ಉತ್ತಮ ಸಮಾಜಕ್ಕಾಗಿ

ಜ. 12-13 ರಂದು ಸಂಗೊಳ್ಳಿ ರಾಯಣ್ಣ ಉತ್ಸವ

0

ಬೆಳಗಾವಿ:tarunkrantiಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಜನೇವರಿ 12 ಹಾಗೂ 13 ರಂದು ಎರಡು ದಿನಗಳ ಕಾಲ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದು, ವಿವಿಧ ವೈವಿದ್ಯಮಯ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.
ರಾಜ್ಯ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಜನೇವರಿ 12 ರಂದು ಸಂಜೆ 7 ಗಂಟೆಗೆ ಸಂಗೊಳ್ಳಿ ಪ್ರೌಢಶಾಲೆ ಆವರಣದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಈ ಉತ್ಸವವನ್ನು ಉದ್ಘಾಟಿಸುವರು.
ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳಾದ ಗಣೇಶ ಹುಕ್ಕೇರಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು.
ಬೈಲಹೊಂಗಲ ಶಾಸಕ ಡಾ|| ವಿಶ್ವನಾಥ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಗಣ್ಯರು ಹಾಗೂ ಇತರ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಜನೇವರಿ 12 ರಂದು ಬೆಳಿಗ್ಗೆ 6 ಗಂಟೆಗೆ ಸಂಗೊಳ್ಳಿ ರಾಯಣ್ಣ ದೇವಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತ:ಕಾಲದ ಪೂಜೆ ನಡೆಯಲಿದೆ. ಸಂಗೊಳ್ಳಿಯ ಶ್ರೀ. ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಸಂಗೊಳ್ಳಿ ಅರ್ಚಕರಾದ ಶ್ರೀ ಬಸವರಾಜ ಡೊಳ್ಳಿನ ಅರ್ಚನೆ ಮಾಡುವರು.

ರಾಜ್ಯ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಬೆಳಿಗ್ಗೆ 10 ಗಂಟೆಗೆ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿ, ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾರ್ಲಾಪಣೆ ಮಾಡಲಿದ್ದಾರೆ. ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳಾದ ಗಣೇಶ ಹುಕ್ಕೇರಿ ಅವರು ಶೂರ ಸಂಗೊಳ್ಳಿ ರಾಯಣ್ಣ ಜ್ಯೋತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ರಥ ಯಾತ್ರೆ ಬರಮಾಡಿಕೊಳ್ಳುವರು.
ಅಂದು ಬೆಳಿಗ್ಗೆ 10-30 ಗಂಟೆಗೆ ಸಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ ಅವರು ಜಾನಪದ ಕಲಾವಾಹಿನಿ ಉದ್ಘಾಟನೆ ನೆರವೆರಿಸುವರು. ಕಿತ್ತೂರು ಮತಕ್ಷೇತ್ರದ ಶಾಸಕರಾದ ಡಿ.ಬಿ. ಇನಾಮದಾರ ಅವರು ನೇತೃತ್ವ ವಹಿಸುವರು.
ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಸಂಸದರಾದ ಸುರೇಶ ಅಂಗಡಿ ಅವರು ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಬೈಲಹೊಂಗಲ ತಾಲೂಕು ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶೈಲಾ ಸಿದ್ರಾಮಣಿ ಅವರು ವೀರರ ಸ್ಮರಣೆಗಾಗಿ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಈ ಉತ್ಸವದ ಅಂಗವಾಗಿ ಜನೇವರಿ 12 ರಂದು ಸಂಜೆ 5 ರಿಂದ ರಾತ್ರಿ 12-30 ಗಂಟೆಯವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನೇವರಿ 13 ರಂದು ಮಧ್ಯಾಹ್ನ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ “ಸಂಗೊಳ್ಳಿ ರಾಯಣ್ಣನ ಚಿಂತನ -ಮಂಥನ- ಸ್ಪಂದನ” ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ರಂಗರಾಜ ವನದುರ್ಗ ಅವರು ಉದ್ಘಾಟಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಅಧ್ಯಕ್ಷರಾದ ಡಾ. ಎಸ್. ಎಂ. ಗಂಗಾಧರಯ್ಯಾ ಅವರು ಅಧ್ಯಕ್ಷತೆ ವಹಿಸುವರು.
ಬೆಂಗಳೂರು ಸಂಶೋಧಕರಾದ ಡಾ. ಸಂತೋಷ ಹಾನಗಲ ಅವರು ಆಶಯ ನುಡಿಗಳನ್ನಾಡುವರು. ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರಥಮ ಕಾಲೇಜು ಉಪನ್ಯಾಸಕಾರದ ಡಾ. ಹನುಮಂತ ಸಂಜಿವಣ್ಣನವರ ಅವರು “ಯುವಜನತೆಗೆ ಸ್ಪೂರ್ತಿ ದಾಯಕ ಸಂಗೊಳ್ಳಿ ರಾಯಣ್ಣ ” ವಿಷಯವಾಗಿ ಮಾತನಾಡುವರು.
ಸಂಗೊಳ್ಳಿಯ ಸಂಶೋಧಕರಾದ ಬಸವರಾಜ ಕಮತ ಅವರು “ಸಂಗೊಳ್ಳಿ ಉತ್ಸವದ ಪರಿಕಲ್ಪನೆ” ವಿಷಯವಾಗಿ ಮಾತನಾಡಿದರು. ಈ ಮೇಲಿನ ಎರಡು ಚಿಂತನೆಗಳ ಪೈಕಿ ಒಂದು ವಿಷಯದ ಕುರಿತು ಐದು ಜನ ಯುವಕರು ಎರಡು ನಿಮಿಷ ಮಾತನಾಡಲು ಅವಕಾಶವಿದೆ.
ಬೆಳಗಾವಿ ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯ.ರು. ಪಾಟೀಲ ಅವರು ಕಾರ್ಯಕ್ರಮ ಸಂಯೋಜಕರಾಗಿ ಭಾಗವಹಿಸುವರು.
ಜನವರಿ 13 ರಂದು ಬೆಳಿಗ್ಗೆ 11 ಗಂಟೆಗೆ ಸಂಗೊಳ್ಳಿಯಲ್ಲಿ ಕಬಡ್ಡಿ ಸ್ಪರ್ಧೆಯನ್ನು ಸಂಗೊಳ್ಳಿ ತಾಲೂಕಾ ಪಂಚಾಯತ್ ಸದಸ್ಯರಾದ ಶ್ರೀ. ಗೌಸಸಾಬ ಬುಡ್ಡೆಮುಲ್ಲಾ ಅವರು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಸಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಯಲ್ಲವ್ವಾ ಲೋ. ಹಳೇಮನಿ ಅವರು ಮಲ್ಲಕಂಭ ಸ್ಪರ್ಧೆಯನ್ನು ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ಬೈಲಹೊಂಗಲ ಶಾಸಕಾರದ ಡಾ. ವಿಶ್ವನಾಥ ಆಯ್. ಪಾಟೀಲ ಅವರು ಜಂಗಿ ನೀಖಾಲಿ ಕುಸ್ತಿ ಉದ್ಘಾಟಿಸುವರು.
ಅಂದು ಸಂಜೆ 7 ಗಂಟೆಗೆ ಸಂಗೊಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಿತ್ತೂರು ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶÀ ಜಾರಕಿಹೊಳಿ ಘನ ಉಪಸ್ಥಿತರಿರುವರು. ಗೋಕಾಕ ಖ್ಯಾತ ಜಾನಪದ ತಜ್ಞರು ಡಾ. ಸಿ.ಕೆ. ನಾವಲಗಿ ಅವರು ಸಮಾರೋಪ ನುಡಿಗಳನ್ನಾಡುವರು. ಬೈಲಹೊಂಗಲ ಶಾಸಕ ಡಾ|| ವಿಶ್ವನಾಥ.ಐ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಿತ್ತೂರ ಶಾಸಕ ಡಿ.ಬಿ. ಇನಾಮದಾರ ಅವರು ಅತಿಥಿಗಳಾಗಿ ಉಪಸ್ಥಿತರಿರುವರು.

Leave A Reply

 Click this button or press Ctrl+G to toggle between Kannada and English

Your email address will not be published.