ಉತ್ತಮ ಸಮಾಜಕ್ಕಾಗಿ

ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ

Innovative protests by plaguing the plate

0

ಬೆಳಗಾವಿ: (tarun kranti) ಬಡವರ ವಲಸೆ ತಪ್ಪಿಸಿ ಅವರ ಜೀವನಕ್ಕೆ ಆಧಾರವಾಗಲು ಕೆಲಸದ ಖಾತರಿ ನೀಡಲಾಗುತ್ತಿದೆ ಎಂದು ಸರಕಾರ ಎಷ್ಟೇ ಬೆನ್ನು ತಟ್ಟಿಕೊಂಡರೂ ಇತ್ತ ಮಹಿಳೆಯರು ತಮಗೆ ಕೆಲಸ ಸಿಗುತ್ತಿಲ್ಲ ಎಂದು ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ ಇಂದು ನಡೆಸಿದರು. ಜಿಲ್ಲೆಯ ಹಲವಾರು ತಾಲೂಕುಗಳಿಂದ ಆಗಮಿಸಿದ ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಹೊಸ ಪ್ರತಿಭಟನೆಯಿಂದ ಗಮನ ಸೆಳೆದರು. ಕೇಂದ್ರ ಸರಕಾರದ 100 ದಿನಗಳ ಉದ್ಯೋಗ ಗ್ಯಾರಂಟಿ ಗ್ರಾಮೀಣ ಜನತೆಗೆ ಸಾಕಾಗುತ್ತಿಲ್ಲ. ರಾಜ್ಯ ಸರಕಾರ ಸಹ 100 ದಿನಗಳ ಕೆಲಸ ಕೊಟ್ಟು, ರೈತರ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ರೂಪುರೇಷೆ ಉದ್ಯೋಗ ಖಾತ್ರಿಯಲ್ಲಿ ಅಳವಡಿಸಬೇಕೆಂದು ಸಾವಿರಾರು ಕಾರ್ಯಕರ್ತರು ಜಿಪಂ. ಕಚೇರಿ ಎದುರು ಸುದೀರ್ಘ ಪ್ರತಿಭಟನೆ ನಡೆಸಿದರು.

 

Leave A Reply

 Click this button or press Ctrl+G to toggle between Kannada and English

Your email address will not be published.