ಉತ್ತಮ ಸಮಾಜಕ್ಕಾಗಿ

ಲಸಿಕೆ ವಂಚಿತ ಮಕ್ಕಳಿಗೆ ಪಾಲಕರು ತಪ್ಪದೇ ಲಸಿಕೆ ಕೊಡಿಸಿ

news

0

ಇಂದ್ರಧನುಷ್ ಅಭಿಯಾನ ಉದ್ಘಾಟನೆ
ಬೆಳಗಾವಿ:(news belgaum) ಮುಂದುವರೆದ ಗ್ರಾಮಸ್ವರಾಜ್ ಅಭಿಯಾನದಡಿ ಇಂದ್ರಧನುಷ ಅಭಿಯಾನದ ಉದ್ಘಾಟನೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ (ಆ.13) ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಉದ್ಘಾಟಿಸಿದರು.
News Belgaum-ಇಂದ್ರಧನುಷ್ ಅಭಿಯಾನ ಉದ್ಘಾಟನೆನಂತರ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಸಿಕೆ ವಂಚಿತ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಟಿ ಕಳಸದ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಹುಸೇನಸಾಬ ಖಾಜಿ, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ವಿದ್ಯಾ ಹುಯಿಲಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

ಲಸಿಕೆ ವಂಚಿತ ಮಕ್ಕಳಿಗೆ ಪಾಲಕರು ತಪ್ಪದೇ ಲಸಿಕೆ ಕೊಡಿಸಿ
ಬೆಳಗಾವಿ: ಸರ್ಕಾರದಿಂದ ಉಚಿತವಾಗಿ ನೀಡುವ ಲಸಿಕೆಗಳನ್ನು ಪೋಷಕರು ತಮ್ಮ ಎಲ್ಲ ಮಕ್ಕಳಿಗೆ ಹೆಚ್ಚಿನ ಆಸಕ್ತಿ ವಹಿಸಿ ಕೊಡಿಸಬೇಕೆಂದು ಅಲಗ ಅಮೀನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲೀನಾ ಅವರು ಕರೆ ನೀಡಿದರು.

News Belgaum-ಇಂದ್ರಧನುಷ್ ಅಭಿಯಾನ ಉದ್ಘಾಟನೆ 1 News Belgaum-ಇಂದ್ರಧನುಷ್ ಅಭಿಯಾನ ಉದ್ಘಾಟನೆ 2ಲಸಿಕೆ ವಂಚಿತ ಮಕ್ಕಳಿಗೆ ಪಾಲಕರು ತಪ್ಪದೇ ಲಸಿಕೆ ಕೊಡಿಸಿರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಅಲ್ ಅಮೀನ್ ಉರ್ದು ಶಾಲೆಯಲ್ಲಿ ಸೋಮವಾರ (ಆ.13) ಹಮ್ಮಿಕೊಂಡಿದ್ದ ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದ ಇಂದ್ರಧನುಷ ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಐ.ಪಿ ಗಡಾದ ಅವರು ಮಾತನಾಡಿ, ಮುಂದವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ಹಮ್ಮಿಕೊಂಡಿರುವ ಆರೋಗ್ಯ ಸೇವೆಗಳಲ್ಲೊಂದಾದ ಇಂದ್ರಧನುಷ ಅಭಿಯಾನದಡಿ ಲಸಿಕೆ ವಂಚಿತ ಮಕ್ಕಳಿಗೆ ಅಗಸ್ಟ್, ಸಪ್ಟೆಂಬರ ಹಾಗೂ ಅಕ್ಟೊಬರ ತಿಂಗಳಲ್ಲಿ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದೆಂದು ಹೇಳಿದರು. ಜಿಲ್ಲೆಯ ಕ್ರಿಯಾ ಯೋಜನೆ ಹಾಗೂ ಲಸಿಕಾ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಪೋಲಿಯೋ ಕಣ್ಗಾವಲು ಯೋಜನೆ ವೈದ್ಯಾಧಿಕಾರಿಗಳಾದ ಡಾ. ಸಿದ್ದಲಿಂಗಯ್ಯಾ ಅವರು ಮಾತನಾಡಿ, ಮಕ್ಕಳನ್ನು 9 ಮಾರಕ ರೋಗಗಳಿಂದ ರಕ್ಷಿಸಲು ಎಲ್ಲ ಸರಕಾರಿ ಆರೋಗ್ಯ ಕೆಂದ್ರಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ ಮತ್ತು ಎಲ್ಲ ಲಸಿಕೆಗಳು ಸುರಕ್ಷಿತವಾಗಿದ್ದು ಶೀತಲ ಸರಪಣಿ ಮೂಲಕ ರಕ್ಷಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಸರಕಾರಿ ಆಸ್ಪತ್ರೆಗಳಲ್ಲಿಯೇ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿಸಿದರು.
ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂಜೀವ ನಾಂದ್ರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಲಸಿಕೆ ವಂಚಿತ ಮಕ್ಕಳ ಯಾದಿಯನ್ನು ಈಗಾಗಲೇ ತಯಾರಿಸಿಕೊಂಡಿದ್ದು ಅದರಂತೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ವಂಟಮುರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಜಯಾನಂದ ಧನವಂತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ನದಾಪ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರು ಪ್ರಾರ್ಥನೆ ಗೀತೆ ಹಾಡಿದರು. ವಿ.ಎಲ್. ಪಾತಳಿ ಸ್ವಾಗತಿಸಿದರು. ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.