ಉತ್ತಮ ಸಮಾಜಕ್ಕಾಗಿ

ಜಯಂತಿ ಅನುದಾನ ಸಿಎಂ ಪರಿಹಾರನಿಧಿಗೆ ಅರ್ಪಣೆ ಶ್ರೀ ಕೃಷ್ಣ ಜಯಂತಿ: ಸರಳ ಆಚರಣೆ

news belagavi

0
ಬೆಳಗಾವಿ,(news belgaum)  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ (ಸೆ.2) ಏರ್ಪಡಿಸಲಾಗಿದ್ದ ಜಯಂತ್ಯುತ್ಸವ ಸಮಾರಂಭದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಅವರು ಪೂಜೆ ಸಲ್ಲಿಸಿದರು.
ಜಯಂತಿ ಅನುದಾನ ಪರಿಹಾರ ನಿಧಿಗೆ:
News Belgaum-ಜಯಂತಿ ಅನುದಾನ ಸಿಎಂ ಪರಿಹಾರನಿಧಿಗೆ ಅರ್ಪಣೆ ಶ್ರೀ ಕೃಷ್ಣ ಜಯಂತಿ: ಸರಳ ಆಚರಣೆಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹಣಬರ ಸಂಘದ ಅಧ್ಯಕ್ಷ ಡಾ.ಅರವಿಂದ ತೇಣಗಿ ಅವರು, ಪ್ರಕೃತಿ ವಿಕೋಪದಿಂದ ಕೊಡುಗು ಜಿಲ್ಲೆಯ ಜನರು ಸಂಕಷ್ಟದಲ್ಲಿ ಇರುವುದರಿಂದ ಈ ಬಾರಿ ಶ್ರೀ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ.
ಜಯಂತಿ ಆಚರಣೆಗೆ ಸರ್ಕಾರದಿಂದ ಬೆಳಗಾವಿ ಜಿಲ್ಲೆಗೆ ಬಿಡುಗಡೆ ಆಗುವ ಒಟ್ಟು  3 ಲಕ್ಷ ರೂಪಾಯಿ ಅನುದಾನವನ್ನು ಕೊಡುಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಂತ್ರಸ್ತರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಸಮಾಜದ ಜನರು ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಆದರ್ಶರಾಗಿದ್ದಾರೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ತಹಶೀಲ್ದಾರ ಮಂಜುಳಾ ನಾಯಕ, ಹಣಬರ ಸಂಘದ ಕಾರ್ಯದರ್ಶಿ ರವಿಶಾಸ್ತ್ರಿ, ಸಮಾಜದ ಮುಖಂಡ ಬಿ.ಆರ್.ಸಂಗಪ್ಪಗೋಳ, ಬಿ.ಎಲ್.ಪಾಟೀಲ, ಸಂಜೀವ ಹಮ್ಮಣ್ಣನವರ,  ತಿಪ್ಪಣ್ಣ ಸನದಿ, ಎಂ.ಪಾಟೀಲ, ಆರ್.ಎನ್.ಶಾಸ್ತ್ರಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ್ ಕರಿಶಂಕರಿ ಸ್ವಾಗತಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.