ಉತ್ತಮ ಸಮಾಜಕ್ಕಾಗಿ

ಸಹಾಯಧನಕ್ಕಾಗಿ ಅರ್ಜಿ ಆಹ್ವಾಣ

0

ಬೆಳಗಾವಿ:Belgaum News ಪ್ರವಾಸೋದ್ಯಮ ಇಲಾಖೆಯಿಂದ 2017-18 ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ತಾಲೂಕುವಾರು ಗುರಿ ಹಂಚಿಕೆ ಅನ್ವಯ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಳಗಾವಿ ಇವರ ಕಛೇರಿಯಲ್ಲಿ ಪ್ರಕಟಿಸಲಾಗಿದೆ.
ಪರಿಶಿಷ್ಟ ಜಾತಿ ಭೌತಿಕ ಗುರಿ ಬಾಕಿ ಉಳಿದಿರುವ ಗೋಕಾಕ, ಹುಕ್ಕೇರಿ, ರಾಮದುರ್ಗ, ಮತ್ತು ಅಥಣಿ ತಾಲೂಕು, ಪರಿಶಿಷ್ಟ ಪಂಗಡದ ಭೌತಿಕ ಗುರಿ ಬಾಕಿ ಉಳಿದಿರುವ ಬೆಳಗಾವಿ, ಹುಕ್ಕೇರಿ, ಸವದತ್ತಿ, ಬೈಲಹೊಂಗಲ, ಖಾನಾಪೂರ, ಅಥಣಿ ಹಾಗೂ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ಯೋಜನೆಯಡಿ ಭೌತಿಕ ಗುರಿ ಬಾಕಿ ಉಳಿದಿರುವ ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ, ಖಾನಾಪೂರ ಮತು ್ತಅಥಣಿ ತಾಲೂಕುಗಳಲ್ಲಿ ಮಾತ್ರ ಭೌತಿಕ ಗುರಿ ಉಳಿಕೆಯಾಗಿರುತ್ತದೆ.
ಸಹಾಯಧನಕ್ಕಾಗಿ ಅರ್ಜಿ ಆಹ್ವಾಣ- Tarun krantiಈ ತಾಲೂಕುಗಳ ಗುರಿಯನ್ನು ಸಾಧಿಸುವ ಸಲುವಾಗಿ ಲಘು ವಾಹನ ಚಾಲನಾ ಪರವಾನಗಿ ಹಾಗೂ ಟೂರಿಸ್ಟ ಟ್ಯಾಕ್ಸಿ ಬ್ಯಾಡ್ಜ್ ಹೊಂದಿದ್ದು 20 ರಿಂದ 40 ವರ್ಷ ವಯೋಮಿತಿಯೊಳಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರಿಗೆ ಎಸ್.ಸಿ.ಪಿ, ಟಿ.ಎಸ್.ಪಿ, ಬಿ.ಸಿ.ಎಮ್ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ-05 ಮತ್ತು ಪರಿಶಿಷ್ಟ ಪಂಗಡ-09 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗ-09 ಒಟ್ಟೂ 23 ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಖರೀದಿಗೆ ಸಹಾಯಧನ ಒದಗಿಸಿ ಪ್ರವಾಸಿ ಟ್ಯಾಕ್ಸಿ ವಾಹನಗಳನ್ನು ಖರೀದಿಸುವ ವಿಶೇಷ ಯೋಜನೆಗೆ ಆಯಾ ತಾಲೂಕಿನ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಮಾತ್ರ ದ್ವಿ-ಪ್ರತಿಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ.ಉತ್ತೀರ್ಣರಾಗಿದ್ದು 20 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಜನವರಿ 16 ರಿಂದ 31 ರೊಳಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,ಬೆಳಗಾವಿ ಕಛೇರಿಯಿಂದ ಅರ್ಜಿಯನ್ನು ಪಡೆದು ಜನವರಿ 31ರ ಸಂಜೆ 4-30 ರೊಳಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡ, ಬೆಳಗಾವಿ ಇವರಿಗೆ ದ್ವಿ-ಪ್ರತಿಯಲ್ಲಿ ಭರ್ತಿ ಮಾಡಿ ದೃಢೀಕರಿಸಿದ ದಾಖಲೆಗಳನ್ನು ಕ್ರಮವಾಗಿ ಲಗತ್ತಿಸಿ ಮುಚ್ಚಿದ ಲಕೋಟೆಯಲ್ಲಿ ಖುದ್ದಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 0831-2470879 ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ:Belgaum News    Invitation to apply for subsidy

Leave A Reply

 Click this button or press Ctrl+G to toggle between Kannada and English

Your email address will not be published.