಜಾಲತಾಣವು ಸಂಪೂರ್ಣ ಇಂಗ್ಲೀಷಮಯವಾಗಿರುವುದನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದ ಪ್ರಾಧಿಕಾರದ ಅಧ್ಯಕ್ಷರು ಕೂಡಲೇ ಕನ್ನಡಕ್ಕೆ ಆದ್ಯತೆ ನೀಡುವಂತೆ ತಿಳಿಸಿದ್ದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದಿದ್ದ ಕನ್ನಡ ಅನುಷ್ಠಾನ ಪ್ರಗತಿ ಸಂದರ್ಭದಲ್ಲಿ ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು ಪ್ರಸ್ತಾಪಿಸಿದ್ದರಲ್ಲದೇ ಹದಿನೈದು ದಿನಗಳಲ್ಲಿ ಕನ್ನಡೀಕರಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದರು.
ಇದಕ್ಕೆ ಸ್ಪಂದಿಸಿದ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಅವರು ಒಂದೇ ದಿನದಲ್ಲಿ ಜಾಲತಾಣವನ್ನು ಕನ್ನಡದಲ್ಲಿ ಪರಿವರ್ತಿಸಿದ್ದರಿಂದ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

ಪಿಎಲ್‍ಡಿ ಬ್ಯಾಂಕ್ ಚುನಾವಣೆ ವೇಳಾಪಟ್ಟಿ
ಬೆಳಗಾವಿ: ಬೆಳಗಾವಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೆಪ್ಟೆಂಬರ್ 7 ರಂದು ಬೆಳಗಾವಿ ಮಹಾದ್ವಾರ ರಸ್ತೆಯಲ್ಲಿರುವ ಬ್ಯಾಂಕಿನ ಸಭಾಗೃಹದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ 11 ಗಂಟೆಗೆ ನಾಮಪತ್ರಗಳ ಸ್ವೀಕೃರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಸಭೆಯನ್ನು ಪ್ರಾರಂಭಿಸಿ ನಾಮಪತ್ರಗಳ ಪರಿಶೀಲನೆ ಇತ್ಯಾದಿ ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಗುವುದು. ಬೆಳಗಾವಿ ತಾಲೂಕಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ. ಬೆಳಗಾವಿಯ ಎಲ್ಲ ಚುನಾಯಿತ ಆಡಳಿಯ ಮಂಡಳಿಯ ಸದಸ್ಯರು ನಿಗಧಿತ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಲು ದಿ. ಬೆಳಗಾವಿ ತಾಲೂಕಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀನ ಅಭಿವೃದ್ಧಿ ಬ್ಯಾಂಕ ಬೆಳಗಾವಿ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ವೇಳಾಪಟ್ಟಿ:
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರರಾಗಿ ಸ್ಪರ್ಧಿಸುವ ಅಭ್ಯರ್ಥಿಗಳು ಸೆಪ್ಟೆಂಬರ್ 7ರ ಮುಂಜಾನೆ 10 ರಿಂದ 11 ಗಂಟೆಯವರೆಗೆ ಬ್ಯಾಂಕಿನ ಸಭಾಗೃಹದಲ್ಲಿ ನಾಮಪತ್ರಗಳನ್ನು ಸಲ್ಲಿಸಬೇಕು.
ಮಧ್ಯಾಹ್ನ 1 ರಿಂದ 1-20 ಗಂಟೆಯವರೆಗೆ ಉಮೇದುವಾರಿಕೆಯ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಸಂಘದ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆಯ ನಂತದ ಮಧ್ಯಾಹ್ನ 1-20 ಗಂಟೆಯಿಂದ 1-50 ಗಂಟೆಯವೆರೆಗೆ ಉಮೇದುವಾರಿಕೆಯ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬಹುದು.
ಮಧ್ಯಾಹ್ನ 1-50 ಗಂಟೆಯ ನಂತರ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದ ಉಮೇದುವಾರರ ಪ್ರಕಟಿಸಲಾಗುವುದು. ನಂತರ ಮಧ್ಯಾಹ್ನ 2-10 ಗಂಟೆಗೆ ಬ್ಯಾಂಕಿನ ಸಭಾಗೃಹದಲ್ಲಿ ಮತದಾನದ ವೇಳೆ (ಅವಶ್ಯವಿದ್ದಲ್ಲಿ ಮಾತ್ರ), ಮತದಾನದ ಮುಕ್ತಾಯವಾದ ನಂತರ ಮತಗಳ ಎಣಿಕೆ ಹಾಗೂ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವದು ಎಂದು ದಿ. ಬೆಳಗಾವಿ ತಾಲೂಕಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀನ ಅಭಿವೃದ್ಧಿ ಬ್ಯಾಂಕ ಬೆಳಗಾವಿ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 8 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ: ಸೆಪ್ಟೆಂಬರ್ 06 :(ಕರ್ನಾಟಕ ವಾರ್ತೆ): ಹೆಸ್ಕಾಂ ಗ್ರಾಮೀಣ ವಿಭಾಗದ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33/11 ಕೆ.ವಿ ಬಾಳೇಕುಂದ್ರಿ ಉಪಕೇಂದ್ರದಿಂದ ಸರಬರಾಜು ಆಗುವ ಕ್ಯಾಂಪ್‍ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೊದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ ಹಾಗೂ ಗಣಿಕೊಪ್ಪ ಗ್ರಾಮಗಳಿಗೆ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಅದರಂತೆ 33 ಕೆವಿ ಲೋಂಡಾ ಹಾಗೂ ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ನಾಗರಗಾಳಿ, ನಾಗರಗಾಳಿ ರೇಲ್ವೆ ಸ್ಟೇಶನ್, ಮುಂದವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೇಲ್ವೆ ಸ್ಟೇಶನ್, ಗುಂಜಿ, ಮೋಹಿಶೇಟ, ವಾಟ್ರೆ, ಭಾಲ್ಕೆ ಬಿ.ಕೆ, ಭಾಲ್ಕೆ ಕೆ.ಎಚ್, ಶಿಂದೋಳ್ಳಿ, ಹೊನ್ಕಲ, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ, ಡೋಕೆಗಾಳಿ, ಖಾನಾಪೂರ ಪ್ರದೇಶ, ಶಿವಾಜಿ ನಗರ, ರುಮೇವಾಡಿ, ಓತೋಳ್ಳಿ, ಮಾದೇಕೊಪ್ಪ, ನಾಗುರ್ಡಾ, ರಾಮಗುರವಾಡಿ, ಅಂಬೋಳಿ, ಹರಸನವಾಡಿ, ಅಸೋಗಾ, ನೇರಸಾ, ಅಶೋಕ ನಗರ , ಮಂತುರ್ಗಾ, ಶೇಡೇಗಾಳಿ, ಹಾಗು ಹೆಮ್ಮಡಗಾ ಪ್ರದೇಶಗಳಿಗೆ ವಿದ್ಯುತ ಸರಬರಾಜಿನಲ್ಲಿ ವ್ಯತ್ಯಯಾಗಲಿದೆ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 7 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ: ಹೆಸ್ಕಾಂ ಗ್ರಾಮೀಣ ವಿಭಾಗದ ವತಿಯಿಂದ ತುರ್ತು ನಿರ್ವಹಣಾ ಕಾರ್ಯಕೈಗೊಳ್ಳುತ್ತಿರುವುದರಿಂದ 33 ಕೆವಿ ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ವಾಟರ್ ಸಪ್ಲಾಐ, ಹಿಂಡಲಗಾ, ವಿಜಯ ನಗರ, ಗಣೇಶಪೂರ, ಸರಸ್ವತಿ ನಗರ, ಕಂಗ್ರಾಳ ಕೆ.ಎಚ್, ಅಲತಗಾ, ಅಂಬೇವಾಡಿ, ಮನ್ನೂರ, ಗೋಜಗಾ
ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ:  Hindustan Aeronautics Limited, Bengaluru ಸಂಸ್ಥೆಯಲ್ಲಿ ‘ಶಿಶಿಕ್ಷು ತರಬೇತಿ’(Apprentice Training)ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸದರಿ ತರಬೇತಿಗೆ “Diploma in Engineering”- (Aeronautical, Mechanical, Electrical & Electronics, Electronics & Communication, Avionics, Civil, Computer Science, Information Science, Commercial Practice, Metallurgy) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಡಿಪ್ಲೋಮಾ ಪ್ರಮಾಣಪತ್ರ ಪಡೆದ ಅವಧಿ 3 ವರ್ಷ ಮೀರಿರಬಾರದು.
ಒಂದಕ್ಕಿಂದ ಹೆಚ್ಚು ವರ್ಷಗಳ ಕಾಲ ಸೇವಾನುಭವ ಹೊಂದಿರುವವರು ಈ ತರಬೇತಿಗೆ ಅರ್ಹರಾಗಿರುವುದಿಲ್ಲ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 12 ರೊಳಗಾಗಿ ತಮ್ಮ ಮೂಲ ದಾಖಲಾತಿಗಳು, ನಕಲು ಪ್ರತಿಗಳು ಮತ್ತು ಇತ್ತೀಚಿನ ಭಾವಚಿತ್ರಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸದಾಶಿವ ನಗರ, ಬೆಳಗಾವಿ ಇಲ್ಲಿ ಖುದ್ದಾಗಿ ಭೇಟಿ ನೀಡಿ, ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ 9743166178 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಎಲ್‍ಡಿ ಬ್ಯಾಂಕ್ ಚುನಾವಣೆ: ನಿಷೇಧಾಜ್ಞೆ
ಬೆಳಗಾವಿ: ಬೆಳಗಾವಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಸೆಪ್ಟೆಂಬರ್ 7 ರಂದು ಬೆಳಗಾವಿಯ ಮಹಾದ್ವಾರ ರಸ್ತೆಯಲ್ಲಿರುವ ಬ್ಯಾಂಕಿನ ಸಭಾಗೃಹದಲ್ಲಿ ನಡೆಯಲಿದೆ.
ಸದರಿ ಚುನಾವಣೆಯು ಕಪಿಲೇಶ್ವರ ದೇವಸ್ಥಾನದ ಮುಂದೆ ಇರುವ ಓವರ್ ಬ್ರಿಡ್ಜದಿಂದ ಮಾಣಿಕಬಾಗ ಮುಂದೆ ಇರುವ ಹಳೆ ಪಿ.ಬಿ. ರಸ್ತೆ ಓವರ್ ಬ್ರಿಡ್ಜ್‍ವರೆಗಿನ ಮಹಾದ್ವಾರ ರಸ್ತೆ ಮತ್ತು ರಸ್ತೆಯ ಸುತ್ತಮುತ್ತಲು ಬರುವ ಬೈಲೈನ್‍ನಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ತಹಶೀಲ್ದಾರ ಕಚೇರಿಯ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಪ್ಟೆಂಬರ್ 7ರ ಬೆಳಿಗ್ಗೆ 6 ಗಂಟೆಯಿಂದ ಸಪ್ಟೆಂಬರ್ 8ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಗೆ ಬರುವಂತೆ ಸಿಆರ್‍ಪಿಸಿ 1973ರ ಕಲಂ 144ರ ಮೇರೆಗೆ ನಿಷೇಧಾಜ್ಞೆಯನ್ನು ಘೋಷಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಾದ ಡಾ. ಡಿ.ಸಿ ರಾಜಪ್ಪ ಅವರು ಆದೇಶವನ್ನು ಹೊರಡಿಸಿದ್ದಾರೆ.
ಸೆ.11 ರವರೆಗೆ ಸಂದರ್ಶನ ಮುಂದೂಡಿಕೆ
ಬೆಳಗಾವಿ: ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಸಿಬ್ಬಂದಿಯನ್ನು ಪಡೆಯುವ ಸಲುವಾಗಿ ಏರ್ಪಡಿಸಿರುವ ಸಂದರ್ಶನವನ್ನು ಆಡಳಿತಾತ್ಮಕ ತೊಂದರೆಗಳಿಂದಾಗಿ ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ. ಎಲ್ಲಾ ಹುದ್ದೆಗಳ ಅರ್ಜಿದಾರರಿಗೆ ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11ಕ್ಕೆ ಖುದ್ದಾಗಿ ಸ್ವಂತ ಖರ್ಚಿನಲ್ಲಿ ಪೊಲೀಸ ಭವನ ಬೆಳಗಾವಿ ಇಲ್ಲಿ ಹಾಜರಾಗಬೇಕೆಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಹಾಪೂರ: ಸೆ.8 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ:  ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಸೆಪ್ಟೆಂಬರ್ 8 ರಂದು 33/11 ಕೆವಿ ಆರ ಎಂ-2 ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ-8 ಶಹಾಪುರ ಪೂರಕದ ಮೇಲೆ ಬರುವ ನ್ಯೂಗುಡ್ ಸೆಡರೋಡ, ಶಾಸ್ತ್ರಿ ನಗರ, ಎಸ್.ಪಿ.ಎಮ್. ರೋಡ, ಕಪಿಲೇಶ್ವರರೋಡ,ಎಮ್.ಎಫ್.ರೋಡ, ಹುಲಬತ್ತಿ ಕಾಲನಿ, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್ ಪ್ರದೇಶಗಳಲ್ಲಿ ಸೆಪ್ಟೆಂಬರ್ 8 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.