ಉತ್ತಮ ಸಮಾಜಕ್ಕಾಗಿ

ಪ್ರತಿಭಾವಂತಿಕೆಯ ಜೊತೆಗೆ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ – ಪೂಜ್ಯಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು

It can be achieved with the talent and with the talent - Poojashree Dr. Siddarama Mahaswamis

0

ಬೆಳಗಾವಿ.(tarun kranti)ವಿದ್ಯಾರ್ಥಿಗಳಿಗೆ ಮೂಲತಃ ಪ್ರತಿಭಾವಂತಿಕೆ ಇರಲಿ ಅಥವಾ ಇಲ್ಲದಿರಲಿ, ಆದರೆ ಸತತ ಅಧ್ಯಯನ, ಪರಿಶ್ರಮದಿಂದ ಶ್ರೇóಷ್ಠ ಗುರಿಮುಟ್ಟಲು ನಿಜವಾಗಿಯೂ ಸಾಧ್ಯವಿದೆ ಎಂದು ಶಿವಬಸವನಗರದ ಶ್ರೀ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವÀ ಸಮಾರಂಭದ ಸಾನಿಧ್ಯ ವಹಿಸಿದ್ದ ಪೂಜ್ಯ ನಾಗನೂರು ಶ್ರೀ ರುದ್ರಾಕ್ಷಿಮಠದ ಪರಮ ಪೂಜ್ಯರಾದ ಡಾ. ಸಿದ್ಧರಾಮ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು, ಮುಂದುವರೆಸುತ್ತಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕಾಡಾ ಇಲಾಖೆಯ ಆಡಳಿತಾಧಿಕಾರಿಗಳಾದ ಮಾನ್ಯ ಶ್ರೀ ಬಿ. ವ್ಹಿ. ಪಾಟೀಲ ಮತ್ತು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಹೆಚ್ಚುವರಿ ಆಯುಕ್ತರಾದ ಶ್ರೀಮತಿ ಗಂಗೂಬಾಯಿ ಮಾನಕರವರು ಅವರೇ ನಿದರ್ಶನ ಮತ್ತು ಅವರು ಸಾಧಿಸಿದ ಗುರಿ ನಮ್ಮ ದಿನಮಾನದ ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯವಾಗಿದೆ ಎಂದರು.ಪ್ರತಿಭಾವಂತಿಕೆಯ ಜೊತೆಗೆ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ -  ಪೂಜ್ಯಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು- Tarun kranti 1
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಗಳ ಆಡಳಿತಾಧಿಕಾರಿಗಳಾದ ಮಾನ್ಯಶ್ರೀ ಬಿ. ವ್ಹಿ. ಪಾಟೀಲ, ಆಯ್.ಎಫ್.ಎಸ್. ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ, ಹೆಚ್ಚುವರಿ ಆಯುಕ್ತರಾದ ಶ್ರೀಮತಿ. ಗಂಗೂಬಾಯಿ ಮಾನಕರ, ಕೆ.ಎ.ಎಸ್. (ಹಿರಿಯ ಶ್ರೇಣಿ) ಇವರು ಆಗಮಿಸಿ, ನಾಗನೂರು ಶ್ರೀಗಳವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೊತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನಮ್ಮ ಪುಣ್ಯ, ಸೌಭಾಗ್ಯ ಎನ್ನುತ್ತಾ, “ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಂಡು ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಶ್ರೀ ಸಿದ್ಧರಾಮೇಶ್ವರ ಮಾರ್ಗದರ್ಶನ ಕೇಂದ್ರವೆಂದರೆ ಅದು ಸ್ಪರ್ಧಾತ್ಮಕ ಪರೀಕ್ಷೆಯ ಸರ್ವ ಸಿದ್ದಿ ಪಡೆಯುವ ಸಂಸ್ಥೆ ಎಂದರು.
ಈ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್‍ರಾದ ಪ್ರೊ. ಎಮ್.ಆರ್. ಉಳ್ಳೇಗಡ್ಡಿ ಅವರು ಈ ಸಮಾರಂಭ ಅಧ್ಯಕ್ಷತೆ ಸ್ಥಾನ ವಹಿಸಿ “ ದೃಢ ನಿರ್ಧಾರದಿಂದ, ಛಲದಿಂದ ಅಧ್ಯಯನ ಮಾಡಿದರೆ,ಈ ಮುಖ್ಯಅತಿಥಿಗಳಿಬ್ಬರಂತೆ ಅಧಿಕಾರಿಗಳಾಗಿ ಹೊರಹೊಮ್ಮುತ್ತೀರಿ ಎಂದರು”.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳೂ,ವಿಶ್ರಾಂತ ಪ್ರಾಚಾರ್ಯರೂ ಆದ ಪ್ರೊ. ಬಿ.ಎಸ್. ತೋರಣಗಟ್ಟಿ ಅವರು ಉಪಸ್ಥಿತರಿದ್ದು, ಪೂಜ್ಯರಿಗೆ ಮಾಲಾರ್ಪಣೆ ಮಾಡಿದರು.
ನಾಗನೂರ ಶ್ರೀಗಳವರ ಶಿಕ್ಷಣ ಸಂಸ್ಥೆ ಹಾಗೂ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದವರಿಂದ ಹಾಗೂ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಶ್ರೀ ಆರ್. ಬಿ. ಪಾಟೀಲರವರು ಪ್ರತಿಭಾವಂತೆ ವಿದ್ಯಾರ್ಥಿಗಳಿಗೆ, ಶಿಷ್ಯವೇತನ, ಪ್ರೊತ್ಸಾಹದಾಯಕ ನಗದು ಬಹುಮಾನ ನೀಡಿದರು. ಪ್ರಾಚಾರ್ಯರಾದ ಶ್ರೀಮತಿ. ಎಸ್. ಜಿ. ಇಚ್ಚಂಗಿಮಠ ಅವರು ಪ್ರಾಸ್ತಾವಿಕ ಮತ್ತು ಸ್ವಾಗತಪರ ಮಾತುಗಳನ್ನಾಡಿದರು. ಶ್ರೀ ಎ. ಕೆ. ಪಾಟೀಲವರು ವರದಿ ವಾಚನ ಮಾಡಿದರು. ಶ್ರೀದೇವಿ ಗುಮ್ಮಗೋಳ ಅತಿಥಿ ಪರಿಚಯ, ಶ್ರೀಮತಿ. ಜಯಶ್ರೀ ಕೆಂಗೇರಿಯವರು ನಿರೂಪಣೆ, ಪ್ರೊ. ಸಿದ್ಧರಾಮ ರೆಡ್ಡಿ ಗ್ರಂಥ ಪುಷ್ಪಾರ್ಪಣೆ ಮಾಡಿದರು. ಕುಮಾರಿ. ಶೀತಲ ಯಾದವ ಅವರು ವಂದನಾರ್ಪನೆ ಮಾಡಿದರು. ರಾಷ್ಟ್ರಮಟ್ಟದ ಕುಸ್ತಿ ಮತ್ತು ಜ್ಯೂಡೋ ಪಟುಗಳನ್ನು ಪೂಜ್ಯಶ್ರೀಗಳು ಸನ್ಮಾನಿಸಿದರು.It can be achieved with the talent and with the talent – Poojashree Dr. Siddarama Mahaswamis.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.