ಉತ್ತಮ ಸಮಾಜಕ್ಕಾಗಿ

ಜೇನು ಕುಟುಂಬದ ನಿರ್ವಹಣೆ:

news belagavi

0

ಬೆಳಗಾವಿ: (news belgaum)ಜೇನುಕೃಷಿ ಕುರಿತು ರೈತರಲ್ಲಿ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೇನು ನೊಣಗಳ ವಿಧಗಳು:
News Belgaum-ಜೇನುಕೃಷಿ ಕುರಿತು ರೈತರಿಗೆ ಮಾಹಿತಿತುಡುವೆ ಜೇನು ಹಾಗೂ ವಿದೇಶದಿಂದ ತರಿಸಿಕೊಂಡಿರುವ ಯುರೋಪಿಯನ್ ಜೇನು ನೊಣಗಳು ಮಾತ್ರ ಸಾಕಣೆಗೆ ಯೋಗ್ಯವಾಗಿವೆ.
ಜೇನು ಕೃಷಿ ಪ್ರಾರಂಭಿಸುವುದು ಹೇಗೆ?:
ಜೇನು ಕುಟುಂಬವನ್ನು ಇರಿಸಿರುವ ಸ್ಥಳದ ಒಂದು- ಒಂದೂವರೆ ಕಿ.ಮೀ.ಸುತ್ತಳತೆಯಲ್ಲಿ ಜೇನುನೊಣಗಳಿಗೆ ಆಹಾರವನ್ನು ಒದಗಿಸಬಲ್ಲ ಸಸ್ಯ ಸಂಪತ್ತಿರುವಂತಹ ಯಾವುದೇ ಸ್ಥಳ ಜೇನು ಕೃಕ್ಷಿಗೆ ಸೂಕ್ತವಾಗಿರುತ್ತದೆ. ಜೇನು ಕೃಷಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಸಲಕರಣೆಗಳು: ಜೇನುಪೆಟ್ಟಿಗೆ, ರಾಣಿ ತಡೆಗೇಟು,ಹೊಗೆತಿದಿ,ಮುಖಪರದೆ,ಹೈವ್ ಟೂಲ್ ಹಾಗೂ ಜೇನುತುಪ್ಪ ತೆಗೆಯುವ ಯಂತ್ರ. ಜೇನು ನೊಣಗಳ ಚಟುವಟಿಕೆಯನ್ನು ಗಮನಿಸಿ ಅವುಗಳ ಸ್ವಾಭಾವಿಕ ವಾಸ ಸ್ಥಾನವನ್ನು ಪತ್ತೆ ಹಚ್ಚಿ ಅಲ್ಲಿಂದ
ಎರಿಗಳನ್ನು ಒಂದೊಂದಾಗಿ ಹೊರತೆಗೆದು,ಪೆಟ್ಟಿಗೆಯ ಚೌಕಟ್ಟಿಗೆ ಸೂಕ್ತವಾಗಿ ಹೊಂದುವಂತೆ ಕತ್ತರಿಸಿ, ಬಾಳೆನಾರಿನಿಂದ ಕಟ್ಟಿ ಪೆಟ್ಟಿಗೆಯಲ್ಲಿರಿಸಬೇಕು.ಹೊಸ ಪರಿಸರಕ್ಕೆ ಕುಟುಂಬವು ಹೊಂದಿಕೊಳ್ಳುವವರೆಗೆ ಅದಕ್ಕೆ ಸಕ್ಕರೆ ಪಾಕವನ್ನು ಕೊಡುತ್ತಿರಬೇಕು.

ಜೇನು ಕುಟುಂಬದ ನಿರ್ವಹಣೆ:
News Belgaum-ಜೇನುಕೃಷಿ ಕುರಿತು ರೈತರಿಗೆ ಮಾಹಿತಿ 1ಜೇನು ಕುಟುಂಬಗಳನ್ನು ವಾರಕ್ಕೊಮ್ಮೆ ಪರೀಕ್ಷಿಸುತ್ತಿದ್ದು,ಅಡಿ ಹಲಗೆಯನ್ನು 10-12 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಪಟ್ಟಿಗೆಯು(ಸಂಸಾರ ಕೋಣೆ) ಸಂಪೂರ್ಣ ತುಂಬಿದಾಗ,ಮೇಲುಭಾಗ(ತುಪ್ಪದ ಕೋಣೆ)ಯನ್ನು ಇರಿಸಬೇಕು. ಜೇನುಕೋಣೆಯಲ್ಲಿ ಕನಿಷ್ಠ ಶೇ.70 ರಷ್ಟು ಕಣಗಳು,ಜೇನಿನಿಂದ ಭರ್ತಿಯಾಗಿ ಮುಚ್ಚಲ್ಪಟ್ಟಾಗ, ಅದು ಜೇನು ತೆಗೆಯಲು ಸಕಾಲವಾಗಿರುತ್ತದೆ.
ಜೇನು ಕೋಣೆಯ ಎರಿಗಳನ್ನು ಒಂದೊಂದಾಗಿ ಹೊರತೆಗೆದು ಹುಳುಗಳನ್ನು ಕೊಡವಿ ಕಣಗಳ ಮುಚ್ಚಳವನ್ನು ಹರಿತವಾದ ಚಾಕುವಿನಿಂದ ತೆಗೆದು,ಜೇನು ತೆಗೆಯುವ ಯಂತ್ರದೊಳಗೆ ಎರಿಯನ್ನು ಇಟ್ಟು, ತುಪ್ಪವನ್ನು ಬೇರ್ಪಡಿಸಿಕೊಳ್ಳಬೇಕು. ಸುಗ್ಗಿಯ ಕಾಲದಲ್ಲಿ 15-20 ದಿನಗಳಿಗೊಮ್ಮೆ ಈ ರೀತಿ ತುಪ್ಪವನ್ನು ತೆಗೆಯಬಹುದು.

ಜೇನು ನೊಣಗಳಿಗೆ ಬರುವ ಕೀಟ ಹಾಗೂ ರೋಗಗಳು: ಮೇಣದ ಪತಂಗ, ಇರುವೆಗಳು, ನುಸಿಗಳು(ಕೀಟಗಳು) ಹಾಗೂ ಥೈಸಾಕ್ ಬ್ರೂಡ್ ನಂಜು ರೋಗ.
ಇಳುವರಿ ಮತ್ತು ಜೇನು ಕೃಷಿ ಆರ್ಥಿಕತೆ:
ಪ್ರತಿ ಕುಟುಂಬದಿಂದ ಜೇನಿನ ಇಳುವರಿ 8-25 ಕಿ. ಗ್ರಾಂ. ತುಡುವೆ ಜೇನಿನಿಂದ ಹಾಗೂ 30-35 ಕಿ.ಗ್ರಾಂ. ಯುರೋಪಿಯನ್ ಜೇನಿನಿಂದ ದೊರೆಯುತ್ತದೆ. ಮೊದಲನೆಯ ವರ್ಷ ಸುಮಾರು 800-900 ರೂ. ಖರ್ಚಾಗಿ ಮುಂಬರುವ ವರ್ಷಗಳಲ್ಲಿ 70-80 ರೂ. ಮಾತ್ರ ಖರ್ಚಾಗುತ್ತದೆ. ಪ್ರತಿ ವರ್ಷ 800-2000 ರ ವರೆಗೆ ನಿವ್ವಳ ಆದಾಯವನ್ನು ಪಡೆಯಬಹುದು.
ಜೇನು ಕೃಷಿಯಿಂದ ರೈತರಿಗಾಗುವ ಲಾಭ:
ಜೇನು ನೊಣಗಳು ಪರಾಗಸ್ಪರ್ಶದ ಮೂಲಕ ಹಲವಾರು ಬೆಳೆಗಳಲ್ಲಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣರಾಗಿ,ಪರೋಕ್ಷವಾಗಿ ರೈತರ ಆದಾಯವನ್ನು ಹೆಚ್ಚಿಸುತ್ತವೆ. ಜೇನು ನೊಣಗಳಿಂದಾಗಿ ಇಳುವರಿಯಲ್ಲಿ ಶೇ. 20-100 ರವರೆಗೆ ಹೆಚ್ಚಾಗುವುದು ದೃಢಪಟ್ಟಿದೆ.

Leave A Reply

 Click this button or press Ctrl+G to toggle between Kannada and English

Your email address will not be published.