ಉತ್ತಮ ಸಮಾಜಕ್ಕಾಗಿ

ಜ. 27 ರಿಂದ ಗೃಹರಕ್ಷಕದಳ ಸದಸ್ಯ ಸ್ಥಾನಗಳಿಗೆ ಸಂದರ್ಶನ

J. Interview for Homestead member positions since 27th

0

ಬೆಳಗಾವಿ:(tarun kranti) ಬೆಳಗಾವಿ ಜಿಲ್ಲೆಯ ಗೃಹರಕ್ಷಕ ದಳದ ವಿವಿಧ ಘಟಕ ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಒಟ್ಟು 245 ಸ್ವಯಂ ಸೇವಕ ಗೃಹರಕ್ಷಕ ಸದಸ್ಯ ಸ್ಥಾನಗಳಿಗೆ ನೋಂದಣಿ ಮಾಡಿಕೊಳ್ಳಲು ದೈಹಿಕ ಪರೀಕ್ಷೆ ಮತ್ತು ಸಂದರ್ಶನವನ್ನು 2018ರ ಜನವರಿ 27 ರಿಂದ 31 ರವರೆಗೆ ಜರುಗಿಸಲಾಗುವುದು.
ಗೃಹರಕ್ಷಕ ಸದಸ್ಯರಾಗಲು ಈಗಾಗಲೇ ಅರ್ಜಿ ಸಲ್ಲಿಸಿದ 20 ವರ್ಷ ಮೇಲ್ಪಟ್ಟ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಅಭ್ಯರ್ಥಿಗಳು ಮಾತ್ರ ಮೇಲ್ಕಂಡ ದಿನಾಂಕಗಳಂದು ಬೆಳಿಗ್ಗೆ 8-30ಕ್ಕೆ ಬೆಳಗಾವಿಯ ಪೊಲೀಸ್ ಭವನದ ಎದುರುಗಡೆ ಇರುವ ಪೊಲೀಸ್ ಪರೇಡ್ ಮೈದಾನದಲ್ಲಿ ಅರ್ಜಿಯೊಂದಿಗೆ ಲಗತ್ತಿಸಿದ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಜಿಲ್ಲಾ ಗೃಹರಕ್ಷಕದಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0831-2420451 ಗೆ ಸಂಪರ್ಕಿಸಬಹುದಾಗಿದೆ.

J. Interview for Homestead member positions since 27th

Leave A Reply

 Click this button or press Ctrl+G to toggle between Kannada and English

Your email address will not be published.