ಉತ್ತಮ ಸಮಾಜಕ್ಕಾಗಿ

ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಇಂಜನೀಯರಿಂಗ್ ಅಸೋಶಿಯೆಷನ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

news belagavi

0

ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ,

News Belgaum-ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಇಂಜನೀಯರಿಂಗ್ ಅಸೋಶಿಯೆಷನ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭಬೆಳಗಾವಿ:(news belgaum)ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಹಾಗೂ ಆದರ್ಶಯುಕ್ತ ಮೌಲ್ಯಗಳನ್ನು ತಮ್ಮ ಪಠ್ಯದ ಜೊತೆ ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಬಾಗಲಕೋಟೆಯ ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್. ಎಲ್. ನಾಯಕ ಹೇಳಿದರು.
ಅವರು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ದಿನಾಂಕ ಸೆಪ್ಟೆಂಬರ್ 6, 2018 ರಂದು ನಡೆದ ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಇಂಜನೀಯರಿಂಗ್ ಅಸೋಶಿಯೆಷನ್‍ನ ಪ್ರಸಕ್ತ 2018-19 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಲೆಕ್ಟ್ರಿಕಲ್ ಇಂಜನೀಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದ್ದು, ಜಾಗತಿಕಮಟ್ಟದ ಮ್ಯಾಟ್‍ಲ್ಯಾಬ ತಂತ್ರಜ್ಞಾನ ಹಾಗೂ ಗೇಟ್ ಪರೀಕ್ಷೆಯ ಜ್ಞಾನ, ಈಗಿನ ವಿದ್ಯುತ್ ತಂತ್ರಜ್ಞಾನವು ಯಾವ ರೀತಿಯಲ್ಲಿ ಬೆಳವಣಿಗೆಯಾಗಿದೆ, ಅದರಲ್ಲಿ ವಿನೂತನ ಏನು ಇದೆ ಎನ್ನುವ ಜ್ಞಾನ ಗಳಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎನ್. ಪಾಟೀಲ ಅಸೋಶಿಯೇಷನ್‍ನ ವರದಿ ವಾಚನ ಮಾಡಿ, ವಿದ್ಯಾರ್ಥಿಗಳು ತಮ್ಮ ಈ ಅಮೂಲ್ಯವಾದ ನಾಲ್ಕು ವರ್ಷಗಳ ಕಲಿಕಾ ಅವಧಿಯನ್ನು ಜೀವನದ ಅತ್ಯಂತ ಮಹತ್ವದ ಅವಧಿಯೆಂದು ಪರಿಗಣಿಸಬೇಕೆಂದು ಹೇಳಿದರು.
ಪ್ರೊ. ವಿನಯ ಪಟ್ಟಣಶೆಟ್ಟಿ ಮಾತನಾಡಿ ಮೂರನೇ ಸೆಮಿಸ್ಟರಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಅಸೋಷಿಯೇಶನ್ ಸಂಯೋಜಕ ಪ್ರೊ. ರಾಜೇಂದ್ರ ಗಿವಾರಿ ಸೇರಿದಂತೆ ವಿಭಾಗದ ಎಲ್ಲ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅರ್ಪಿತಾ ಜಾರ್ಜ ಪರಿಚಯಿಸಿದರು. ಜ್ಯೋತಿ ಭಜಂತ್ರಿ ನಿರೂಪಸಿದರು. ಸ್ವಾತಿ ಜಂತಿನಕಟ್ಟಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.