ಉತ್ತಮ ಸಮಾಜಕ್ಕಾಗಿ

ಅತೀ ಹೆಚ್ಚು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಸಿಇಒ

It is our duty to congratulate the teachers who have worked hard to get the most outcome

0
ಅತೀ ಹೆಚ್ಚು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಸಿಇಒ- Tarun kranti

ಬೆಳಗಾವಿ:(tarun kranti) ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿ ಅತೀ ಹೆಚ್ಚು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಎಂದು ಜಿಲ್ಲಾ ಪಂಚಾಯತ ಸಿಇಒ ರಾಮಚಂದ್ರನ್ ರವರು ಹೇಳಿದರು.
 ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಏರ್ಪಡಿಸಿದ ಮಾರ್ಚ್ 2017ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರುಗಳಿಗೆ ಪ್ರಶಂಸೆ ಪತ್ರ ನೀಡಿ ಸನ್ಮಾನಿಸಿ ಅವರು ಮಾತನಾಡಿದರು. ಶಿಕ್ಷಕರನ್ನು ಸನ್ಮಾನಿಸಲು ಸರ್ಕಾರವು ನಮಗೆ ಹೇಳಿಲ್ಲ. ಆದರೆ ಬೆಳಗಾವಿ ಜಿಲ್ಲಾ ಪಂಚಾಯತಿ ಹಾಗೂ ಸಾರ್ವನಿಕ ಶಿಕ್ಷಣ ಇಲಾಖೆಯವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಅತೀ ಹೆಚ್ಚು ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಸಿಇಒ- Tarun kranti 1
 ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿಯೂ ಚಿಕ್ಕೋಡಿಗಿಂತ ಹಿಂದುಳಿಯಲು ಕಾರಣವೇನು? ಎಂಬುದನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು.
  ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಹಾಗೂ ಪ್ರೇರೇಪಿಸಿದ 287 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಡಿಡಿಪಿಆಯ್ ಎ.ಬಿ.ಪುಂಡಲೀಕ,ಬಿಇಒ ಪ್ರಭಾವತಿ ಪಾಟೀಲ,ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಮೊದಲಾದ ಅಧಿಕಾರಿಗಳು ಶಿಕ್ಷಕವೃಂದದವರು ಉಪಸ್ಥಿತರಿದ್ದರು.
  ಬಿಇಒ ಎಮ್.ಆರ್.ಅಲಸಿ ಸ್ವಾಗತಿಸಿದರು.​ಶಿಕ್ಷಕ  ರಮೇಶ ಗೋಣಿ ನಿರೂಪಿಸಿದರು.It is our duty to congratulate the teachers who have worked hard to get the most outcome

Leave A Reply

 Click this button or press Ctrl+G to toggle between Kannada and English

Your email address will not be published.